Advertisement

“ಗುಡಿ ಮತ್ತು ಬಂಡೆ’ಕಥಾಸಂಕಲನ ಬಿಡುಗಡೆ

12:30 AM Feb 16, 2019 | |

ಉಡುಪಿ: ಸಮಕಾಲೀನ ಸಮಾಜದಲ್ಲಿ ಇರುವ ಲೋಪದೋಷಗಳನ್ನು ಉದಾಹರಿಸಿ ಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಾಹಿತ್ಯಗಳ ರಚನೆ ಅಗತ್ಯವಾಗಿದೆ ಎಂದು ಮಾನಸಿಕತಜ್ಞ ಡಾ|ಪಿ.ವಿ.ಭಂಡಾರಿ ಕರೆ ನೀಡಿದರು.

Advertisement

ಉರಗತಜ್ಞ ಗುರುರಾಜ ಸನಿಲ್‌ ಅವರು ಬರೆದ “ಗುಡಿ ಮತ್ತು ಬಂಡೆ’ ಕಥಾ ಸಂಕಲನವನ್ನು ರವಿವಾರ ಪುತ್ತೂರು ಸಮೀಪದ ಸನಿಲ್‌ ಅವರ ಸ್ವಗೃಹದಲ್ಲಿ  ಬಿಡುಗಡೆಗೊಳಿಸಿದ ಅವರು, ಧರ್ಮದ ಹೆಸರಿನಲ್ಲಿ ಪರಿಸರ ನಾಶ, ದುರಾಶೆಯ ಹೆಸರಿನಲ್ಲಿ ಶಿಕ್ಷಣ ವ್ಯವಸ್ಥೆ ಹೀಗೆ ಸಮಾಜದಲ್ಲಿ ದೋಷಗಳು ಎಗ್ಗಿಲ್ಲದೆ ಸಾಗುತ್ತಿವೆ. ಸನಿಲ್‌ ಅವರು ಕಥೆಯ ಮೂಲಕ ಉತ್ತಮ ಸಂದೇಶಗಳನ್ನು ಕೊಡುತ್ತಿದ್ದಾರೆ ಎಂದರು. 

ಸಾಹಿತಿ, ರಂಗಕರ್ಮಿ ಗುರುರಾಜ ಮಾರ್ಪಳ್ಳಿ ಅವರು ಪುಸ್ತಕವನ್ನು ಪರಿಚಯಿಸಿ ಸನಿಲ್‌ ಅವರಿಗೆ ಉತ್ತಮ ಕಥೆಗಾರನಾಗುವ ಲಕ್ಷಣಗಳಿವೆ ಎಂದರು. ಗುರುರಾಜ ಸನಿಲ್‌ ಸ್ವಾಗತಿಸಿ ರವಿರಾಜ್‌ ಎಚ್‌.ಪಿ.  ನಿರೂಪಿಸಿದರು. ಯೋಗಸಾಧಕ ಬಾಲಕಿ ತನುಶ್ರೀ ಅವರನ್ನು ಗೌರವಿಸಲಾಯಿತು. ಸನಿಲ್‌ ಪತ್ನಿ ಗೀತಾ ಉಪಸ್ಥಿತರಿದ್ದರು. ಹಿರಿಯ ಕಲಾವಿದ ಗಂಜೀಫಾ ರಘುಪತಿ ಭಟ್‌  ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next