Advertisement

Relationship Build: ರಾಜಧಾನಿ ಬೆಂಗಳೂರಲ್ಲಿ ಮಾಲ್ದೀವ್ಸ್‌ ದೂತಾವಾಸ ಕಚೇರಿ ಶೀಘ್ರ ಸ್ಥಾಪನೆ

03:39 AM Oct 08, 2024 | Team Udayavani |

ಹೊಸದಿಲ್ಲಿ: ಭಾರತ ಮತ್ತು ಮಾಲ್ದೀವ್ಸ್‌ ನಡುವಿನ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಮತ್ತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಮಾಲ್ದೀವ್ಸ್‌ನ ದೂತಾವಾಸ ಕಚೇರಿ ಸ್ಥಾಪನೆಗೆ ಸಮ್ಮತಿ ನೀಡಲಾಗಿದೆ.

Advertisement

ರವಿವಾರ ಹೊಸದಿಲ್ಲಿಗೆ ಆಗಮಿಸಿದ್ದ ಮುಯಿಜ್ಜು ಅವರಿಗೆ ಸೋಮವಾರ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಬಳಿಕ ಪ್ರಧಾನಿ ಮೋದಿ ಅವರನ್ನು ಮುಯಿಜ್ಜು ಭೇಟಿಯಾಗಿದ್ದಾರೆ. ಈ ವೇಳೆ ಸಾಗರ ಭದ್ರತೆ, ತಂತ್ರಜ್ಞಾನ ಅಭಿವೃದ್ಧಿ, ಆರ್ಥಿಕ ನೆರವು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಿದ್ದಾರೆ.

ಮಾಲ್ದೀವ್ಸ್‌ನ ಆಯ್ದ ನಗರಗಳಲ್ಲಿ ಭಾರತದ ದೂತಾ ವಾಸ, ಬೆಂಗಳೂರಿನಲ್ಲಿ ಮಾಲ್ದೀವ್ಸ್‌ನ ದೂತವಾಸ ಕಚೇರಿ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದಲ್ಲದೇ, ಮಾಲ್ದೀವ್ಸ್‌ ಜತೆಗಿನ 400 ದಶಲಕ್ಷ ಡಾಲರ್‌ ವಿದೇಶಿ ಕರೆನ್ಸಿ ವಿನಿಮಯ ಒಪ್ಪಂದದ ಜತೆಗೆ ಹೆಚ್ಚುವರಿಯಾಗಿ 360 ದಶಲಕ್ಷ ಡಾಲರ್‌ ವಿನಿಮಯಕ್ಕೂ ಭಾರತ ಅನುಮತಿಸಿದೆ. ಈ ಮೂಲಕ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪ್ರಯತ್ನಿಸುತ್ತಿರುವ ಮಾಲ್ದೀವ್ಸ್‌ಗೆ ಭಾರತ ಬಲ ನೀಡಿದಂತಾಗಿದೆ.

ರುಪೇ ಕಾರ್ಡ್‌ಗೆ ಚಾಲನೆ:
ಭಾರತದಿಂದ ಮಾಲ್ದೀವ್ಸ್‌ಗೆ ತೆರಳುವ ಹಾಗೂ ಅಲ್ಲಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಹಣಕಾಸು ವಹಿವಾಟು ಸುಲ ಭ ಗೊಳಿಸುವ ನಿಟ್ಟಿನಲ್ಲಿ ಭಾರತದ ರುಪೇ ಕಾರ್ಡ್‌ ಗಳನ್ನು ಮಾಲ್ದೀವ್ಸ್‌ ಬಳಕೆಗೆ ಬಿಡುಗಡೆಗೊಳಿಸಲಾಗಿದೆ.

ಜನೌಷಧಿ ಕೇಂದ್ರ:

ಉಭಯ ರಾಷ್ಟ್ರಗಳ ನಡುವಿನ ಆರೋಗ್ಯ ಸಹಕಾರದ ಭಾಗವಾಗಿ ಮಾಲ್ದೀವ್ಸ್‌ ಜನತೆಗೆ ಗುಣಮಟ್ಟದ ಜನೆರಿಕ್‌ ಔಷಧಿಗಳನ್ನು ಒದಗಿಸಿಕೊಡುವುದಕ್ಕಾಗಿ ಮಾಲ್ದೀವ್ಸ್‌ನಾದ್ಯಂತ ಜನೌ ಷಧಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.

Advertisement

ಭಾರತದ ಭದ್ರತೆಗೆ ಧಕ್ಕೆ ತರುವುದಿಲ್ಲ: ಅಧ್ಯಕ್ಷ ಮುಯಿಜ್ಜು
ಚೀನಪರ ನಿಲುವುಗಳಿಂದಲೇ ಪ್ರಖ್ಯಾತರಾಗಿ ರುವ ಮುಯಿಜ್ಜು ಭಾರತ ಭೇಟಿ ವೇಳೆ ತಮ್ಮ ವರಸೆ ಬದಲಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು “ಭಾರತ ನಮ್ಮ ಪ್ರಮುಖ ಪಾಲುದಾರ ರಾಷ್ಟ್ರ. ಮಾಲ್ದೀವ್ಸ್‌ ಮೊದಲು ಎನ್ನುವ ನೀತಿ ನಮ್ಮದಾದರೂ ಭಾರತವನ್ನು ಆದ್ಯತೆಯಾಗಿ ಪರಿಗಣಿಸುವುದನ್ನು ನಿಲ್ಲಿಸುವುದಿಲ್ಲ. ನಮ್ಮ ದೇಶದ ಅಭಿವೃದ್ಧಿಗಾಗಿ ವಿದೇಶಗಳೊಂದಿಗೆ ನಾವು ಸಹಕಾರ ಹೆಚ್ಚಿಸಿಕೊಳ್ಳಬೇಕಿದೆ. ಆದರೆ ನಮ್ಮ ನಿಲುವುನಿಂದ ಭಾರತದ ಭದ್ರತೆಗೂ ಧಕ್ಕೆ ಬಾರದಂತೆ ಖಾತರಿಪಡಿಸಿಕೊಳ್ಳುತ್ತೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next