Advertisement
ಅವರು ರವಿವಾರ ನಗರದ ಪುರಭವನದಲ್ಲಿ ನಡೆದ ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ ಮಂಗಳೂರು ವಲಯದ 12ನೇ ವಾರ್ಷಿಕೋತ್ಸವ, ಶ್ರೀ ಗುರುಪಾದುಕಾರಾಧನೆ ಹಾಗೂ 100 ಮಂದಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕರಾವಳಿ ಭಾಗದ ನಾವು ಕಡಲನ್ನು ಗುರುವಾಗಿ ಸ್ವೀಕರಿಸಬೇಕು. ಕಡಲುಕ್ರಿಯಾಶೀಲತೆಗೆ ಉತ್ತಮ ಉದಾಹರಣೆಯಾಗಿದ್ದು, ಇದರಿಂದ ಜೀವನ ಸಾರ್ಥಕವಾಗುತ್ತದೆ. ಎಲ್ಲೋ ಒಂದು ಕಡೆ ರಾಮ ಮಂದಿರ ನಿರ್ಮಾಣಕ್ಕಿಂತಲೂ ಪ್ರತಿಯೊಬ್ಬರ ಮನಸ್ಸಿನಲ್ಲೂ ಮಂದಿರ ನಿರ್ಮಾಣವಾದರೆ ರಾಷ್ಟ್ರ ಪ್ರೇಮವೂ ಬೆಳೆಯುತ್ತದೆ. ತುಳು ಭಾಷೆ ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ರಾಜಕೀಯ ಇಚ್ಛಾ
ಶಕ್ತಿ ಅಥವಾ ತುಳುವರ ಇಚ್ಛಾಶಕ್ತಿಯ ಕೊರತೆಯಿಂದ ಇನ್ನೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಂಡಿಲ್ಲ. ಇದಕ್ಕಾಗಿ ಎಲ್ಲರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ತುಳುವಿಗೆ ಸಾಂವಿಧಾನಿಕ ಮಾನ್ಯತೆ ಲಭ್ಯವಾಗಲಿದೆ ಎಂದು ಸ್ವಾಮೀಜಿ ಆಶಿಸಿದರು. ಒಡಿಯೂರು ಕ್ಷೇತ್ರದಲ್ಲಿ ನಡೆಯಲಿರುವ ತುಳುನಾಡ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ಅತಿಥಿಗಳಾಗಿ ಸಾಧ್ವಿ ಶ್ರೀ ಮಾತಾನಂದಮಯಿ, ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್, ಉದ್ಯಮಿಗಳಾದ ಮಹಾಬಲ ಕೊಟ್ಟಾರಿ, ಜಯಶೀಲ ಅಡ್ಯಂತಾಯ ಅಡ್ಯಾರುಗುತ್ತು, ಕೆ. ಯತೀಶ ಸಾಲ್ಯಾನ್, ಕೆ. ಅಚ್ಯುತ ಭಟ್, ಜಗನ್ನಾಥ ಶೆಟ್ಟಿ, ನ್ಯಾಯವಾದಿ ಅನಿತಾ ಕಿಣಿ, ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಕರ್ಕೇರ, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ಬಳಗದ ಗೌರವ ಸಲಹೆಗಾರ ಟಿ. ತಾರಾನಾಥ ಕೊಟ್ಟಾರಿ ಭಾಗವಹಿಸಿದ್ದರು.
Related Articles
Advertisement
ಗೌರವ, ನೆರವು ವಿತರಣೆಕಾರ್ಯಕ್ರಮದಲ್ಲಿ ನಿವೃತ್ತ ಯೋಧರು, ಹೈನುಗಾರರು, ಮಹಿಳಾ ಕಲಾವಿದರು, ಸಮಾಜ ಸೇವಕರು, ಕೃಷಿಕರನ್ನು ಗೌರವಿಸಲಾಯಿತು. ಅಶಕ್ತರಿಗೆ ಕೃತಕ ಕಾಲು ಹಾಗೂ ಗಾಲಿ ಕುರ್ಚಿ ವಿತರಿಸಲಾಯಿತು ವಿದ್ಯಾರ್ಥಿಗಳು ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ವಿತರಿಸ ಲಾಯಿತು.