ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳ ಉತ್ಸವ ಹಾಗೂ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Advertisement
ತುಳುವರಿಗೆ ಅವರ ಮಾತೃಭಾಷೆಯ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇದೆ. ತುಳುವಿಗೆ ರಾಜ್ಯದ ಹೆಚ್ಚುವರಿ ಭಾಷೆಯಾಗಿ ಮಾನ್ಯತೆ ನೀಡುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಜತೆಗೆ ಮಾತನಾಡಿ ಪ್ರಯತ್ನಿಸುತ್ತೇವೆ ಎಂದರು.
ಕಂಬಳ ಸಮಿತಿಯವರು ಬಿಡಿಎ ಯಿಂದ ಸಿ.ಎ. ನಿವೇಶನ ಕೊಡಿಸ ಬೇಕೆಂದು ವಿನಂತಿಸಿದ್ದಾರೆ. ಎಲ್ಲಿ ನಿವೇಶನ ಬೇಕು ಎಂದು ಅರ್ಜಿ ಸಲ್ಲಿಸಿದರೆ ಅಲ್ಲಿ ನಿವೇಶನ ಕೊಡಿಸುವ ಪ್ರಯತ್ನ ಮಾಡುತ್ತೇವೆ. ಪ್ರತೀವರ್ಷ ನವೆಂಬರ್, ಡಿಸೆಂಬರ್‌ನಲ್ಲಿ ಬೆಂಗಳೂರು ಕಂಬಳ ಆಯೋಜಿಸಿ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು. ಅಧ್ಯಾದೇಶ ಹೊರಡಿಸಿದ್ದೆ
ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ನ್ಯಾಯಾಲಯ ಕಂಬಳ, ಜಲ್ಲಿಕಟ್ಟು ಮಾಡಬಾರದು ಎಂದಿತ್ತು. ಆದರೆ ಸಾಮಾನ್ಯ ಜನರ ಕ್ರೀಡೆ ಎಂದು ಪರಿಗಣಿಸಿ ಕಂಬಳ ಕ್ರೀಡೆ ಬೆಳೆಯಬೇಕು, ಉಳಿಯಬೇಕು ಎಂಬ ಉದ್ದೇಶದಿಂದ ನಾನು ಅಧ್ಯಾದೇಶ ಹೊರಡಿಸಿದ್ದೆ. ಹಾಗಾಗಿ ಈಗ ಕಂಬಳ ಕ್ರೀಡೆ ಉಳಿದುಕೊಂಡಿದೆ. ಇದನ್ನು ಬೆಳೆಸುವ ಕೆಲಸ ಆಗಬೇಕು ಎಂದು ತಿಳಿಸಿದರು.