Advertisement

ಅಂಬೇಡ್ಕರ್‌ರಿಂದ  ಬೌದ್ಧ ಧರ್ಮಕ್ಕೆ ಮರುಹುಟ್ಟು

05:53 PM Oct 17, 2021 | Team Udayavani |

ಮಂಡ್ಯ: ಭಾರತದಲ್ಲಿ ಅವನತಿಯ ಹಾದಿಯಲ್ಲಿದ್ದ ಬೌದ್ಧ ಧರ್ಮಕ್ಕೆ ಮರು ಹುಟ್ಟು ನೀಡಿದವರು ಡಾ.ಬಿ.ಆರ್‌. ಅಂಬೇಡ್ಕರ್‌ ಎಂದು ಬುದ್ಧಿಸ್ಟ್‌ ಟ್ರಸ್ಟ್‌ ಆಫ್‌ ಇಂಡಿಯಾ ಅಧ್ಯಕ್ಷ ವಕೀಲ ಎಂ.ಮಹೇಶ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಉದ್ಯಾನದ ಸಂವಿ ಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಬಳಿ ಬೋಧಿಸತ್ವ ಪುರುಷರ ಸ್ವಸಹಾಯ ಸಂಘ ಮತ್ತು ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಸಾಮ್ರಾಟ್‌ ಅಶೋಕ ವಿಜಯದಶಮಿ ಹಾಗೂ ಬೋಧಿಸತ್ವ ಡಾ.ಬಿ.ಆರ್‌.ಅಂಬೇಡ್ಕರ್‌ರ 65ನೇ ದಮ್ಮಚಕ್ರ ಪರಿವರ್ತನಾ ದಿನಾಚರಣೆ ಮತ್ತು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆ, ಹಿಂಸೆ, ಅರ್ಥಹೀನ ಆಚರಣೆಗಳು, ಸ್ತರ ವ್ಯವಸ್ಥೆ, ಅಸಮಾನತೆ ಮತ್ತು ಕ್ರೌರ್ಯಗಳಿಂದ ಬೇಸತ್ತು ಸ್ವಾಭಿಮಾನಕ್ಕಾಗಿ ಮತ್ತು ಸಮಾಜದ ಅಂಚಿನಲ್ಲಿ ಬದುಕುತ್ತಿರುವವರನ್ನು ಮುಖ್ಯ ವಾಹಿನಿಗೆ ತರ ಲೆಂದೇ ಅಂಬೇಡ್ಕರ್‌ ಬೌದ್ಧ ಧರ್ಮ ಸ್ವೀಕರಿಸಿದರು.

ಇದನ್ನೂ ಓದಿ:- ಯಶಸ್ವಿಯಾಗಿ ಸಂಪನ್ನಗೊಂಡ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ

ಈ ವೇಳೆಗಾಗಲೇ ಬೌದ್ಧ ಧರ್ಮ ಅಳಿವಿನ ಅಂಚಿನಲ್ಲಿತ್ತು. ಅಂಬೇಡ್ಕರ್‌ ಸೇರ್ಪಡೆಯಾದ ನಂತರ ಅದು ಮರು ಜೀವ ಪಡೆಯಿತು ಎಂದು ಹೇಳಿದರು. ಬುದ್ಧರು ಸ್ಥಾಪಿಸಿದ ಬೌದ್ಧ ಧರ್ಮದಲ್ಲಿ ಕರುಣೆ, ಮೈತ್ರಿ, ಪ್ರೀತಿ, ವಾತ್ಸಲ್ಯ ಮತ್ತು ಸಮಾನತೆ ಸಂದೇಶಗಳು ಸಾರಲ್ಪಟ್ಟವು. ಹೀಗಾಗಿ, ಅಂಬೇಡ್ಕರ್‌ ಈ ಧರ್ಮ ಆಯ್ಕೆ ಮಾಡಿಕೊಂಡರು. ಬುದ್ಧ ತನ್ನ ತತ್ವಗಳಲ್ಲಿ ದೇವರು ಮತ್ತು ಆತ್ಮವನ್ನು ನಿರಾಕರಿಸಿದ್ದರು ಎಂದು ಹೇಳಿದರು.

Advertisement

ದಮ್ಮದೀಕ್ಷಾ ದಿನ:ರಂಗಭೂಮಿ ನಿರ್ದೇಶಕ ಶಶಿಅಪೂರ್ವ ಮಾತನಾಡಿ, ಬೋಧಿಸತ್ವ ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಲಕ್ಷಾಂತರ ಅನುಯಾಯಿಗಳೊಂದಿಗೆ, ಮಹಾ ರಾಷ್ಟ್ರದ ನಾಗ್ಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ ಐತಿಹಾಸಿಕ ದಿನ. ಈ ದಿನವನ್ನು ದಮ್ಮ ದಮ್ಮದೀಕ್ಷಾ ಎಂದು ಸಂಭ್ರಮಿಸ ಲಾಗುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಾಬಾ ಸಾಹೇಬ್‌ ಡಾ.ಬಿ. ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೇಣದ ಬತ್ತಿ ಹಚ್ಚಿ, ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಿದ ನಂತರ ಆಟೋ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.

ಮೈತ್ರಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಆರ್‌. ಎನ್‌.ಪರಶಿವಮೂರ್ತಿ, ಭಾರತೀಯ ವಿದ್ಯಾರ್ಥಿ ಸಂಘದ ಮುಖ್ಯಸ್ಥ ನರಸಿಂಹಮೂರ್ತಿ, ಬೋಧಿಸತ್ವ ಪುರುಷರ ಸ್ವ ಸಹಾಯ ಸಂಘದ ಪದಾ ಧಿ ಕಾರಿಗಳಾದ ಗುರುಶಂಕರ್‌, ಹೊಳಲು ಜಯಶಂಕರ್‌, ದಿನೇಶ್‌, ಸೋಮಶೇಖರ್‌, ಸ್ವಾಮಿ ಕಬ್ಬನಹಳ್ಳಿ, ಕೆಂಪರಾಜು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next