Advertisement
ನಗರದ ಫ್ರೀಡಂ ಪಾರ್ಕ್‌ನಲ್ಲಿ ರೆಡ್ ರಿಬ್ಬನ್ ಸಂಸ್ಥೆ ಆಯೋಜಿಸಿರುವ ಮೂರು ದಿನಗಳ ಬೃಹತ್ ಸಸ್ಯಹಾರಿ ಆಹಾರ ಸಂತೆ ನ.26ರವರೆಗೆ ನಡೆಯಲಿದೆ. ಸಂತೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖ ತಿನಿಸುಗಳು ಸೇರಿದಂತೆ, ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳ ತಿಂಡಿ-ತಿನಿಸುಗಳು ಆಹಾರ ಪ್ರಿಯರಿಗೆ ಮತ್ತಷ್ಟು ರುಚಿ ನೀಡಲಿವೆ.
Related Articles
Advertisement
ಜ್ಯೂಸ್ ಮೇಲೆ ನಿಮ್ಮ ಸೆಲ್ಫಿ!: ಬೆಂಗಳೂರಿನ ಕೋರಮಂಗಲದ ಸೆಲ್ಫಿ ಕೆಫೆ ಮಳಿಗೆಯು ಸಂತೆಗೆ ಬರುವ ಆಹಾರ ಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ಮಳಿಗೆಯ ಮುಂದಿರುವ ಕ್ಯಾಮೆರಾ ಮುಂದೆ ನಿಂತು ಗ್ರಾಹಕರು ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಕೇವಲ 30 ಸೆಕೆಂಡ್‌ನಲ್ಲಿ ತಾವು ಬಯಸುವ ಜ್ಯೂಸ್ ಮೇಲೆ ಆ ಫೋಟೋ ಪದರ ಬರಲಿವೆ. ಇದು ಹಾಂಕಾಂಗ್ ಮೂಲದ ತಂತ್ರಜ್ಞಾನವಾಗಿದ್ದು, ಹಣ್ಣುಗಳಿಂದ ತಯಾರಿಸಿದ ಕ್ರೀಮ್‌ನಿಂದ ಈ ರೀತಿಯ ಫೋಟೋ ಮುದ್ರಣವಾಗಲಿದ್ದು, ಜತೆಗೆ ಆ ಪದರ ತಿನ್ನಲು ಸಹ ಯೋಗ್ಯವಾಗಿದೆ ಎಂದು ಮಳಿಗೆದಾರರು ತಿಳಿಸಿದ್ದಾರೆ.
50 ರೂ. ಪ್ರವೇಶ ಶುಲ್ಕ ಸಾರ್ವಜನಿಕರ ಬೇಸರ: ಆಹಾರ ಸಂತೆಯಲ್ಲಿ ಭಾಗಿಯಾಗಲು ಪ್ರತಿ ವ್ಯಕ್ತಿಗೆ 50 ರೂ. ಪ್ರವೇಶ ಶುಲ್ಕ ನಿಗದಿಪಡಿಸಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಇಂತಹ ಸಂತೆಗಳಿಗೆ ಪ್ರವೇಶ ಉಚಿತವಾಗಿರುತ್ತದೆ. ಆದರೆ, ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಸಂತೆ ಪ್ರವೇಶಕ್ಕೆ ಪ್ರತಿ ವ್ಯಕ್ತಿಗೆ 50 ರೂ. ನಿಗದಿಪಡಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.