Advertisement

ರೀಲಾ, ರಿಯಲ್ಲಾ?: ರಿಯಲ್‌ ಎಸ್ಟೇಟ್‌ ಸ್ಥಿತಿಗತಿ

05:39 AM May 25, 2020 | Lakshmi GovindaRaj |

ಅದೆಷ್ಟೋ ಪ್ರಖ್ಯಾತ ಕಂಪನಿಗಳು, ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಬಂಡವಾಳ ಹೂಡಿವೆ. ನಮ್ಮ ಸುತ್ತಮುತ್ತಲೂ ಇರುವ ಶ್ರೀಮಂತರು, ರಾಜಕಾರಣಿಗಳು, ಅವುಗಳ ಷೇರು ಖರೀದಿಸಿದ್ದಾರೆ. ಆ ಮೂಲಕ, ತಮ್ಮ ಸಂಪತ್ತು  ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ/ ಮಾಡುತ್ತಲೂ ಇದ್ದಾರೆ.

Advertisement

ಕೋವಿಡ್‌ 19 ಕಾರಣದಿಂದ, ಉದ್ಯಮ ಕ್ಷೇತ್ರಕ್ಕೆ ಬಿದ್ದ ಹೊಡೆತ ದೊಡ್ಡದು. ಅದರಲ್ಲೂ, ಭಾರಿ ಲಾಭದ ಕ್ಷೇತ್ರ ಎಂದೇ ಹೆಸರು ಮಾಡಿರುವ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ, ಎರಡೇಟು ಜಾಸ್ತಿ ಅನ್ನುವಂಥ ಪೆಟ್ಟು ಬಿದ್ದಿದೆ. ಎಲ್ಲರಿಗೂ  ಗೊತ್ತಿರುವಂತೆ, ಅದೆಷ್ಟೋ ಪ್ರಖ್ಯಾತ ಕಂಪನಿಗಳು, ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಬಂಡವಾಳ ಹೂಡಿವೆ. ನಮ್ಮ  ಸುತ್ತಮುತ್ತಲೂ ಇರುವ ಶ್ರೀಮಂತರು, ರಾಜಕಾರಣಿಗಳು, ಅವುಗಳ ಷೇರು ಖರೀದಿಸಿದ್ದಾರೆ. ಆ ಮೂಲಕ, ತಮ್ಮ  ಸಂಪತ್ತು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ/ ಮಾಡುತ್ತಲೂ ಇದ್ದಾರೆ.

ಸೈಟ್‌ಗಳ ಖರೀದಿ ಮತ್ತು ಮಾರಾಟ, ಅಪಾಟ್ìಮೆಂಟ್‌ಗಳ ನಿರ್ಮಾಣ ಮತ್ತು ಫ್ಲಾಟ್‌ ಮಾರಾಟ- ಇದು, ರಿಯಲ್‌ ಎಸ್ಟೇಟ್‌ ಉದ್ಯಮದ ನೇರ ಮುಖ. ಒಂದು  ಜಿಲ್ಲೆ ಅಥವಾ ತಾಲೂಕಿನಂಥ ಪ್ರದೇಶದಲ್ಲಿ, ಎರಡು ಎಕರೆ ಜಮೀನನ್ನು 30 ಲಕ್ಷಕ್ಕೆ ಉದ್ಯಮಿಗಳು ಖರೀದಿಸುತ್ತಾರೆ. ಮುಂದೆ, ಅಲ್ಲಿ ಸೈಟ್‌ಗಳನ್ನೂ ಮಾಡಿ, 75 ಲಕ್ಷ ಸಂಪಾದಿಸುತ್ತಾರೆ! ಅಂತೆಯೇ, 4 ಕೋಟಿ ರೂ. ವೆಚ್ಚದಲ್ಲಿ, 16  ಮನೆಗಳನ್ನು ಹೊಂದಿದ ಅಪಾಟ್‌ಮೆಂಟ್‌ ನಿರ್ಮಿಸುವ ಒಂದು ಕಂಪನಿ, ಆ ಎಲ್ಲಾ ಫ್ಲಾಟ್‌ಗಳನ್ನು ಮಾರಿದಾಗ, 8 ಅಥವಾ 10 ಕೋಟಿ ಗಳಿಸುತ್ತದೆ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಲಾಭವಿದೆ ಎನ್ನಲು, ನೀಡಬಹುದಾದ ಸರಳ  ಉದಾಹರಣೆ ಇದು.

