ಉಡುಪಿ: ಮನುಷ್ಯ ಮಿತಿಯಿಲ್ಲದೆ ಬದುಕುತ್ತಿದ್ದಾನೆ. ಎಷ್ಟು ಇದ್ದರೂ ಸಾಲದು ಎಂಬ ದುರಾಸೆ ಕಂಡು ಬರುತ್ತಿದೆ. ದುರಾಸೆಗೆ ಕಡಿವಾಣ ಬಿದ್ದು ತ್ಯಾಗದ ಬದುಕು ನಮ್ಮದಾಗಬೇಕು ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಅವರು ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎ. 9ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ದರು. ಮುಂಬಯಿಯ ಖ್ಯಾತ ವೈದ್ಯ ಡಾ| ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಪಯ್ಯನೂರಿನ ಜ್ಯೋತಿಷಿ ಎ.ವಿ. ಮಾಧವನ್ ಪೊದುವಾಳ್, ಬಾಕೂìರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕಡಂದಲೆ ಸುರೇಶ ಭಂಡಾರಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ. ಕೃಷ್ಣ ರಾವ್ ಕೊಡಂಚ, ಗಣ್ಯರಾದ ವಿಜಯ ಪೂಜಾರಿ, ನವೀನ್ ಭಂಡಾರಿ, ಎ. ರಮೇಶ ಶೆಟ್ಟಿ, ಸದಾನಂದ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ದಿವಾಕರ ಸನಿಲ್, ನಾಗಭೂಷಣ ಶೇಟ್, ಶ್ರೀನಿವಾಸ ಆಚಾರ್ಯ, ರಮಣ ತಂತ್ರಿ, ಕೃಷ್ಣ ಭಟ್ ಉಪಸ್ಥಿತರಿದ್ದರು.
ಸಮಿತಿ ಗೌರವ ಸಲಹೆಗಾರ ಬೈಲೂರು ಮುರಳೀಧರ ತಂತ್ರಿ, ಶಿಲ್ಪಿ ಮಹೇಶ ಶಿಲ್ಪಿ, ದಾರು ಶಿಲ್ಪಿ ಡಾ| ಬಳ್ಕೂರು ಗೋಪಾಲ ಆಚಾರ್ಯ, ತಾಂತ್ರಿಕ ಸಲಹೆಗಾರರಾದ ಭಗವಾನ್‌ದಾಸ್, ಗುರುರಾಜ ಭಟ್‌ರನ್ನು ಸಮ್ಮಾನಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಗೌ. ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿ, ನರೇಶ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ದಾಸ್ ಉಡುಪ ವಂದಿಸಿದರು.