ಮನಾಲಿ: ಕಳೆದ ಶನಿವಾರವಷ್ಟೇ ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಿದ ಅಟಲ್ ಸುರಂಗದಲ್ಲಿ ಕೇವಲ
72 ಗಂಟೆಗಳ ಅವಧಿಯಲ್ಲಿ 3 ಅಪಘಾತಗಳು ಸಂಭವಿಸಿವೆ.
ಸುರಂಗ ಉದ್ಘಾಟನೆ ಆದಾಗಿನಿಂದಲೂ ಇಲ್ಲಿ ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆ, ಪ್ರವಾಸಿಗರಿಂದ ಅನುಚಿತ ವರ್ತನೆ, ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗು ತ್ತಲೇ ಇವೆ.
ಅಲ್ಲದೆ, ವಾಹನ ಚಲಾಯಿಸುತ್ತಲೇ ಅನೇಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ ಎಂದು ಗಡಿ ರಸ್ತೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 3 ರಂದು 9.02 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದರು. ಸುರಂಗ ಮಾರ್ಗದಲ್ಲಿ ಗರಿಷ್ಠ ವೇಗದ ಮಿತಿಯನ್ನು 80 ಕಿ.ಮೀ ನಿಗದಿಪಡಿಸಲಾಗಿದೆ.
ಇದನ್ನೂ ಓದಿ:ಹತ್ರಾಸ್ ಘಟನೆ ಭಯಾನಕ : ಸಾಕ್ಷ್ಯ ರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದೀರಿ: ಸುಪ್ರೀಂ ಪ್ರಶ್ನೆ