ರಿಸ್ಕ್‌ ತಗೊಳ್ಳಲು ರೆಡಿ ಇಲ್ಲ: ಹತ್ತು ರೂಪಾಯಿ ಹೂಡಿ, ಇಪ್ಪತ್ತು ರೂಪಾಯಿ ಲಾಭ ಮಾಡುವಂತೆ ಇದ್ದ ಈ ಉದ್ಯಮವೂ ತತ್ತರಿಸಲು ಕೋವಿಡ್‌ 19 ಹೇಗೆ ಕಾರಣವಾಯಿತು ಅಂದಿರಾ? ಕೇಳಿ: ಮನೆ ನಿರ್ಮಾಣದಂಥ ಕೆಲಸಗಳಿಗೆ  ಬರುತ್ತಿದ್ದ ಕಾರ್ಮಿಕರಲ್ಲಿ, ಹೆಚ್ಚಿನವರು ಹೊರ ರಾಜ್ಯದವರು. ಕೋವಿಡ್‌ 19 ವೈರಸ್‌ ಹರಡಿದರೆ ಗತಿಯೇನು ಎಂದು ಹೆದರಿ, ಅವರೆಲ್ಲಾ ಊರಿಗೆ  ಹೋಗಿಬಿಟ್ಟಿದ್ದಾರೆ. ಕೆಲಸಗಾರರು ಇಲ್ಲವೆಂಬ ಕಾರಣಕ್ಕೆ, ಈಗ ಮನೆ ನಿರ್ಮಾಣದ  ಕೆಲಸಗಳೆಲ್ಲ ನಿಂತುಹೋಗಿವೆ. ಒಂದು ವೇಳೆ ಕೆಲಸ ಆರಂಭಿಸಬೇಕು ಅಂದರೆ, ಕೆಲಸಗಾರರು ಅಗತ್ಯವಾಗಿ ಬೇಕು. ಹಳೆಯ ಕೆಲಸಗಾರರೇ ಬೇಕು ಅಂದರೆ, ಅವರನ್ನು ಊರಿಂದ ಕರೆಸಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಬೇಕು.  ಕ್ವಾರಂಟೈನ್‌ ನಂತರ ಏನೂ ಸಮಸ್ಯೆ ಆಗಿಲ್ಲ ಅಂತಾದರೆ ಮಾತ್ರ, ಕೆಲಸ ಮಾಡಿಸಬಹುದು. (ಅಕಸ್ಮಾತ್‌ ಸೋಂಕು ಕಾಣಿಸಿದರೆ, ಆ ಕೆಲಸಗಾರರ ಜವಾಬ್ದಾರಿ ಹೊತ್ತುಕೊಳ್ಳಬೇಕು.) ಈ ವಿಷಯದಲ್ಲಿ ರಿಸ್ಕ್‌ ತಗೊಳ್ಳಲು ಬಿಲ್ಡರ್‌ಗಳು  ಸಿದರಿಲ್ಲ.

