Advertisement

ಆರೋಗ್ಯದಲ್ಲಿ ಚೇತರಿಕೆ: ಮನೆಗೆ ಮರಳಿದ ಶಿವಣ್ಣ

03:00 PM Oct 17, 2018 | Team Udayavani |

ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ನಟ ಶಿವರಾಜ​ಕುಮಾರ್ ಇಂದು ಮಲ್ಯ ಆಸ್ಪತ್ರೆಯಿಂದ​ ಡಿಸ್ಚಾರ್ಜ್​ ಆಗಿದ್ದಾರೆ. ಚಳಿ ಜ್ವರ ಕಾಣಿಸಿಕೊಂಡಿದ್ದರಿಂದ ಶಿವಣ್ಣ​ ಎರಡು ದಿನಗಳ ಹಿಂದೆ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಸಂಜೆಯೇ ಶಿವಣ್ಣ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ವೈದ್ಯರ ಸಲಹೆಯ ಮೇರೆಗೆ ಇನ್ನು 2 ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದರು.

Advertisement

ಇಂದು ಸಂಪೂರ್ಣ ಗುಣಮುಖರಾದ ಕಾರಣ ಶಿವಣ್ಣರನ್ನು ವೈದ್ಯರು ಡಿಸ್ಚಾರ್ಜ್‌ ಮಾಡಿದ್ದಾರೆ. ಡಿಸ್ಚಾರ್ಜ್ ಆದ​ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ, ನನಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ವೈರಲ್ ಫೀವರ್ ಇದ್ದಿದ್ದರಿಂದ ವಿಶ್ರಾಂತಿ ಪಡೆಯಬೇಕಾಯ್ತು. ಆರು ತಿಂಗಳಿಗೊಮ್ಮೆ ರೆಗ್ಯುಲರ್ ಚೆಕ್​ಅಪ್​ಗೆ ಬರುತ್ತೇನೆ ಎಂದಿದ್ದಾರೆ.

ಇನ್ನು “ದಿ ವಿಲನ್’ ನಾಳೆ ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದ್ದು, ಈ​ ಚಿತ್ರದಿಂದ ಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚು ಜಾಸ್ತಿಯಾಗ್ತಿವೆ. ಅಲ್ಲದೇ ನಾಳೆ ಅಭಿಮಾನಿಗಳ ಜೊತೆ ಸಿನಿಮಾ ನೋಡಿ, ಶುಕ್ರವಾರ ಮೈಸೂರು ದಸರಾ ನೋಡಲು ಹೋಗುತ್ತೇನೆ. ಇಷ್ಟರಲ್ಲೇ “ದ್ರೋಣ’ ಸಿನಿಮಾ ಶೂಟಿಂಗ್​ನಲ್ಲಿ ಕೂಡಾ ಭಾಗಿಯಾಗುತ್ತೇನೆ ಎಂದು ಹೇಳಿದರು. ಯಾವುದೇ ಫುಡ್ ಡಯಟ್​ಗೆ ವೈದ್ಯರು ತಿಳಿಸಿಲ್ಲ. ಆರಾಮವಾಗಿ ಶೂಟಿಂಗ್​​​​ನಲ್ಲಿ ಭಾಗವಹಿಸುತ್ತೇನೆ ಎಂದರು ಶಿವಣ್ಣ.

Advertisement

Udayavani is now on Telegram. Click here to join our channel and stay updated with the latest news.

Next