Advertisement
ಅವರು ಶುಕ್ರವಾರ ಸಂತ ಮೇರಿ ಕಾಲೇಜಿನ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಶಿರ್ವ, ಗ್ರಾ.ಪಂ. ಶಿರ್ವ ಮತ್ತು ಸಂತ ಮೇರಿ ಕಾಲೇಜು, ಶಿರ್ವ ಇವರ ಆಶ್ರಯದಲ್ಲಿ ನಡೆದ ಘನ ಮತ್ತು ದ್ರವ ಸಂಪನ್ಮೂಲ (ತ್ಯಾಜ್ಯ) ನಿರ್ವಹಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಕಾರ್ಯಕ್ರಮದಲ್ಲಿ ಶಿರ್ವ ಗ್ರಾ.ಪಂ.ಸದಸ್ಯರು,ಲಯನ್ಸ್ ಸದಸ್ಯರು , ಕಾಲೇಜಿನ ಉಪನ್ಯಾಸಕ ವೃಂದ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.ಶಿರ್ವ ಜಿ.ಪಂ.ಸದಸ್ಯ ವಿಲ್ಸನ್ ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾಸತನಾಡಿದರು. ಲಯನ್ಸ್ ಕ್ಲಬ್‌ನ ಅಧ್ಯಕ್ಷ ಜೂಲಿಯಾನ್ ರೊಡ್ರಿಗಸ್ ಸ್ವಾಗತಿಸಿದರು.ಉಪನ್ಯಾಸಕಿ ಪ್ರೊ| ರೆಬೆಕಾ ಕಾರ್ಯಕ್ರಮ ನಿರೂಪಿಸಿ, ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ| ಗೋಪಾಲಕೃಷ್ಣ ಸಾಮಗ ವಂದಿಸಿದರು.
ಶಿರ್ವ ಪರಿಸರದಲ್ಲಿ ತ್ಯಾಜ್ಯದೊಂದಿಗೆ ಬೀದಿನಾಯಿಗಳ ಕಾಟ ಬಹುದೊಡ್ಡ ಸಮಸ್ಯೆಯಾಗಿದ್ದು ಭೇಟಿಯ ವೇಳೆ ವೀಕ್ಷಿಸಿದೇªನೆ. ಬಂಗ್ಲೆಗುಡ್ಡೆ ಪ್ರದೇಶದ ಪಶುವೈದ್ಯ ಆಸ್ಪತ್ರೆಯ ಬಳಿ ಬೇಲಿ ಹಾಕಿ ಶೆಡ್ ನಿರ್ಮಿಸಿ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಆಶ್ರಯ ನೀಡಬೇಕು. ಗ್ರಾ.ಪಂ.ಮನೆ , ಹೊಟೇಲ್,ಕೋಳಿ, ಮಾಂಸದಂಗಡಿಗಳಿಂದ ಸಂಗ್ರಹಿಸಿದ ಮಾಂಸ ತ್ಯಾಜ್ಯಗಳನ್ನು ನಾಯಿಗಳಿಗೆ ಹಾಕಿದಾಗ ಆಹಾರವೂ ಆಗುತ್ತದೆ,ತ್ಯಾಜ್ಯ ವಿಲೇವಾರಿಯೂ ಆಗುತ್ತದೆ. ಗ್ರಾ.ಪಂ. ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತೀ ವಾರ್ಡ್‌ಗೆ ತ್ರಿಚಕ್ರ ವಾಹನ ಒದಗಿಸಿ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಸೂಕ್ತ ತರಬೇತಿ ನೀಡಿ ಪ್ರತಿ 12 ಗಂಟೆಗಳಿಗೊಮ್ಮೆ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಬಹುದು. ಈ ಬಗ್ಗೆ ಗ್ರಾ.ಪಂ.ಗೆ ಸೂಚಿಸಿದ್ದೇನೆ ಗ್ರಾ.ಪಂ.ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸಬೇಕಿದೆ.-ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಉಡುಪಿ ಜಿಲ್ಲಾಧಿಕಾರಿ ಉದಯವಾಣಿ ಸಚಿತ್ರ ವರದಿ
ಶಿರ್ವ ಪರಿಸರದ ಕಸ ತ್ಯಾಜ್ಯ ವಿಲೇ ಸಮಸ್ಯೆ,ಮಟ್ಟಾರು ಡಂಪಿಂಗ್ ಯಾರ್ಡ್, ಬೀದಿ ನಾಯಿಗಳ ಸಮಸ್ಯೆ ಮತ್ತು ಪಾಳು ಬಿದ್ದ ಕಟ್ಟಡದ ಬಗ್ಗೆ ಉದಯವಾಣಿ ಸಚಿತ್ರ ವರದಿ ಪ್ರಕಟಿಸಿತ್ತು. ಈ ಬಗ್ಗೆ ಜಿಲ್ಲಾದಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.