Advertisement

ಚಿಕ್ಕಬಳ್ಳಾಪುರ: 21 ಬಾಲ ಕಾರ್ಮಿಕರ ಬಿಡುಗಡೆ

06:04 PM Jun 12, 2021 | |

ಚಿಕ್ಕಬಳ್ಳಾಪುರ: ಇಂದಿನ ಮಕ್ಕಳೇ ರಾಷ್ಟ್ರದ ಸಂಪತ್ತು.ಅವರನ್ನು ರಕ್ಷಿಸಿ ಪೋಷಿಸುವ ಜವಾಬ್ದಾರಿ ನಮ್ಮೆಲ್ಲರಮೇಲಿದೆ. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿಸಮಾಜ ಮತ್ತು ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ.

Advertisement

ಬಡತನದಿಂದಲೋ, ಇನ್ನಿತರೆ ಕಾರಣಗಳಿಂದಮಕ್ಕಳು ಇಂದಿಗೂ ಅ ಧಿಕಾರಿಗಳ ಕಣ್ಣುತಪ್ಪಿಸಿ ಬಾಲಕಾರ್ಮಿ ಕರಾಗಿ ದುಡಿಯುತ್ತಿರುವುದು ಗೌಪ್ಯವಾಗಿಉಳಿದಿಲ್ಲ.ಕೇಂದ್ರ ಮತ್ತು ರಾಜ್ಯ ಸರ್ಕಾರ ಮಕ್ಕಳು ಶೈಕ್ಷಣಿಕವಾಗಿಅಭಿವೃದ್ಧಿ ಹೊಂದಬೇಕೆಂದು ಪೂರ್ವ ಪ್ರಾಥಮಿಕ,ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಪಡೆಯಲುಅಗತ್ಯ ಮಾರ್ಗದರ್ಶನ ಮತ್ತು ಪೊÅàತ್ಸಾಹ ನೀಡಿದರೂ ಸಮಾಜದಲ್ಲಿ ಇಂದಿಗೂ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವ ಪದ್ಧತಿ ಜೀವಂತವಾಗಿರುವುದುದೌರ್ಭಾಗ್ಯವೇ ಸರಿ.

ವಿಶೇಷ ಅಭಿಯಾನ ಅಗತ್ಯ: ಸಾಮಾನ್ಯವಾಗಿ ಜೂ.12ಬಂದ ತಕ್ಷಣ ನೆನಪು ಆಗುವುದು ವಿಶ್ವ ಬಾಲ ಕಾರ್ಮಿಕವಿರೋಧಿ ದಿನಾಚರಣೆ. ಬಾಲ್ಯಾವಸ್ಥೆ, ಕಿಶೋರಾವಾಸ್ಥೆಯ ಕಾರ್ಮಿಕ ಪದ್ಧತಿಯು ಮಕ್ಕಳನ್ನು ದೈಹಿಕ, ನೈತಿಕ,ಮಾನಸಿಕ ಹಾಗೂ ಆರ್ಥಿಕವಾಗಿ ಶೋಷಣೆಗೊಳಪಡಿಸಿ,ಅವರ ಶೈಕ್ಷಣಿಕ ಅವಕಾಶ ಹಾಗೂ ಬದುಕು ಕಟ್ಟಿಕೊಳ್ಳುವಕನಸಿಗೆ ತಡೆಯೊಡ್ಡುತ್ತಿದೆ. ಕಲಿಯುವ ವಯಸ್ಸಿನಲ್ಲಿಮಕ್ಕಳು ಶಿಕ್ಷಣದಿಂದ ದೂರ ಉಳಿದು ದುಡಿಮೆಯಲ್ಲಿತೊಡಗಿಸಿಕೊಳ್ಳುವುದು ಅತ್ಯಂತ ಕಳವಳಕಾರಿ ಆಗಿದೆ.ಶಿಕ್ಷಣ ವಂಚಿತ ಮತ್ತು ದುಡಿಮೆಯಲ್ಲಿ ತೊಡಗಿರುವ ಈಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರಲು ವಿಶೇಷಅಭಿಯಾನ ನಡೆಸಬೇಕಾಗಿದೆ.

ಬಾಲ ಕಾರ್ಮಿಕ ಪದ್ಧತಿ ಜೀವಂತ: ಬಾಲ ಕಾರ್ಮಿಕರಪದ್ಧತಿ ಕುರಿತು ಜನರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಿದರೂ ಕೃಷಿ ಚಟುವಟಿಕೆಗಳು, ಗ್ಯಾರೇಜ್‌, ಹೋಟೆಲ್‌,ಇಟ್ಟಿಗೆ, ವಿವಿಧ ಕೈಗಾರಿಕೆಗಳು ಮತ್ತಿತರ ಕಡೆ ಮಕ್ಕಳಿಂದದುಡಿಸಿ ಕೊಳ್ಳುವ ಪದ್ಧತಿಗೆ ಮಾತ್ರ ಬ್ರೇಕ್‌ ಬಿದ್ದಿಲ್ಲ.ತಾಲೂ ಕು ಮತ್ತು ಜಿಲ್ಲಾ ಮಟ್ಟದಲ್ಲಿರುವ ಅ ಧಿಕಾರಿಗಳತಂಡ ದೂರು ಬಂದ ತಕ್ಷಣ ಸ್ಪಂದಿಸಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತಿದೆ.

