ಬೆಂಗಳೂರು: ಕರ ಸಂಗ್ರಹಣೆಯಲ್ಲಿ ಇಷ್ಟು ವರ್ಷಗಳ ತೂಕಡಿಸುತ್ತಾ ಸಾಗುತ್ತಿದ್ದ ಕಾರ್ಮಿಕ ಇಲಾಖೆ ಇದೇ ಮೊದಲ ಬಾರಿಗೆ ದಾಖಲೆ ನಿರ್ಮಿಸಿದೆ.
ಈ ವರ್ಷಾಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ (ಮಾರ್ಚ್ 2022) ಕಾರ್ಮಿಕ ಇಲಾಖೆ 1489 ಕೋಟಿ ರೂ. ಕರ ಸಂಗ್ರಹಣೆ ಮಾಡಿದೆ. ಇದು ಇಲಾಖೆಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಅಧಿಕಾರಕ್ಕೆ ಬಂದ ನಂತರ ಇದುವರೆಗೆ 8829.47 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿತ್ತು. ಕಳೆದ ನವೆಂಬರ್ ತಿಂಗಳಲ್ಲಿ 88 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ ಕಾರ್ಮಿಕ ಇಲಾಖೆ ಸಚಿವ ಶಿವರಾಂ ಹೆಬ್ಬಾರ್ ಅವರು ಕರ ಸಂಗ್ರಹಣೆ ಅಭಿಯಾನಕ್ಕೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಇಲಾಖೆ 1489 ಕೋಟಿ ರೂ. ಸಂಗ್ರಹ ಮಾಡಲಾಗಿದೆ.
ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ದಮನ ನೀತಿ: ಸಿದ್ಧರಾಮಯ್ಯ
ಅದೇ ರೀತಿ ಈ ವರ್ಷ 122 ಖಾಸಗಿ ಹಾಗೂ ಸರಕಾರಿ ಆಸ್ಪತ್ರೆ ಜತೆಗೆ ಕಾರ್ಮಿಕರ ಚಿಕಿತ್ಸೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.