Advertisement

ಆಲಯ-ಬಯಲು ಪುಸ್ತಕ ಬಿಡುಗಡೆ

12:49 PM Apr 23, 2018 | |

ಬೆಂಗಳೂರು: ರಾತ್ರಿ ಹೊತ್ತು ರಾಜಕಾರಣಿಗಳನ್ನು ಭೇಟಿ ಮಾಡಿ, ಹಗಲು ಹೊತ್ತು ಶಾಂತಿ ಮಂತ್ರ ಜಪಿಸುವವರಿಂದ ಚಳವಳಿಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಹೇಳಿದ್ದಾರೆ.

Advertisement

ಬಸವನಗುಡಿಯ ನ್ಯಾಷನ್‌ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್‌ ಅವರ “ಆಲಯ-ಬಯಲು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಡಿ.ಎಸ್‌.ಎಸ್‌. ಚಳವಳಿಕೆಗೆ ವೈಚಾರಿಕ ನೆಲಗಟ್ಟನ್ನು ಹಾಕಿಕೊಟ್ಟ ಪ್ರೊ.ಜಿ.ಕೆ.ಗೋವಿಂದರಾವ್‌ ನುಡಿದಂತೆ ನಡೆದ ವ್ಯಕ್ತಿ.

ವಚನಕಾರ ಬಸವಣ್ಣನಿಗೆ ಇದ್ದ ಪ್ರಜ್ಞೆ ಇವರಲ್ಲಿದೆ. ಹೀಗಾಗಿ ಹಲವರ ಪಾಲಿಗೆ ನಿಷ್ಠುರವಾದಿಯಾಗಿ ಉಳಿದ್ದಾರೆ ಎಂದರು. ಪುಸ್ತಕದ ಕುರಿತು ಲೇಖಕ ಪ್ರೊ.ಓ.ಎಲ್‌.ನಾಗಭೂಷಣ್‌ ಮಾತನಾಡಿದದರು. ಲೇಖಕ ಪ್ರೊ.ಜಿ.ಕೆ.ಗೋವಿಂದರಾವ್‌, ಲಕ್ಷಿಶ ತೊಳ್ಪಾಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next