ಖರೀದಿಗೆ ಆಸಕ್ತಿಯಿಲ್ಲ: ಕೆಲವೊಂದು ಕಡೆಗಳಲ್ಲಿ ಅಪಾರ್ಟ್‌ಮೆಂಟ್‌ನ ಕೆಲಸ ಮುಗಿದಿದೆ. ಮನೆಗಳೂ ಬಳಕೆಗೆ ಸಿದಟಛಿವಾಗಿವೆ. ಆದರೆ, ಅವನ್ನು ಖರೀದಿಸಲು ಜನ ಮುಂದೆ ಬರುತ್ತಿಲ್ಲ. ಕಾರಣ, ಕೆಲವರಿಗೆ ಉದ್ಯೋಗ ಭದ್ರತೆಯ ಭರವಸೆ  ಇಲ್ಲ. ಕೆಲಸದ ಗ್ಯಾರಂಟಿ ಇಲ್ಲದ ಮೇಲೆ ಮನೆ ಖರೀದಿಸಲು ಹೇಗೆ ಸಾಧ್ಯ ಅನ್ನುವುದು ಹಲವರ ಪ್ರಶ್ನೆ. ಇನ್ನು ಕೆಲವರಿಗೆ ನೌಕರಿಯ ಬಗ್ಗೆ ಚಿಂತೆ ಇಲ್ಲ. ಆದರೂ ಅವರು ಫ್ಲಾಟ್/ ಸೈಟ್‌ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಕಾರಣ,  ಬ್ಯಾಂಕ್‌ ಸಾಲ ಪಡೆಯಲು, ರಿಜಿಸ್ಟ್ರೇಷನ್‌ ಮಾಡಿಸಲು ಹತ್ತಾರು ಬಾರಿ ಕಚೇರಿಗಳಿಗೆ ಹೋಗಿ ಬರಬೇಕು. ಈ ಓಡಾಟದ ಸಂದರ್ಭದಲ್ಲೇ ಯಾರ ಮೂಲಕವಾದರೂ ವೈರಸ್‌ ಅಮರಿಕೊಂಡರೆ? ಇಂಥದೊಂದು  ಭಯದ ಕಾರಣಕ್ಕೇ ಹೆಚ್ಚಿನವರು ಖರೀದಿಯಲ್ಲಿ ಮನಸ್ಸು ಮಾಡುತ್ತಿಲ್ಲ.

Advertisement

ರಿಯಾಯಿತಿ ಕೊಟ್ಟರೂ ಗಿಟ್ಟಲಿಲ್ಲ:  8-10 ಮನೆಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ಗಳನ್ನೂ ನಿರ್ಮಿಸುವವರು, ಸ್ಥಳೀಯ ಬಿಲ್ಡರ್‌ ಗಳು. ಅವರಲ್ಲಿ ಹೆಚ್ಚಿನವರು, ಬ್ಯಾಂಕ್‌ ಗಳಲ್ಲಿ ಸಾಲ ಪಡೆದು ಅಪಾರ್ಟ್‌ ಮೆಂಟ್‌  ನಿರ್ಮಿಸಿರುತ್ತಾರೆ. ಅವರೀಗ ಇಎಂಐ ಕಟ್ಟಲೇಬೇಕಿರುತ್ತದೆ. ಅವರಿಗೆ ಈಗ ತುರ್ತಾಗಿ ಹಣ ಬೇಕಿರುತ್ತದೆ. ಅದೇ ಕಾರಣಕ್ಕೆ ಶೇ. 10 ರಿಯಾಯಿತಿ ದರದಲ್ಲಿ ಅಪಾರ್ಟ್‌ಮೆಂಟ್‌ ಮಾರಲಿಕ್ಕೂ ಕೆಲವರು ಮುಂದಾಗಿದ್ದಾರೆ. ಆದರೂ, ಖರೀದಿದಾರರು ಆಸಕ್ತಿ ತೋರುತ್ತಿಲ್ಲ. ಕಾರಣ, ಕೋವಿಡ್‌ 19 ಭಯ!

ನಾಳೆ ಸರಿ ಹೋಗಬಹುದು…: ಒಟ್ಟಾರೆಯಾಗಿ, ಕೊರೋನಾ ಕಾರಣಕ್ಕೆ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ತುಸು ಹೆಚ್ಚೇ ಅನ್ನುವಂಥ ಹೊಡೆತ ಬಿದ್ದಿರುವುದು ನಿಜ. ಸದ್ಯಕ್ಕೆ ರಿಯಲ್‌ ಎಸ್ಟೇಟ್‌ ಕೈ ಕಚ್ಚುತ್ತಿದೆ ಎಂಬುದೂ ನಿಜ. ಆದ್ರೆ, ಇದೇ ಪರಿಸ್ಥಿತಿ ಮುಂದಿನ ದಿನಗಳಲ್ಲೂ  ಇರುವುದಿಲ್ಲ. ಕೋವಿಡ್‌ 19 ನಿಯಂತ್ರಕ್ಕೆ ಬರುತ್ತಿದ್ದಂತೆಯೇ, ರಿಯಲ್‌ ಎಸ್ಟೇಟ್‌ ಉದ್ಯಮ ಮತ್ತೆ ಇಂದಿನ ಲಯ ಕಂಡುಕೊಳ್ಳಲಿದೆ ಎಂಬುದು ಹಲವರ ಮಾತು, ನಿರೀಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next