Advertisement
ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಕುಂಠಿತ ಗೊಂಡಿದ್ದ ರಾಜಸ್ವ ಸಂಗ್ರಹ ಅನಂತರದ ದಿನಗಳಲ್ಲಿ ವಿಪರೀತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿದೆ. ಈ ವರ್ಷದ ಎಪ್ರಿಲ್‌ನಿಂದ ಸೆಪ್ಟಂಬರ್ ತಿಂಗಳವರೆಗೆ 57,03,40,298ರೂ. ರಾಜಸ್ವ ಸಂಗ್ರಹಿಸಲಾಗಿದೆ.
ವಾಹನಗಳ ತನಿಖೆಯಿಂದ ಮೂರು ವಾಹನಗಳ ಮುಟ್ಟುಗೋಲು ಸಹಿತ ಒಟ್ಟು 206 ವಾಹನಗಳಿಗೆ ತನಿಖಾ ವರದಿ ನೀಡಿ 7,97,900 ರೂ. ದಂಡ ವಸೂಲಿ ರೂಪದಲ್ಲಿ ಹಾಗೂ 10,31,628ರೂ. ತೆರಿಗೆ ವಸೂಲಿ ಮಾಡಲಾಗಿದೆ. ಸರೆಂಡರ್‌ನಲ್ಲಿ 511 ವಾಹನ
ಒಟ್ಟು 511 ವಾಹನಗಳು ಸರೆಂಡರ್‌ನಲ್ಲಿವೆ. ನೋಂದಣಿಯಾಗಿ ಚಾಲ್ತಿಯಲ್ಲಿರುವ ವಾಹನಗಳಲ್ಲಿ 3,58,401 ದ್ವಿಚಕ್ರ ವಾಹನ, 67,941 ಕಾರು, 1,102 ಬಸ್, 147 ಪ್ರವಾಸಿ ವಾಹನಗಳು, 21,954 ಆಟೋ ರಿಕ್ಷಾ, 20,473 ಸರಕು ವಾಹನಗಳು, 188 ಆಸ್ಪತ್ರೆ ವಾಹನ, 958 ಶಾಲಾ ವಾಹನಗಳಿವೆ.
Related Articles
Advertisement
ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಕೊರತೆಯಿಂದಾಗಿ ಆರ್‌ಟಿಒ ಕಚೇರಿಯಲ್ಲಿ ಡಿಎಲ್, ಆರ್‌ಸಿ ಪಡೆಯಲು ಕೆಲವು ತಿಂಗಳಿನಿಂದ ಸಮಸ್ಯೆ ಎದುರಾಗಿತ್ತು. ಈಗ ಈ ಸಮಸ್ಯೆ ತಕ್ಕ ಮಟ್ಟಿಗೆ ಬಗೆಹರಿದಿದ್ದು, ಬಾಕಿ ಇರಿಸಿಕೊಂಡವರಿಗೆ ಡಿಎಲ್ ಹಾಗೂ ಆರ್‌ಸಿ ನೀಡಲಾಗುತ್ತಿದೆ. ಆದರೂ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ ಈ ಸಮಸ್ಯೆ ಇತ್ಯರ್ಥವಾದರೆ ತ್ವರಿತಗತಿಯಲ್ಲಿ ಪರವಾನಿಗೆ ನೀಡಲು ಸಾಧ್ಯವಾಗಲಿದೆ ಎಂದು ಆರ್‌ಟಿಒ ಅಧಿಕಾರಿಗಳು ತಿಳಿಸಿದ್ದಾರೆ.
5 ಲಕ್ಷಕ್ಕೂ ಅಧಿಕ ಮಂದಿಗೆ ಚಾಲನಾ ಪರವಾನಿಗೆ3,501 ಮಂದಿಗೆ ಸೆಪ್ಟಂಬರ್ ತಿಂಗಳಿನಲ್ಲಿ ಚಾಲನಾ ಪರವಾನಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 5,71,632 ಮಂದಿ ಚಾಲನಾ ಪರವಾನಿಗೆಯನ್ನು ಹೊಂದಿದ್ದಾರೆ. ದಿನಂಪ್ರತಿ 300ಕ್ಕೂ ಅಧಿಕ ಮಂದಿಗೆ ಹೊಸದಾಗಿ ಪರವಾನಿಗೆ ಪಡೆ ಯಲು ಆರ್‌ಟಿಒ ಕಚೇರಿಗೆ ಬರುತ್ತಿದ್ದಾರೆ. ಉತ್ತಮ ಪ್ರಗತಿ
ರಾಜಸ್ವ ಸಂಗ್ರಹ ಹಾಗೂ ಡಿಎಲ್ ಪಡೆದುಕೊಳ್ಳುವವರ ಸಂಖ್ಯೆ ದಿನಂಪ್ರತಿ ಹೆಚ್ಚಳವಾಗುತ್ತಿದೆ. ಸೆಪ್ಟಂಬರ್ ತಿಂಗಳೊಂದರಲ್ಲಿ 13 ಕೋ.ರೂ.ಗೂ ಅಧಿಕ ರಾಜಸ್ವ ಸಂಗ್ರಹಿಸಲಾಗಿದೆ.
-ಜೆ.ಪಿ. ಗಂಗಾಧರ, ಪ್ರಾದೇಶಿಕ ಸಾರಿಗೆ ಅಧಿಕಾರಿ