ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರದಂದು ಕನಿಷ್ಠ ತಾಪಮಾನ 5.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ, ಇದು ಋತುವಿನ ಸರಾಸರಿಗಿಂತ ಎರಡು ಹಂತಗಳಿಗಿಂತ ಕಡಿಮೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ.
ಶುಕ್ರವಾರ ಮತ್ತು ಶನಿವಾರ ನಗರದಲ್ಲಿ ಕನಿಷ್ಠ ತಾಪಮಾನ 10.7 ಮತ್ತು 10.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ದೇಶದ ಹಲವಾರು ಭಾಗಗಳಲ್ಲಿ ದಾಖಲೆಯ ತಾಪಮಾನ ಕುಸಿತ ದಾಖಲಾಗಿದೆ.
ಅಂಬಾಲಾ, ಡೆಹ್ರಾಡೂನ್, ಬರೇಲಿ ಮತ್ತು ವಾರಾಣಸಿಯಲ್ಲಿ ದಟ್ಟವಾದ ಮಂಜು ಕವಿದಿದ್ದು ಗೋಚರತೆ ಬೆಳಗ್ಗೆ 5.30 ಕ್ಕೆ 25 ಮೀಟರ್‌ನಷ್ಟು ದಾಖಲಾಗಿದೆ. ಚಂಡೀಗಢ, ಪಟಿಯಾಲ, ಬಹರೆಚ್, ಗಯಾ, ಪೂರ್ಣಿಯಾ, ಕೈಲಾಶಹರ್ ಮತ್ತು ಅಗರ್ತಲಾದಲ್ಲಿ 50 ಮೀಟರ್‌ಗಳಷ್ಟು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ಇಲಾಖೆ ಪ್ರಕಾರ, ಗೋಚರತೆಯು 0 ಮತ್ತು 50 ಮೀಟರ್‌ಗಳ ನಡುವೆ ‘ಅತ್ಯಂತ ದಟ್ಟವಾದ ಮಂಜು. 51 ಮತ್ತು 200 ಮೀಟರ್‌ಗಳು ‘ದಟ್ಟ ಮಂಜು’, 201 ಮತ್ತು 500 ಮೀಟರ್‌ಗಳು- ಮಧ್ಯಮ ಮಂಜು ಮತ್ತು 501 ಮತ್ತು 1,000 ಮೀಟರ್‌ಗಳು ಆಗಿದ್ದರೆ ತೀರ ಕಡಿಮೆಯಾದ ಮಂಜು ಕವಿದಿರುತ್ತದೆ.
ಹವಾಮಾನ ತಜ್ಞರು ಭಾನುವಾರದಂದು ಮುಖ್ಯವಾಗಿ ಸ್ಪಷ್ಟವಾದ ಆಕಾಶವನ್ನು ಮುನ್ಸೂಚಿಸಿದ್ದಾರೆ, ಗರಿಷ್ಠ ತಾಪಮಾನವು ಸುಮಾರು 19 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಗೊಳ್ಳುವ ಸಾಧ್ಯತೆಯಿದೆ. ರಾಷ್ಟ್ರ ರಾಜಧಾನಿಯಲ್ಲಿ ಬೆಳಗ್ಗೆ 8.30ಕ್ಕೆ ಶೇ.97ರಷ್ಟು ಆರ್ದ್ರತೆ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.