Advertisement
ಮಂಗಳೂರಿನಲ್ಲಿ ಮೇ 29ರಂದು ಸುರಿದ ಭಾರೀ ಮಳೆಯಿಂದ ಅನೇಕ ಮಂದಿ ಸಂತ್ರಸ್ತರಾಗಿದ್ದರು. ಈ ಬಗ್ಗೆ ರಾಜ್ಯ ರೆಡ್ ಕ್ರಾಸ್‌ನ ಡಾ| ಕುಮಾರ್, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಸದಸ್ಯರಾದ ರವಿ, ಸಾಕೇತ್ ಸುವರ್ಣ ಅವರು ಸಮೀಕ್ಷೆ ನಡೆಸಿ ದ.ಕ. ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ, ಚಾರ್ಟರ್ಡ್ ಆಕೌಂಟೆಂಟ್ ಶಾಂತಾರಾಮ ಶೆಟ್ಟಿ ಅವರಿಗೆ ವರದಿ ಸಲ್ಲಿಸಿದ್ದರು. ರಾಜ್ಯ ರೆಡ್‌ಕ್ರಾಸ್ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಹಾಗೂ ಶಾಂತಾರಾಮ ಶೆಟ್ಟಿ ಅವರ ಪ್ರಯತ್ನದಿಂದಾಗಿ ಕಿಟ್ ಗಳು ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಬಾರಿಗೆ ಲಭಿಸಿವೆ. ರೆಡ್ ಕ್ರಾಸ್ ಜಿಲ್ಲಾಧ್ಯಕ್ಷ ಶಾಂತಾರಾಮ ಶೆಟ್ಟಿ, ಕಾರ್ಯದರ್ಶಿ ಡಾ| ರಾಜೇಶ್, KUIDFC ಅಧಿಕಾರಿ ಪ್ರಭಾಕರ ಶರ್ಮಾ, ತಹಶೀಲ್ದಾರ್ ಗುರುಪ್ರಸಾದ್, ರೆಡ್ ಕ್ರಾಸ್ ವಿಪತ್ತು ನಿರ್ವಹಣ ಉಪಸಮಿತಿ ಅಧ್ಯಕ್ಷ ವೇಣು ಶರ್ಮ, ಸದಸ್ಯರಾದ ದಿನೇಶ್ ರಾವ್, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಅಡುಗೆ ಪರಿಕರ, ಹೊದಿಕೆ, ಸೀರೆ, ಧೋತಿ, ಬಾತ್ ಟವೆಲ್, ಸೊಳ್ಳೆ ಪರದೆ, ಕೊಡೆ, ಬಕೆಟ್ ಸಹಿತ 5,000 ರೂ. ಮೌಲ್ಯದ ವಸ್ತುಗಳನ್ನು ಕಿಟ್ ಒಳಗೊಂಡಿದೆ.