Advertisement

Red Alert; ಇಂದು(ಜು.15) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ, ಪಿಯು ಕಾಲೇಜುಗಳಿಗೆ ರಜೆ

07:33 AM Jul 15, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಿಸಿರುವ ಹಿನ್ನಲೆ ಅಂಗನವಾಡಿ, ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ (ಪಿಯುಸಿ ವರೆಗೆ) ಜು.15 ರಂದು (ಸೋಮವಾರ) ಜಿಲ್ಲಾಡಳಿತ ರಜೆ‌ ಘೋಷಣೆ ಮಾಡಿದೆ.

Advertisement

ಮುನ್ನೆಚ್ಚರಿಕಾ ಕ್ರಮವಾಗಿ ರಜೆ‌ ಘೋಷಿಸಲಾಗಿದ್ದು, ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿಲ್ಲ.

ಜಿಲ್ಲಾದ್ಯಂತ 24*7 ತುರ್ತು ಸೇವೆಗೆ 1077, 0824 2442590  ಟೋಲ್ ಫ್ರೀ ಸಂಖ್ಯೆ ಯನ್ನು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next