Advertisement

ಬೃಹತ್‌ ಉದ್ಯೋಗ ಮೇಳಕ್ಕೆ ಸಜ್ಜು

10:37 AM Oct 13, 2018 | Team Udayavani |

ಸೇಡಂ: ನಿರುದ್ಯೋಗ ನಿವಾರಣೆಗಾಗಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಬೃಹತ್‌ ಉದ್ಯೋಗ ಮೇಳ ನಡೆಸಲು ತೀರ್ಮಾನಿಸಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳನ್ನು ಒಂದೆಡೆ ಸೇರಿಸಿ ನಿರುದ್ಯೋಗಿಗಳ ಬಾಳಿಗೆ ಬೆಳಕಾಗಲು ನಿರ್ಧರಿಸಿದ್ದಾರೆ.

Advertisement

ಸುಮಾರು 20 ವರ್ಷಗಳಿಂದಲೂ ಈ ಭಾಗದಲ್ಲಿ ಉದ್ಯೋಗದ ಅಭಾವ ಕಾಡುತ್ತಲೇ ಇದೆ. ಸ್ಥಳೀಯವಾಗಿ ಅನೇಕ ಸಿಮೆಂಟ್‌ ಕಾರ್ಖಾನೆಗಳು ಸ್ಥಾಪನೆಗೊಂಡರೂ ಉದ್ಯೋಗ ದೊರೆಯದೆ ಸಾವಿರಾರು ಯುವಕ-ಯುವತಿಯರು ಕಂಗಾಲಾಗಿದ್ದರು. ಈಗ ನಡೆಯಲಿರುವ ಉದ್ಯೋಗ ಮೇಳ ಸೇಡಂ ಇತಿಹಾಸದಲ್ಲೇ ಉದ್ಯೋಗ ಕಲ್ಪಿಸುವ ಬಹುದೊಡ್ಡ ವೇದಿಕೆಯಾಗಿ ಹೊರಹೊಮ್ಮಲಿದೆ. 

ಆನ್‌ಲೈನ್‌-ಆಫ್‌ಲೈನ್‌: ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಇಚ್ಚಿಸುವರ ನೋಂದಣಿಗಾಗಿಯೇ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್‌ ನೇತೃತ್ವದಲ್ಲಿ ಹೊಸದೊಂದು ವೆಬ್‌ಸೈಟ್‌ ಆರಂಭಿಸಲಾಗಿದೆ. (//jobs.sedam.org) ಇದರಲ್ಲಿ ಮಾಹಿತಿ ಕಲ್ಪಿಸಿದ ಕೂಡಲೇ ಐಡಿ ಸಂಖ್ಯೆಯೊಂದು ಅರ್ಜಿದಾರನ ಮೊಬೈಲ್‌ ಸಂಖ್ಯೆಗೆ ರವಾನೆಯಾಗುತ್ತದೆ. ಅಲ್ಲದೆ ಆಫ್‌ಲೈನ್‌ಗಾಗಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ.

ಪಟ್ಟಣದ ಎಸ್‌.ಬಿ.ಐ ಬ್ಯಾಂಕ್‌ ಪಕ್ಕದಲ್ಲಿರುವ ಕಂಪ್ಯೂಸಿಸ್‌ ಪಾಯಿಂಟ್‌, ರೈಲ್ವೆ ನಿಲ್ದಾಣದ ಬಳಿಯ ಪಾಟೀಲ ಝೆರಾಕ್ಸ್‌
ಅಂಗಡಿ, ಬಸ್‌ ನಿಲ್ದಾಣದ ಎದುರಿನ ಲಕ್ಕಿ ಝರಾಕ್ಸ್‌ನಲ್ಲಿ ಆಫಲೈನ್‌ ನೋಂದಣಿಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.
 
ಒಂದೇ ದಿನ 900 ಅರ್ಜಿ: ನ.18 ರಂದು ಪಟ್ಟಣದ ಮಾತೃಛಾಯಾ ಕಾಲೇಜು ಆವರಣದಲ್ಲಿ ನಡೆಯುವ ಉದ್ಯೋಗ ಮೇಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಕಲ್ಪಿಸಿದ ಒಂದೇ ದಿನದಲ್ಲಿ 900ಕ್ಕೂ ಹೆಚ್ಚು ಅರ್ಜಿಗಳು ಅಂತರ್ಜಾಲದ ಮೂಲಕ ಸಲ್ಲಿಕೆಯಾಗಿವೆ.

ಸ್ಥಳೀಯ ಕಾರ್ಖಾನೆಗಳು ಭಾಗಿಯಾಗುವಿಕೆ ನಿಶ್ಚಿತವಿಲ್ಲ : ವಿಧಾನಸಭೆ ಚುನಾವಣೆ ಪೂರ್ವದಿಂದಲೇ ಸ್ಥಳೀಯ ಸಿಮೆಂಟ್‌ ಕಾರ್ಖಾನೆಗಳಲ್ಲಿ ಉದ್ಯೋಗ ಕಲ್ಪಿಸುವಂತೆ ಯುವ ಜನತೆ ಬೇಡಿಕೆ ಇಟ್ಟಿದ್ದರು. ಆದರೆ ಈಗ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಸ್ಥಳೀಯ ಸಿಮೆಂಟ್‌ ಕಾರ್ಖಾನೆಗಳು ಪಾಲ್ಗೊಳ್ಳಲಿವೆ ಎಂಬುದು ಇನ್ನೂ ನಿತ್ಛಳವಾಗಿಲ್ಲ. ಅಲ್ಲದೆ ಸ್ಥಳೀಯ ಕಾರ್ಖಾನೆಗಳಲ್ಲಿ ಉದ್ಯೋಗ ಕಲ್ಪಿಸುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.

Advertisement

20 ಸಾವಿರಕ್ಕೂ ಹೆಚ್ಚು ಉದ್ಯೋಗ ಕಲ್ಪಿಸುವ ಗುರಿಯಿಟ್ಟುಕೊಂಡು ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಈ ಮೂಲಕ ನಿರುದ್ಯೋಗ ನಿವಾರಣೆಗೆ ಪಣತೊಟ್ಟಿದ್ದೇವೆ. ಜನರಿಗೆ ಮೂಲಭೂತ ಸೌಕರ್ಯಕ್ಕಿಂತಲೂ ಮಿಗಿಲಾಗಿ ಬದುಕಲು ದಾರಿ ಬೇಕು. ನನ್ನ ಕ್ಷೇತ್ರದ ಬಹುತೇಕ ಬಡ ಮತ್ತು ನಿರುದ್ಯೋಗಿಗಳ ಧ್ವನಿಯಾಗಿ ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸ್ಥಳೀಯ ಸಿಮೆಂಟ್‌ ಕಾರ್ಖಾನೆಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವಂತೆ ಕೋರುವ ಚಿಂತನೆ ನಡೆದಿದೆ.
 ರಾಜಕುಮಾರ ಪಾಟೀಲ ತೇಲ್ಕೂರ್‌, ಶಾಸಕ

„ಶಿವಕುಮಾರ ಬಿ. ನಿಡಗುಂದಾ

Advertisement

Udayavani is now on Telegram. Click here to join our channel and stay updated with the latest news.

Next