ಮಹಾಸಭಾದ ವತಿಯಿಂದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪುರಸ್ಕಾರ ನೀಡಲು ಆರಂಭಿಸಿದ್ದೇವೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸಾದ್ ಹೇಳಿದರು.
Advertisement
ನಗರದ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಭಾನುವಾರ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಹಾನಗಲ್ ಕುಮಾರ ಸ್ವಾಮೀಜಿಯವರ 150ನೇ ಪುಣ್ಯಸ್ಮರಣೆ ಹಾಗೂ 2016-17ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ವೀವಿ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು. ಈ ದಿನ ವೀರಶೈವ ಸಮುದಾಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ನೀಡುತ್ತಿದೆ. ಸಮಾಜದ ಋಣವನ್ನು ತೀರಿಸುವ ಮನೋಭಾವವನ್ನು ಸಮುದಾಯದ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಜೊತೆಗೆ, ಸಮಾಜಕ್ಕೆ ಪ್ರತಿಭೆಯಿಂದ ಸುಸಂಸ್ಕೃತ ಸಮಾಜ ಎಂಬ ಹೆಸರನ್ನು ತರಬೇಕು ಎಂದರು.
ಅವರ ಋಣ ನಮ್ಮೆಲ್ಲರ ಮೇಲಿದೆ. ಅವರನ್ನು ಸ್ಮರಿಸುವ ಮೂಲಕ ಸಮುದಾಯಕ್ಕೆ ಒಳ್ಳೆಯ ಹೆಸರನ್ನು ತರುವ ಮೂಲಕ ಸಮಾಜದ ಒಳಿತಿಗೆ ಮುಂದಾಗೋಣ ಎಂದು ಅವರು ಹೇಳಿದರು. ವೀರಶೈವ-ಲಿಂಗಾಯಿತ ಒಂದೇ ಆಗಿದ್ದು, ರಾಜಕೀಯ ಕಾರಣಗಳಿಗಾಗಿ ಸಮುದಾಯ ಒಡೆದು ಹೋಗುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಲಿಂಗ ಪೂಜೆ ಮಾಡುವ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ¨ªೇವೆ ಎನ್ನುವ ಅಹಂಕಾರ ಮತ್ತು ಕಡಿಮೆ ಅಂಕಗಳಿಸಿದ ಮಕ್ಕಳನ್ನು ಕೀಳರಿಮೆಯಿಂದ ಕಾಣದೇ ಎಲ್ಲರೊಂದಿಗೆ ಪ್ರೀತಿ ವಿಶ್ವಾಸವನ್ನು ಬೆಳಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
Related Articles
Advertisement
ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಂಧ್ರಪ್ರದೇಶದ ಮಹಾಸಭಾದ ರಾಜ್ಯಾಧ್ಯಕ್ಷ ಕೆ. ರಾಮಚಂದ್ರ ರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ, ವೀವಿ ಸಂಘದ ಅಧ್ಯಕ್ಷ ಉಡೇದ ಬಸವರಾಜ, ಮಾಜಿ ಶಾಸಕ ಟಿ.ಎಂ. ಚಂದ್ರಶೇಖರ ಸ್ವಾಮಿ, ವೀರಶೈವ ಸಮುದಾಯದ ಮುಖಂಡರಾದ ಹಿರಿಯ ವಕೀಲ ಬಿ.ವಿ. ಬಸವರಾಜ, ಡಾ| ಎಸ್.ಜೆ.ವಿ. ಮಹಿಪಾಲ್, ಅರವಿ ಬಸನವಗೌಡ, ಜಾನೇಕುಂಟೆ ಬಸವರಾಜ, ಡಾ| ಸೋಮೇಶ್ವರ ಗಡ್ಡಿ, ಅಂಗಡಿ ಶಶಿಕಲಾ, ಎಂ. ಶರಣ ಬಸವನಗೌಡ, ಎಚ್. ಮಹಾರುದ್ರ ಗೌಡ, ಕೆ.ವಿ. ಬಸವರಾಜ, ಆರ್.ಪಿ. ಪ್ರಕಾಶ, ಗೋನಾಳ್ ವಿರೂಪಾಕ್ಷ ಗೌಡ, ಅಟವಾಳಿ ಕೊಟ್ರೇಶ, ಚನ್ನಬಸವನ ಗೌಡ, ಚಂದ್ರಶೇಖರ ಗೌಡ, ಷಡಕ್ಷರಯ್ಯ ಸ್ವಾಮಿ, ವಿಜಯಕುಮಾರ ಗೌಡ, ಮಲ್ಲನ ಗೌಡ, ಹತ್ತಿ ಶರಣಬಸಪ್ಪ, ಕಾಮರೆಡ್ಡಿ ಚಂದ್ರಶೇಖರ, ಪಲ್ಲೇದ ಜಗದೀಶ, ಬಿ.ಪ್ರಭುವನ ಗೌಡ, ಎಚ್. ಎಂ.ಕೊಟ್ರಯ್ಯ, ಎಲ್.ನಾಗರಾಜ, ಸಿ.ಕೆ.ಎಂ. ಬಸವಲಿಂಗಯ್ಯ ಸ್ವಾಮಿ, ಎಂ. ಶಿವಶಂಕರ ಗೌಡ, ಎಂ.ವಿಶ್ವನಾಥ ಗೌಡ, ಜವಳಿ ವೀರೇಶ, ಶ್ರೀಕಾಂತ, ಬಿ. ರವಿಗೌಡ
ಇತರರು ಇದ್ದರು.