ಬೆಂಗಳೂರು: ಪ್ರಧಾನಿ ಸ್ಥಾನಕ್ಕೇರುವ ಸಾಮರ್ಥ್ಯ ಹೊಂದಿದ್ದ ಅನಂತಕುಮಾರ್ ಅವರ ನಿಧನ ದೇಶಕ್ಕಾದ ನಷ್ಟ ಎಂದು ಲೇಖಕ ಬಾಬು ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಆನ್‌ಲೈನ್‌ಲ್ಲಿ ನಡೆದ ಅನಂತಪಥ ಪತ್ರಿಕೆಯ 17ನೇ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಮಾತ ನಾಡಿದ ಅವರು, ಅನಂತ್‌ಕುಮಾರ್ ವ್ಯಕ್ತಿತ್ವ, ಸಣ್ಣ ವಯಸ್ಸಿನಲ್ಲಿ ನಿಭಾಯಿಸಿದ ದೊಡ್ಡ ಜವಾಬ್ದಾರಿಗಳು, ರಾಜಕೀ ಯದ ಬಗ್ಗೆ ಹೊಂದಿದ್ದ ಶ್ರದ್ಧೆ, ವಿವಿಧ ಖಾತೆಗಳ ಸಚಿವರಾಗಿದ್ದಾಗ ತೆಗೆದುಕೊಳ್ಳುತ್ತಿದ್ದ ನಿರ್ಧಾರ, ರೂಪಿಸುತ್ತಿದ್ದ ಯೋಜನೆಗಳ ಮೂಲಕ ಮುಂದೆ ಪ್ರಧಾನಿ ಸ್ಥಾನಕ್ಕೇರುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದರು ಎಂದರು.
ದೇಶದ ಭವಿಷ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ಆದರೆ, ಅವರ ಅಕಾಲಿಕ ನಿಧನವು ಒಂದು ಪಕ್ಷಕ್ಕೆ ಮಾತ್ರಲ್ಲದೇ ದೇಶಕ್ಕೆ ಉಂಟಾದ ದೊಡ್ಡ ನಷ್ಟ ಎಂದು ಹೇಳಿದರು. ದೇಶದ ತುರ್ತು ಪರಿಸ್ಥಿತಿ ಸಂದರ್ಭದಿಂದಲೇ ಅನಂತಕುಮಾರ್ ಪರಿಚಯ ಇತ್ತು. ಹೋರಾಟ ಜಾಗೃತಿ ಸಭೆಗಳಲ್ಲಿ ಅತ್ಯಂತ ಹುರುಪಿನಿಂದ ಅನಂತ ಕುಮಾರ್ ಮಾತನಾಡುತ್ತಿದ್ದರು. ಯಾವ ಕೆಲಸ ಹಿಡಿದರು ಯಶಸ್ವಿಯಾಗಿ ನಿಭಾಯಿಸುವ ಶಕ್ತಿ ಅವ ರಲ್ಲಿತ್ತು.
ಇದನ್ನೂ ಓದಿ;- ಜಲಪಾತ ನೋಡಲು ಹೋಗಿ ಜಾರಿ ಬಿದ್ದು ಸಾವು
ರಾಜ್ಯದಲ್ಲಿ ವಿದ್ಯಾರ್ಥಿ ಪರಿಷತ್ತು ಕಟ್ಟಿದ ವರಲ್ಲಿ ಪ್ರಮುಖರು. ಸಣ್ಣ ಪುಟ್ಟ ಕಾರ್ಯಕ್ಕೆ ಸೀಮಿತವಾಗಿದ್ದ ವಿದ್ಯಾರ್ಥಿ ಪರಿಷತ್ತಿಗೆ ದೊಡ್ಡ ರೂಪು ಕೊಟ್ಟಿದ್ದರು. ಬಿರುಗಾಳಿಯಂತೆ ಪ್ರವಾಸ ಮಾಡಿ, ಸಂಘವನ್ನು ಯಾವ ರೀತಿ ಕಟ್ಟಬೇಕು ಎಂ ಬುದಕ್ಕೆ ಮಾದರಿಯಾಗಿದ್ದರು. ಇಂತಹ ಸಾಧನೆ ಗಳಿಂದಲೇ ಚಿಕ್ಕವಯಸ್ಸಿನಲ್ಲಿ ರಾಜಕೀಯದ ಉನ್ನತ ಸ್ಥಾನಕ್ಕೇರಿದ್ದರು ಎಂದು ಸ್ಮರಿಸಿದರು. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಕೊರೊನಾ ಕಪ್ಪು ಚಾಯೆ ಮಧ್ಯೆಯೇ ಅನಂತಪಥ ಪತ್ರಿಕೆ ಆರಂಭಿಸಿದೆವು.
ಪುಸ್ತಕದ ರೂಪದಲ್ಲಿ ಅನಂತ ಕುಮಾರ್ ಜೀವನ ಹಿಡಿದಿಟ್ಟು ಪ್ರಕಟಿಸಲು ಒಂದಿಷ್ಟ ಸಮಯ ಬೇಕಾಗುತ್ತದೆ. ಹೀಗಾಗಿ, ಸದ್ಯದ ಜಾರಿಯಲ್ಲಿರುವ ಕಾರ್ಯಗಳನ್ನು ಪರಿಚಯ ಜತೆಗೆ ಅನಂತಕುಮಾರ್ ಜೀವವನ್ನು ಹಂತ ಹಂತವಾಗಿ ಪರಿಚಯಿಸಲು ಪತ್ರಿಕೆ ನೆರವಾಗಿದೆ. ಇನ್ನು ಆನಂತ್‌ಕುಮಾರ್ ಪ್ರತಿಷ್ಠಾನವು ಯುವಕರಲ್ಲಿ ಸ್ಫೂರ್ತಿ ತುಂಬುವ, ನೇತೃತ್ವ ಬೆಳೆಸುವ ಕೆಲಸ ಮಾಡುತ್ತಿದೆ ಎಂದರು. ಪ್ರತಿಷ್ಠಾನದ ಸಿಬ್ಬಂದಿ ಇದ್ದರು.