Advertisement

ಮೇ ತಿಂಗಳಲ್ಲಿ ದಶಕದ ದಾಖಲೆ ಮಳೆ 

12:05 PM May 28, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯು ದಶಕದಲ್ಲೇ ಮೇ ತಿಂಗಳಲ್ಲಿ ಸುರಿದ ದಾಖಲೆ ಮಳೆ ಎನಿಸಿದೆ. ಬಂಗಾಳ ಕೊಲ್ಲಿಯ ಪೂರ್ವ ಹಾಗೂ ಪಶ್ಚಿಮ ಭಾಗಗಳಲ್ಲಿ ವಾಯುಭಾರ ಕುಸಿತದಿಂದ ಮೇಲ್ಮೆ„ಸುಳಿಗಾಳಿ ಸೃಷ್ಟಿಯಾಗಿದ್ದು, ಪರಿಣಾಮವಾಗಿ ಕರ್ನಾಕಟದ ದಕ್ಷಿಣ ಒಳನಾಡಿನ  ಹಲವಾರು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.

Advertisement

ಅದರಂತೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಮಳೆಯಾಗಿದ್ದು, ಯಲಹಂಕ, ಆನೇಕಲ್‌, ನೆಲಮಂಗಲ, ಹೊಸಕೋಟೆ, ಬೆಂಗಳೂರು ನಗರ, ವಿಮಾನ ನಿಲ್ದಾಣ, ಎಚ್‌ಎಎಲ್‌ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಳೆಯಾಗಿದೆ. 

2012ರಲ್ಲಿ ಸುರಿದ 49.1 ಮಿಲಿ ಮೀಟರ್‌ (5 ಸೆಂಟಿ ಮೀಟರ್‌) ಮಳೆಯು ಹತ್ತು ವರ್ಷಗಳಲ್ಲಿನ ಅತಿಹೆಚ್ಚು ಮಳೆಯಾಗಿತ್ತು. ಆದರೆ, ಶುಕ್ರವಾರ ರಾತ್ರಿ ಯಲಹಂಕ ಭಾಗದಲ್ಲಿ 11 ಸೆಂಟಿ ಮೀಟರ್‌ ಮಳೆಯಾಗಿರುವುದು ದಾಖಲೆಯಾಗಿದೆ. ರಾಜ್ಯದಲ್ಲಿ ಇನ್ನೂ ಎರಡು ಮೂರು ದಿನಗಳು ಮಳೆ ಮುಂದುವರಿಯಲಿದೆ. ನಗರದಲ್ಲಿ ಮುಂದಿನ ಎರಡು ದಿನಗಳು ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ಈ ಕುರಿತು “ಉದಯವಾಣಿ’ಗೆ ಮಾಹಿತಿ ನೀಡಿದ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸುಂದರ್‌ ಎಂ. ಮೇತ್ರಿ, “ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಶುಕ್ರವಾರ ರಾತ್ರಿ ಯಲಹಂಕದಲ್ಲಿ 11 ಸೆಂಟಿ ಮೀಟರ್‌ ಮಳೆಯಾಗಿರುವುದು ದಾಖಲೆ ಎನಿಸಿದೆ. ನಗರದಲ್ಲಿ ಇನ್ನು ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ’ ಎಂದರು. 

ಸಾರ್ವಕಾಲಿಕ ದಾಖಲೆ 153.9ಮಿ.ಮೀ!
ಬೆಂಗಳೂರು ನಗರದಲ್ಲಿ 1909ರ ಮೇ 6ರಂದು ಸುರಿದ 153.9 ಮಿ.ಮೀ ಮಳೆಯು ನಗರದಲ್ಲಿ ಮೇ ತಿಂಗಳಲ್ಲಿ ಸುರಿದ ಸರ್ವಕಾಲಿಕ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

Advertisement

ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ದಾಖಲಾದ ಮಳೆ ವಿವರ
ವರ್ಷ    ಮಳೆಯ ಪ್ರಮಾಣ (ಮಿಲಿ ಮೀಟರ್‌ಗಳಲ್ಲಿ)
2016    46.6
2015    66.4 
2014    19.3
2013    36.2
2012    49.1
2011    44.7
2010    26.5
2009    50.2
2008    18.9
2007    39.2

ನಗರದಲ್ಲಿ ಶನಿವಾರ ಸುರಿದ ಮಳೆಯ ಪ್ರಮಾಣ
ಸ್ಥಳ            ಪ್ರಮಾಣ(ಮಿಲಿ ಮೀಟರ್‌ಗಳಲ್ಲಿ)
ಯಲಹಂಕ            84 
ಆರ್‌.ಆರ್‌.ನಗರ    53
ಕೆಂಗೇರಿ               70
ಲಾಲ್‌ಬಾಗ್‌         54 
ಕೆ.ಆರ್‌ ಪುರಂ       76
ಉತ್ತರಹಳ್ಳಿ          65
ರಾಜಾಜಿನಗರ      54 
(ರಾತ್ರಿ 9ರವಗೆಗಿನ ಮಾಹಿತಿ)

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next