ತೆಗೆದುಕೊಂಡರು.
Advertisement
ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಒಂದು ಶುದ್ಧೀಕರಣ ಘಟಕ ಕೆಟ್ಟು ಹೋದರೆ ದುರಸ್ತಿಗೆ 70-80 ಸಾವಿರ ರೂ. ಬೇಕಾ, ಅಷ್ಟು ದುಡ್ಡು ಕೊಟ್ಟು ದುರಸ್ತಿ ಮಾಡಿಸಿದರೂ ಒಂದೇ ತಿಂಗಳಲ್ಲಿ ಮತ್ತೆ ದುರಸ್ತಿಗೆ ಬಂದಿದೆ ಎಂದರೆ ಏನರ್ಥ ಎಂದು ಖಾರವಾಗಿ ಪ್ರಶ್ನಿಸಿದರು.
ಬಿಲ್ ಅನ್ನು ಅದೇ ಕಂಪನಿ ಕಟ್ಟಬೇಕು. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು. ಸಂಬಂಧಿಸಿದ ಕಂಪನಿ ಅಥವಾ ಗುತ್ತಿಗೆ ಏಜೆನ್ಸಿಯಿಂದ ಹಸ್ತಾಂತರ ಮಾಡಿಕೊಳ್ಳುವ ಮುನ್ನ ಸೇ.100ರಷ್ಟು ಆರ್‌ಒಗಳು ಸುಸ್ಥಿತಿಯಲ್ಲಿದ್ದರೆ ಮಾತ್ರ ಗ್ರಾಪಂಗಳಿಗೆ ಹಸ್ತಾಂತರಿಸಿಕೊಳ್ಳಿ ಎಂದು ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶಮೂರ್ತಿ ಮಾತನಾಡಿ, ರಾಮಜೋಗಿಹಳ್ಳಿಯಲ್ಲಿ ಅಳವಡಿಸಿರುವ ಆರ್‌ಒ ಕೆಟ್ಟು ಹೋಗಿ ಬಹಳ ದಿನಗಳಾಗಿದೆ. ಶೀಘ್ರ ದುರಸ್ತಿ ಮಾಡಿಸಿ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ವತಿಯಿಂದ ಸಹಕಾರ ಸಂಘಗಳ ಮೂಲಕ ಆರ್‌ಒ ಘಟಕ ಅಳವಡಿಸಿ 2-3 ವರ್ಷಗಳಾಗಿದೆ. ಇನ್ನೂ ಅರ್ಧ ದುಡ್ಡು ನೀಡಿಲ್ಲ, ಏಕಿಷ್ಟು ವಿಳಂಬ ಮಾಡುತ್ತೀರಿ,
ಕೂಡಲೇ ಬಾಕಿ ಹಣವನ್ನು ನೀಡುವಂತೆ ತಾಕೀತು ಮಾಡಿದರು.
Related Articles
ಜಿಪಂ ಅಧ್ಯಕ್ಷರು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು. 13ನೇ ಹಣಕಾಸು ಅನುದಾನದಲ್ಲಿ ನಿರ್ಮಾಣ ಮಾಡಲಾದ ಕಟ್ಟಡಗಳಿಗೆ ಇನ್ನೂ ಬಿಲ್ ಪಾವತಿ ಮಾಡಿಲ್ಲ, ಕಾಮಗಾರಿ ಪೂರ್ಣಗೊಂಡ ತಕ್ಷಣ ಬಿಲ್ ಪಾವತಿ ಮಾಡಬೇಕೆಂದರು.
Advertisement
ಯಾವುದೇ ಕಾಮಗಾರಿಗಳು ಪೂರ್ಣಗೊಂಡಿದ್ದರೆ ಬಿಲ್ ನೀಡಲು ನಿಮಗೇನು ತೊಂದರೆ ಎಂದ ಶ್ರೀರಂಗಯ್ಯ, ಕಾಮಗಾರಿ ಪೂರ್ಣಗೊಂಡ ನಂತರ ಗುಣಮಟ್ಟ ಖಾತ್ರಿ ಪಡಿಸಿಕೊಂಡು ತಕ್ಷಣ ಬಿಲ್ ಪಾವತಿ ಮಾಡವಂತೆ ಸೂಚಿಸಿದರು. ನರೇಗಾ ಯೋಜನೆ ಅಡಿ ಕಡ್ಡಾಯವಾಗಿ ಎಲ್ಲ ಗ್ರಾಪಂಗಳಲ್ಲಿ ಒಂದು ಸಮುದಾಯ ಕಾಮಗಾರಿ ನಡೆಯುತ್ತಿರಬೇಕು. ಕೂಲಿ ಸಿಗುತ್ತಿಲ್ಲ ಎನ್ನುವ ದೂರುಬರಬಾರದು ಎಂದು ತಾಪಂ ಇಒಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಸುಶೀಲಮ್ಮ, ಸಿಪಿಒ ಓಂಕಾರಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ಡಿಸಿ ಪ್ರಶ್ನೆಗೆ ತಡವರಿಸಿದ ಅಧಿಕಾರಿಗಳು
ಕೆರೆ ಸಂಜೀವಿನಿ ಯೋಜನೆಯಲ್ಲಿ ಎಷ್ಟು ಅನುದಾನ ಬಂದಿದೆ, ಎಷ್ಟು ಖರ್ಚಾಗಿದೆ, ಎಷ್ಟು ಕೆರೆಗಳನ್ನು ಜೀರ್ಣೋದ್ಧಾರ
ಮಾಡಲಾಗಿದೆ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಅಧಿಕಾರಿಗಳು ಉತ್ತರಿಸಲು ತಡವರಿಸಿದರು. ಸರಿಯಾದ
ಮಾಹಿತಿ ಇಲ್ಲದೆ ಸಭೆಗೆ ಆಗಮಿಸಿ ಕಥೆ ಹೇಳುತ್ತೀರಾ ಎಂದು ಜಿಲ್ಲಾಧಿಕಾರಿಯವರು ಬೇಸರ ವ್ಯಕ್ತಪಡಿಸಿದರು. ಶೌಚಾಲಯ ಅನುದಾನ ಮಂಡ್ಯಕ್ಕೆ!
ನಮ್ಮ ಜಿಲ್ಲೆಗೆ ಬರಬೇಕಿದ್ದ 27 ಶೌಚಾಲಯಗಳ ಅನುದಾನ ಮಂಡ್ಯ ಜಿಪಂಗೆ ಹೋಗಿದೆ. ಇದೇ ರೀತಿ ಜಿಲ್ಲೆಯ ಚಳ್ಳಕೆರೆ ತಾಲೂಕು ಸೇರಿದಂತೆ ಮತ್ತಿತರ ತಾಲೂಕುಗಳಲ್ಲೂ ಇದೇ ರೀತಿ ಆಗಿದೆ. ಸಾಕಷ್ಟು ಸಲ ಮಂಡ್ಯ ಜಿಪಂನವರನ್ನು ಸಂಪರ್ಕಿಸಿ ಅನುದಾನ ವಾಪಸ್ ತರುವ ಕೆಲಸ ಮಾಡಲಾಗಿದೆ. ಇಂತಹ ಲೋಪ ಏಕೆ ಎಂದು ಪ್ರಶ್ನಿಸಿದ ಅಧ್ಯಕ್ಷೆ ಸೌಭಾಗ್ಯ, ಈ ರೀತಿಯ ಅವಾಂತರಗಳಿಗೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.