Advertisement

ನಕ್ಕನಹಳ್ಳಿ ಅಂಗನವಾಡಿ ಅಕ್ರಮಕ್ಕೆ ಕಡಿವಾಣ ಹಾಕಿ

07:23 AM Jun 02, 2020 | Lakshmi GovindaRaj |

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ನಕ್ಕನಹಳ್ಳಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ನಡೆಯುತ್ತಿರುವ ಅವ್ಯವಹಾರಕ್ಕೆ ಕಡಿವಾಣ ಹಾಕುವಂತೆ ಮತ್ತು ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ವಂಶಿಕೃಷ್ಣ ಮೇಲೆ  ಕ್ರಮವಹಿಸುವಂತೆ ಗ್ರಾಮಸ್ಥರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿದರು

Advertisement

ಗರ್ಭಿಣಿಯರಿಗೆ ಸರ್ಕಾರದಿಂದ ಉಚಿತವಾಗಿ ವಿತರಣೆ ಮಾಡುವ ಆಹಾರ ಪದಾರ್ಥಗಳನ್ನು ಗ್ರಾಮದ ಫ‌ಲಾನುಭವಿಗಳಿಗೆ  ಸರಿಯಾಗಿ ನೀಡದೇ ಬೇರೆಯವರಿಗೆ ಹಣಕ್ಕೆ ಮಾರಾಟ ಮಾಡುತ್ತಿದ್ದು, ಸರ್ಕಾರಕ್ಕೆ ವಂಚನೆ ಮಾಡುತ್ತಾ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಾ ಇದ್ದಾರೆ ಎಂದು ಮಾಲೂರು ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಗೆ ಮೇ 19 ರಂದು  ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ ಎಂದೂ ಆರೋಪಿಸಿದರು. ಅಂಗನವಾಡಿ ಶಿಕ್ಷಕರು ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಶಾಮೀಲಾಗಿದ್ದಾರೆ ಎನ್ನುವ ಗುಮಾನಿ ಇದ್ದು,

ನಾವು ನಮ್ಮ ಗ್ರಾಮದಲ್ಲಿ  ನಡೆಯುತ್ತಾ ಇರುವ ಅಕ್ರಮದ ಬಗ್ಗೆ ಸಾಕಷ್ಟು ಬಾರಿ ಮೌಖೀಕವಾಗಿ ದೂರು ನೀಡಿದ್ದರೂ ಕನಿಷ್ಠ ಒಂದು ಬಾರಿಯಾದರೂ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ ಯಾಕೆ ಎಂದೂ ಪ್ರಶ್ನಿಸಿದರು. ಈ ಕೂಡಲೇ ನಮ್ಮ ಗ್ರಾಮದಲ್ಲಿ  ನಡೆದಿರುವ ಅವ್ಯವಹಾರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಿಗಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ನಕ್ಕನಹಳ್ಳಿ ಗ್ರಾಮಸ್ಥರಾದ ಮಂಜುನಾಥ್‌, ನವೀನ್‌, ಮುನಿಸ್ವಾಮಿ, ತಿಮ್ಮರಾಯಪ್ಪ, ಅಂಜಿನಪ್ಪ, ಪ್ರಭಾಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next