ನವದೆಹಲಿ: ಮೇ 1ರಿಂದ ಮೂರನೇ ಹಂತದ ಲಸಿಕೆ ವಿತರಣೆ ಆರಂಭವಾಗಲಿದ್ದು, ಲಸಿಕೆ ಪಡೆಯಲಿಚ್ಛಿಸುವವರು ತಮ್ಮ ಹೆಸರನ್ನು ಕಡ್ಡಾಯವಾಗಿ ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕಾದ್ದು ಕಡ್ಡಾಯ.
18ರಿಂದ 45 ವರ್ಷದೊಳಗಿನ ಎಲ್ಲರೂ ಹೆಸರು ನೋಂದಾಯಿಸಿ, ಅಪಾಯಿಂಟ್‌ಮೆಂಟ್ ಪಡೆದೇ ಲಸಿಕಾ ಕೇಂದ್ರಕ್ಕೆ ತೆರಳಬೇಕು ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ. ಆದರೆ, 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳುವ ಅವಕಾಶವಿರುತ್ತದೆ.
ಸರ್ವರಿಗೂ ಲಸಿಕೆ ವಿತರಣೆ ಆರಂಭವಾದ ಕೂಡಲೇ ಬೇಡಿಕೆ ಹೆಚ್ಚಾಗುತ್ತದೆ. ಆ ಸಮಯದಲ್ಲಿ ಲಸಿಕಾ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚುವ ಸಾಧ್ಯತೆಯಿದೆ. ಇದನ್ನು ತಡೆಯುವ ಉದ್ದೇಶದಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿನ್‌ನಲ್ಲಿ ಹೆಸರು ನೋಂದಣಿ ಮಾಡುವುದು ಕಡ್ಡಾಯ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ :ಕೋವಿಡ್ ತಡೆಗೆ ರಾಜ್ಯಕ್ಕೆ 800 ಮೆಟ್ರಿಕ್ ಟನ್ ಆಕ್ಸಿಜನ್: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಆರಂಭದಲ್ಲಿ ಸ್ಥಳದಲ್ಲೇ ನೋಂದಣಿ ಅವಕಾಶವಿರುವುದಿಲ್ಲ. ನಂತರದಲ್ಲಿ ದಟ್ಟಣೆ ಕಡಿಮೆಯಾದ ಬಳಿಕ ಈ ನಿಯಮ ಸಡಿಲಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿ¨ªಾರೆ. ಏ.28ರಿಂದಲೇ ಕೋವಿನ್ ಮತ್ತು ಆರೋಗ್ಯಸೇತು ಆ್ಯಪ್‌ನಲ್ಲಿ ನೋಂದಣಿ ಆರಂಭವಾಗಲಿದೆ.