Advertisement
ಜಿಲ್ಲೆಯಲ್ಲಿ ಜೂನ್‌ನಿಂದಲೇ ನಿಧಾನವಾಗಿ ಆರಂಭಗೊಂಡ ಮಳೆ ಜುಲೈನಲ್ಲಿಯೇ ಅಬ್ಬರಿಸಿತ್ತು. ಪ್ರತಿ ವರ್ಷ ವಾಡಿಕೆಯಂತೆ ಸರಾಸರಿ 630 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಜುಲೈನಲ್ಲಿಯೇ 630ಕ್ಕಿಂತ ಹೆಚ್ಚು ಮಳೆ ಸುರಿದಿತ್ತು.
Related Articles
Advertisement
ಬೆಳೆಗಳಿಗೆ ರೋಗ ಭೀತಿ: ಅತಿ ಹೆಚ್ಚು ಮಳೆ ಆಗುತ್ತಿರುವುದರಿಂದ ಹಾಗೂ ಪ್ರತಿದಿನ ಮೋಡ ಕವಿದ ವಾತಾವರಣವಿರುವುದರಿಂದ ಬೆಳೆಗಳಿಗೆ ರೋಗ ಭೀತಿ ಎದುರಾಗುತ್ತಿದೆ. ಈಗಾಗಲೇ ಅಲ್ಲಲ್ಲಿ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು, ರೈತರಲ್ಲಿ ಆತಂಕ ಮೂಡುವಂತೆ ಮಾಡಿದೆ. ಅಲ್ಲದೆ, ಭತ್ತದ ಬೆಳೆಗೆ ಫಸಲ್ ಬಿಮಾ ವಿಮೆ ಮಾಡಿಸದ ರೈತರು ನಷ್ಟ ಅನುಭವಿಸುವ ಸಾಧ್ಯತೆಯೇ ಹೆಚ್ಚಾಗಿದೆ.
ಹಿಂಗಾರು ಮಳೆಯಿಂದ ರೈತರಿಗೆ ಸಂಕಷ್ಟ: ಆಗಸ್ಟ್ ಹಾಗೂ ಸೆಪ್ಟೆಂಬರ್‌ವರೆಗೂ ರೈತರು ಬಿತ್ತನೆಯಲ್ಲಿ ತೊಡಗಿದ್ದರು. ಆದರೆ, ವಿಪರೀತ ಮಳೆಯಿಂದ ತಡವಾಗಿ ರೈತರು ಬಿತ್ತನೆ ಕಾರ್ಯ ನಡೆಸಿದ್ದಾರೆ. ಅಲ್ಲದೆ, ಅಕ್ಟೋಬರ್ ಮೊದಲ ವಾರದವರೆಗೂ ಬಿತ್ತನೆ ಮಾಡಲಾಗಿದೆ. ಈಗ ಹಿಂಗಾರು ಮಳೆ ಸುರಿಯುತ್ತಿದ್ದು ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ.
ಬಿತ್ತನೆ ಕಾರ್ಯವೂ ಕುಂಠಿತವಾಗಿದ್ದು ಈಗಿರುವ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕಳೆದ 4ದಿನ ಸುರಿದ ಮಳೆಗೆ 430ಕ್ಕೂ ಹೆಕ್ಟೇರ್‌ನಲ್ಲಿ ಕೃಷಿ ಬೆಳೆಗಳು ನಾಶವಾಗಿವೆ.
ಅ.15-21ರವರೆಗೆ
160.5 ಮಿ.ಮೀ ಮಳೆ
ತಾಲೂಕು ಮಳೆ (ಮಿ.ಮೀ)
ಕೆ.ಆರ್.ಪೇಟೆ 144.3
ಮದ್ದೂರು 159.5
ಮಳವಳ್ಳಿ 193.3
ಮಂಡ್ಯ 222.6
ನಾಗಮಂಗಲ 103.9
ಪಾಂಡವಪುರ 163.7
ಈ ವರ್ಷ ವಿಚಿತ್ರದಂತೆ ಮಳೆ ಸುರಿಯುತ್ತಿದೆ. ರೈತರು ಅತಿ ಹೆಚ್ಚು ಯೂರಿಯಾ ಬಳಸುತ್ತಿರುವು ದರಿಂದ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಇಲಾಖೆಯಿಂದ ರೈತರಿಗೆ ಜಾಗೃತಿ ಮೂಡಿಸ ಲಾಗುತ್ತಿದೆ. ಭತ್ತದ ಬೆಳೆಗೆ ವಿಮೆ ಮಾಡಿಸಲು ತಿಳಿಸಲಾಗಿತ್ತು. ಆದರೆ ಯಾವ ರೈತರೂ ವಿಮೆ ಮಾಡಿಸಿಲ್ಲ. – ಅಶೋಕ್, ಕೃಷಿ ಜಂಟಿ ನಿರ್ದೇಶಕರು, ಮಂಡ್ಯ
– ಎಚ್.ಶಿವರಾಜು