Advertisement

ನಗರ ಸುಂದರವಾಗಿಡಲು 10ಸಾವಿರ ಕೋಟಿ ಬಿಡುಗಡೆ

12:42 PM Sep 26, 2018 | |

ಯಲಹಂಕ: ನಗರದ ಸ್ಲಂಗಳು ಸೇರಿದಂತೆ ಬೆಂಗಳೂರನ್ನು ಸುಂದರವಾಗಿಡಲು 10ಸಾವಿರ ಕೋಟಿ ಬಿಬಿಎಂಪಿಗೆ ಬಿಡುಗಡೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್‌ ಹೇಳಿದರು.

Advertisement

ಬೃಹತ್‌ ಬೆಂಗಳೂರು  ಮಹಾನಗರ ಪಾಲಿಕೆ ಯಲಹಂಕ ವಲಯದ ಯಲಹಂಕ ಉಪನಗರ ವಾರ್ಡ್‌-4ರ ವ್ಯಾಪ್ತಿಯ ಡಾ. ಬಿ.ಆರ್‌. ಅಂಬೇಡ್ಕರ್‌ ನಗರದಲ್ಲಿ 259ದಲಿತ ಕುಟುಂಬಗಳಿಗೆ ನಿವೇಶನದ ಕ್ರಯಪತ್ರಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ನಗರದ ಸ್ಲಮ್‌ಗಳ ಅಭಿವೃದ್ಧಿ, ರಸ್ತೆ, ಮೂಲಭೂತ ಸೌಕರ್ಯಗಳಿಗೆ ಬಿಬಿಎಂಪಿಗೆ ಅನುದಾನ ನೀಡಿದೆ.

ಈ ಹಣವನ್ನು ಕಾರ್ಪೋರೆಟರ್‌ಗಳು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕೆಂದು ಮನವಿ ಮಾಡಿದರು. ಬೆಂಗಳೂರು ಅಭಿವೃದ್ಧಿª ದಾರಿಯಲ್ಲಿ ಹೊಸ ಪ್ರಯೋಗ ಮಾಡಲು ಸರ್ಕಾರ ಮುಂದಾಗಿದ್ದು ಫ್ಲೈಓವರ್‌ಗಳು ಸೇರಿದಂತೆ ಅನೇಕ ಅಭಿವೃದ್ಧಿª ಕಾರ್ಯಗಳನ್ನು ಕೈಗೊಂಡಿದೆ.ಎಂದ ಅವರು ಯಲಹಂಕದ ಅಂಬೇಡ್ಕರ್‌ ನಗರದಲ್ಲಿ ಕಾವೇರಿ ನೀರು ಸೌಲಭ್ಯ ಕಲ್ಪಿಸಲು 32ಲಕ್ಷ ರೂ. ಅನುದಾನವನ್ನು  ನೀಡಿದೆ ಎಂದು ಹೇಳಿದರು.

ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ ಬಿಬಿಎಂಪಿ ವ್ಯಾಪ್ತಿಯ ಸ್ಲಮ್‌ಗಳಲ್ಲಿ ಒಂಟಿ ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಅಗತ್ಯ ಅನುದಾನ ನೀಡಿ ಎಲ್ಲಾ ಬಡವರು ಸೂರು ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ಸಂಸದ ವೀರಪ್ಪ ಮೊಯಿಲಿ, ಡಿಎಸ್‌.ಎಸ್‌. ಮುಖಂಡ ಮಾರಪ್ಪ ಬಿಬಿಎಂಪಿ ವಾರ್ಡ್‌ -4ರಸದಸ್ಯ ಎಂ.ಸತೀಶ್‌, ನೇತ್ರ ಪಲ್ಲವಿ, ಪದ್ಮಾವತಿ ಮತ್ತಿತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next