ಕೋವಿಡ್ನಿಂದ ಹೆಚ್ಚಳ: ಕೋವಿಡ್‌-19ನಿಂದಉದ್ಭವಿ ಸಿ ರುವ ಆರ್ಥಿಕ ಮತ್ತು ಮಾರುಕಟ್ಟೆ ಬಿಕ್ಕಟ್ಟುಮತ್ತಷ್ಟು ಬಾಲ ಕಾರ್ಮಿಕತೆಯನ್ನು ಹೆಚ್ಚಿಸಬಹುದೆಂಬಸೂಚನೆ ಯನ್ನು ಅನೇಕ ಸಂಸ್ಥೆಗಳು ನೀಡಿವೆ. ದುಡಿಯುವ ಕೈಗಳಿಗೆ ಗ್ರಾಮೀಣ ಪ್ರದೇಶದಲ್ಲಿ ನರೇಗಾಯೋಜನೆಯ ಮೂಲಕ ಉದ್ಯೋಗ ದೊರೆಯುತ್ತದೆ.ಇನ್ನೂ ನಗರ ಪ್ರದೇಶದಲ್ಲಿರುವ ಕಾರ್ಮಿಕರು ಮತ್ತುಬಡ ವರ ಪಾಡೇನು? ಕಾರ್ಮಿಕರಿಗೆ ಉದ್ಯೋಗಸಿಗಲಿಲ್ಲ ಎಂದರೇ ಅವರ ಮಕ್ಕಳು ಏನು ಮಾಡುತ್ತಾರೆಎಂಬುದು ಯಕ್ಷ ಪ್ರಶ್ನೆಯಾಗಿದೆ.

Advertisement

ಕೋವಿಡ್‌ನಿಂದ ಶಾಲೆಗಳು ನಡೆಯುತ್ತಿಲ್ಲ,ವಿದ್ಯಾರ್ಥಿನಿಲಯಗಳು ಬಂದ್‌ ಆಗಿದೆ. ಇದರಿಂದಮತ್ತಷ್ಟು ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗುವಅಪಾಯ ತಲೆದೂರಿದೆ. ಕಾರ್ಮಿಕ ಇಲಾಖೆಯಅ ಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳನ್ನುತಲುಪಿಸುವ ಜೊತೆಗೆ ಕಾರ್ಮಿಕರ ಮಕ್ಕಳುದುಡಿಮೆಗಿಂತಲೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲುಮತ್ತಷ್ಟು ಗಮನಹರಿಸಬೇಕಾಗಿದೆ.

ವಿಶ್ವ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ:ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತುನಿಯಂತ್ರಣ) ಕಾಯ್ದೆ, 1986ರ ಪ್ರಕಾರ ವರ್ಷದೊಳಗಿನಮಕ್ಕಳನ್ನು ಅಪಾಯಕಾರಿ ಉದ್ದಿಮೆಯಲ್ಲಿ ತೊಡಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.ಕಾನೂನು ಉಲ್ಲಂಘಿಸಿದವರಿಗೆ 50,000 ರೂ. ದಂಡಹಾಗೂ 2 ವರ್ಷ ಜೈಲು ಶಿಕ್ಷೆ ಖಚಿತ. ಅದೇ ರೀತಿ ರಾಜ್ಯಸರ್ಕಾರ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ1961ರ ಕಲಂ 24ರ ಪ್ರಕಾರ ವಾಣಿಜ್ಯ ಮಳಿಗೆಗಳಲ್ಲಿಮಕ್ಕಳನ್ನು ಬಾಲಕಾರ್ಮಿಕರನ್ನಾಗಿನೇಮಿಸಿಕೊಳ್ಳುವುದನ್ನು ಸಂಪೂರ್ಣ ನಿಷೇ ಧಿಸಲಾಗಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ಕ್ರಮಗಳುಸಾವಿರಾರು ಮಕ್ಕಳ ಜೀವನದಲ್ಲಿ ಆಶಾಕಿರಣವನ್ನುಮೂಡಿಸಿದೆ

ಎಂ..ತಮೀಮ್ಪಾಷ

Advertisement

Udayavani is now on Telegram. Click here to join our channel and stay updated with the latest news.

Next