Advertisement
ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲು ಕಿರುವ ಸಮುದಾಯಗಳಿಗೆ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ಅದರ ಅನ್ವಯ ಸರಕಾರವು ಕಟ್ಟಡ ಕಾರ್ಮಿಕರ ಖಾತೆಗೆ ನೇರವಾಗಿ 5,000 ರೂ. ಜಮೆ ಬಗ್ಗೆ ಘೋಷಣೆ ಮಾಡಿತ್ತು. ಈ ಪ್ಯಾಕೇಜ್ ಘೋಷಣೆಯಾದ ಕೇವಲ ಒಂದು ವಾರದಲ್ಲಿ ರಾಜ್ಯದಲ್ಲಿ 5 ಲಕ್ಷ ಕಟ್ಟಡ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಯಾಗಿದ್ದಾರೆ. ಇವುಗಳಲ್ಲಿ ಹೆಚ್ಚಿ ನವು ನಕಲಿ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
6 ತಿಂಗಳಿನಿಂದ ಮಂಡಳಿಯಲ್ಲಿ ನೋಂದಣಿಯಾಗುವ ಕಟ್ಟಡ ಕಾರ್ಮಿಕರ ಸಂಖ್ಯೆ ರಾಜ್ಯದಲ್ಲಿ ಶೇ. 90ರಷ್ಟು ಏರಿದೆ. ಎಪ್ರಿಲ್‌ನಿಂದ ಸೆಪ್ಟಂಬರ್ ವರೆಗೆ ಉಡುಪಿ ಯಲ್ಲಿ 12,057 ಕಾರ್ಮಿಕರು ಮತ್ತು ದ.ಕ.ದಲ್ಲಿ ಒಟ್ಟು 20,749 ಕಾರ್ಮಿಕರ ಸಹಿತ ಒಟ್ಟು 32,806 ಕಟ್ಟಡ ಕಾರ್ಮಿಕರು ಹೊಸ ದಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. 1.28 ಲಕ್ಷ ಕಾರ್ಮಿಕರು
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಂಡಳಿಯಲ್ಲಿ ಒಟ್ಟು 1,28,171 ಕಟ್ಟಡ ಕಾರ್ಮಿಕರು ನೋಂದಣಿಯಾಗಿದ್ದಾರೆ. ಉಡುಪಿಯಲ್ಲಿ 21,954, ಕಾರ್ಕಳ ದಲ್ಲಿ 8,249, ಕುಂದಾಪುರದಲ್ಲಿ 16,231 ಸಹಿತ ಒಟ್ಟು ಜಿಲ್ಲೆಯಲ್ಲಿ 46,443 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ 81,728 ಕಟ್ಟಡ ಕಾರ್ಮಿಕರು ಇಲಾಖೆಯಡಿಯಲ್ಲಿ ಸೌಲಭ್ಯ ಪಡೆದು ಕೊಳ್ಳಲು ನೋಂದಣಿ ಮಾಡಿಕೊಂಡಿದ್ದಾರೆ.
Related Articles
2007ರ ಬಳಿಕ ಇದೇ ಮೊದಲ ಬಾರಿಗೆ ಕಟ್ಟಡ ಕಾರ್ಮಿಕ ಮಂಡಳಿ ಕಟ್ಟಡ ಕಾರ್ಮಿಕರ ನೋಂದಣಿಯನ್ನು ಸ್ಥಗಿತಗೊಳಿಸಿದೆ. ಇಲಾಖೆಯು ತಂತ್ರಾಂಶ 1.0ರಿಂದ 1.02ಕ್ಕೆ ಅಭಿ ವೃದ್ಧಿ ಪಡಿಸುತ್ತಿರುವುದು ಮತ್ತು ಶುಲ್ಕ ಪಾವತಿ ಸಂದರ್ಭದಲ್ಲಿ ವ್ಯತ್ಯಾಸ ಉಂಟಾಗು ತ್ತಿರುವ ಹಿನ್ನೆಲೆಯಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.
Advertisement
ನೋಂದಣಿ ಸ್ಥಗಿತಕ್ಕೆ ನಕಲಿ ಶಂಕೆ ಕಾರಣಮಂಡಳಿಯ ಮೂಲಗಳ ಪ್ರಕಾರ, ಏಕಾಏಕಿಯಾಗಿ ನೋಂದಣಿ ಸಂಖ್ಯೆ ಹೆಚ್ಚಾಗಿದ್ದರಿಂದ ನಕಲಿಯೇ ಎಂಬ ಶಂಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ತಾತ್ಕಾಲಿಕವಾಗಿ ನೋಂದಣಿ ಸ್ಥಗಿತಗೊಳಿಸಲಾಗಿದೆ. ನೋಂದಣಿ ತಂತ್ರಾಂಶದಲ್ಲಿ ತಾಂತ್ರಿಕ ತೊಡಕುಗಳಿವೆ. ಅವುಗಳನ್ನು ಸರಿಪಡಿಸಲು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಂಡಳಿಯು ಶೀಘ್ರದಲ್ಲಿ ಕಟ್ಟಡ ಕಾರ್ಮಿಕರ ನೋಂದಣಿಗೆ ಅವಕಾಶ ಕಲ್ಪಿಸ ಲಿದೆ. ಬೋಗಸ್ ಕಾರ್ಡ್‌ಗಳ ಬಗ್ಗೆ ಗಮನಕ್ಕೆ ಬಂದಿಲ್ಲ. ಬಂದರೆ ಕ್ರಮ ತೆಗೆದು ಕೊಳ್ಳ ಲಾಗುತ್ತದೆ. ಇದು ವರೆಗೆ ಯಾವುದೇ ಸಂಘಟನೆ ಬೋಗಸ್ ಕಾರ್ಡ್‌ಗಳು ನೊಂದಣಿಯಾಗುತ್ತಿರುವ ಕುರಿತು ದೂರು ನೀಡಿಲ್ಲ.
-ಬಿ.ಕೆ. ನಾಗರಾಜ್, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರು, ದ.ಕ. ಜಿಲ್ಲೆ. ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪ್ಯಾಕೇಜ್ ಘೋಷಣೆಯಾದ ಬಳಿಕ ಏಕಾಏಕಿಯಾಗಿ ನೋಂದಣಿ ಸಂಖ್ಯೆ ಹೆಚ್ಚಿದೆ. ಇವುಗಳಲ್ಲಿ ನಕಲಿ ಇರುವ ಸಾಧ್ಯತೆ ಇದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸಂಘದಿಂದ ಕಲ್ಯಾಣ ಮಂಡಳಿ ಕಾರ್ಯದರ್ಶಿ ಹಾಗೂ ಕಾರ್ಮಿಕ ಮಂತ್ರಿಗಳಿಗೆ ಮನವಿ ಮಾಡಲಾಗಿತ್ತು.
-ಬಾಲಕೃಷ್ಣ ಶೆಟ್ಟಿ , ಕಟ್ಟಡ ನಿರ್ಮಾಣ ಕಾರ್ಮಿಕ ಸಂಘ (ಸಿಐಟಿಯು) ಕಾರ್ಯದರ್ಶಿ, ಉಡುಪಿ ತೃಪ್ತಿ ಕುಮ್ರಗೋಡು