Advertisement

ಕೋವಿಡ್‌ 19ಗೆ ಕಡಿವಾಣ ಹಾಕಿ: ಕೆಂಪರಾಜು

06:41 AM May 15, 2020 | Lakshmi GovindaRaj |

ನೆಲಮಂಗಲ: ಕೋವಿಡ್‌ 19ದಿಂದಾಗಿ ಜನಸಾಮಾನ್ಯರು ಹೆದರದೆ ಸ್ವತ್ಛತೆ ಹಾಗೂ ಮುಂಜಾಗ್ರತೆ ಕ್ರಮ ಕಡ್ಡಾಯವಾಗಿ ಪಾಲಿಸಿ ಕಡಿವಾಣ ಹಾಕಬೇಕು ಎಂದು ವಾಜರಹಳ್ಳಿ ಗ್ರಾಪಂ ಸದಸ್ಯ ವಿಕೆಎಸ್‌ ಕೆಂಪರಾಜು ಅಭಿಪ್ರಾಯಪಟ್ಟರು.

Advertisement

ವಾಜರಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ವಿಕೆಎಸ್‌ ಕುಟುಂಬ ಮತ್ತು ಸ್ನೇಹಿತರು ಆಯೋಜಿಸಿದ್ದ ಆಹಾರ ಮತ್ತು ವೈದ್ಯಕೀಯ ಕಿಟ್‌ ವಿತರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರು ಆಹಾರ ಪದಾರ್ಥಗಳು ಹಾಗೂ ಔಷಧ  ಖರೀದಿಸಲು ಕಷ್ಟಪಟ್ಟಿದ್ದನ್ನು ಕಂಡು ಕುಟುಂಬ ಸದಸ್ಯರು ಮತ್ತು ಸ್ನೇಹಿತರು, ಗ್ರಾಮದ 250ಕ್ಕೂ ಹೆಚ್ಚು ವೃದರು ಮತ್ತು ಹಿರಿಯ ನಾಗರಿಕರಿಗೆ ಔಷಧ ಕಿಟ್‌ ವಿತರಿಸಿ, ಆಹಾರ ಪದಾರ್ಥ ಉಚಿತವಾಗಿ ನೀಡಲಾಗಿದೆ.

ಸರಕಾರಿ  ಕಚೇರಿಗಳಿಗೆ ಸಾರ್ವಜನಿಕರು ನಿರಂತರವಾಗಿ ಭೇಟಿ ನೀಡು ಹಿನ್ನಲೆಯಲ್ಲಿ ಸ್ಯಾನಿಟೈಸರ್‌ ಹಾಕಲು ಒಬ್ಬರು ಸಿಬ್ಬಂದಿ ಕಾರ್ಯ ನಿರ್ವಹಿಸ ಬೇಕಾಗಿದ್ದನ್ನು ಮನಗಂಡು 10ಕ್ಕೂ ಹೆಚ್ಚು ಸ್ಟಾಂಡ್‌ ವಿತರಿಸಲಾಗಿದೆ. ಪಂಚಾಯತಿ ವ್ಯಾಪ್ತಿಯ  ನಾಗರಿಕರು ಸಮಸ್ಯೆಗಳಿಗೆ ಎದೆಗುಂದಬೇಕಿಲ್ಲ. ಪಂಚಾಯತಿ ನಿಮ್ಮೊಂದಿಗಿರುತ್ತದೆ ಎಂದು ಭರವಸೆ ನಿಡಿದರು.

ಅಭಿನಂದನೆ: ವಾಜರಹಳ್ಳಿ ಗ್ರಾಪಂ ನಗರಸಭೆ ವ್ಯಾಪ್ತಿಗೆ ಒಳಪಟ್ಟು ಕಾರ್ಯಾರಂಭ ಮಾಡಿದ ಹಿನ್ನಲೆಯಲ್ಲಿ  ಅವಿಭಜಿತ ಪಂಚಾಯತಿಯಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸಿದ ಡಿ.ಪದ್ಮನಾಭ್‌, ರೇಖಾ, ರವಿಶಂಕರ್‌, ಪ್ರಶಾಂತ್‌, ಕಾರ್ಯದರ್ಶಿಗಳಾದ ಹನುಂತರಾಯಪ್ಪ, ಮುತ್ತುರಾಜ್‌, ಲೆಕ್ಕಾಧಿಕಾರಿ ಗೋವಿಂದಪ್ಪ ಅವರನ್ನು ಕೆಂಪರಾಜು ಮತ್ತು ತಂಡದವರು  ಸನ್ಮಾನಿಸಿದರು. ತಾಪಂ ಸಹಾಯಕ ನಿರ್ದೇಶಕ ಪದ್ಮನಾಭ್‌, ಬೂದಿಹಾಳ್‌ ಪಿಡಿಒ ರೇಖಾ, ಗ್ರಾಪಂ ಸದಸ್ಯೆ ಭಾಗ್ಯಕೆಂಪರಾಜು, ಗಣೇಶ್‌, ಜ್ಞಾನಮೂರ್ತಿ, ನಾಗರತ್ನಮ್ಮ, ರಾಮಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next