Advertisement
ಸೂಕ್ಷ್ಮಅಂಶಗಳನ್ನು ಗಮನಿಸುತ್ತಲೇ ಒಂದು ದೊಡ್ಡ ಕೆಲಸಕ್ಕೆ, ಹುಡುಕಾಟಕ್ಕೆ ರಾಮ್ ಕೈ ಹಾಕುತ್ತಾನೆ. ಹಾಗೆ ನೋಡಿದರೆ ರಾಮ್ ಕೈ ಹಾಕಿರೋದು ಸುಲಭದ ಕೆಲಸಕ್ಕಲ್ಲ. ಸಾಕಷ್ಟು ರಿಸ್ಕ್ ಎದುರಿಸಬೇಕಾದಂತಹ ಕೆಲಸವದು. “ಹೆಬ್ಬುಲಿ’ ಚಿತ್ರ ನಿಮಗೆ ಖುಷಿಕೊಡೋದೇ ಸೂಕ್ಷ್ಮ ಸಂಗತಿಗಳನ್ನಿಟ್ಟುಕೊಂಡು ಆಟವಾಡಿರುವ ರೀತಿಯಿಂದ. ಯೋಧನ ಬ್ಯಾಕ್‌ಡ್ರಾಪ್‌ನೊಂದಿಗೆ ಆರಂಭವಾಗುವ ಕಥೆ ನೇರವಾಗಿ ಫ್ಯಾಮಿಲಿ ಸೇರಿಕೊಳ್ಳುತ್ತದೆ. “ಹೆಬ್ಬುಲಿ’ಯ ನಿಜವಾದ ಶಕ್ತಿ ತೆರೆದುಕೊಳ್ಳುವುದು ಕೂಡಾ ರಾಮ್ ಕುಟುಂಬದ ಮೂಲಕ.
Related Articles
Advertisement
ಇಲ್ಲಿ ಸಂಬಂಧಗಳ ಮೌಲ್ಯವನ್ನು ಕೃಷ್ಣ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರವನ್ನು ಶ್ರೀಮಂತಗೊಳಿಸಿರುವಲ್ಲಿ ತಾಂತ್ರಿಕ ಅಂಶಗಳ ಪಾತ್ರ ಕೂಡಾ ಮಹತ್ವದ್ದಾಗಿದೆ. ಚಿತ್ರದ ಕೆಲವು ದೃಶ್ಯಗಳಂತೂ ಅದ್ಭುತವಾಗಿದೆ. ಆ ದೃಶ್ಯಗಳ ಹಿಂದಿನ ಶ್ರಮ, ಪೂರ್ವತಯಾರಿ ಎದ್ದು ಕಾಣುತ್ತದೆ. ಅಣ್ಣ-ತಮ್ಮನ ಸಂಬಂಧವನ್ನು ಒಂದು ಫ್ಲ್ಯಾಶ್‌ಬ್ಯಾಕ್ ಅನ್ನು ಒಂದು ಹಾಡಿನಲ್ಲಿ ಕಟ್ಟಿಕೊಟ್ಟು ಜಾಣ್ಮೆ ಮೆರೆದಿದ್ದಾರೆ ಕೃಷ್ಣ. ಚಿತ್ರದಲ್ಲಿ ನಿಮಗೆ ಬೇರೆಯಾಗಿ ಕಂಡರೆ ಅದು ಕಾಮಿಡಿ ಟ್ರ್ಯಾಕ್. ಚಿಕ್ಕಣ್ಣ ಅವರ ಕಾಮಿಡಿ ಟ್ರ್ಯಾಕ್ ಅನ್ನು ಹಾಗೇ ಎತ್ತಿಟ್ಟರೂ ಅದರಿಂದ ಚಿತ್ರಕ್ಕೇನು ನಷ್ಟವಾಗದು.
ಚಿತ್ರದ ಅದ್ಧೂರಿತನ ಹಾಡುಗಳಲ್ಲಿ ಎದ್ದು ಕಾಣುತ್ತದೆ. ಕ್ಯಾಪ್ಟನ್ ರಾಮ್ ಪಾತ್ರದಲ್ಲಿ ಸುದೀಪ್ ಅವರನ್ನು ಬಿಟ್ಟರೆ ಮತ್ತೂಬ್ಬರನ್ನು ಊಹಿಸಿಕೊ ಳ್ಳೋದು ಕಷ್ಟ. ಅಬ್ಬರಿಸಿ ಬೊಬ್ಬಿರಿಯುವ ರಾಮ್ ಆಗಾಗ ಮುಗ್ಧ ಮಗುವಾಗುತ್ತಾನೆ. ಒತ್ತರಿಸಿ ಬರುವ ದುಃಖ ಒಂದು ಕಡೆಯಾದರೆ ದ್ವೇಷದ ಜ್ವಾಲೆ ಮತ್ತೂಂದೆಡೆ … ಹೀಗೆ ಪ್ರತಿ ದೃಶ್ಯಗಳಲ್ಲೂ ಸುದೀಪ್ ಸಿನಿಮಾವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿದಿದ್ದಾರೆ. ಯೋಧನ ಗತ್ತು, ತಮ್ಮನ ಪ್ರೀತಿ, ಮೈದುನನ ಜವಾಬ್ದಾರಿ, ಪ್ರೇಮಿಯ ತುಂಟಾಟ … ಹೀಗೆ ಪ್ರತಿ ಸನ್ನಿವೇಶಗಳಲ್ಲೂ ಸುದೀಪ್ ನಿಮಗೆ ಇಷ್ಟವಾಗುತ್ತಾ ಹೋಗುತ್ತಾರೆ.
ಇನ್ನು, ಚಿತ್ರದಲ್ಲಿ ರವಿಚಂದ್ರನ್ ಅವರ ಪಾತ್ರ ಆಗಾಗ ಎಂಟ್ರಿಕೊಟ್ಟರೂ ತಮ್ಮದೇ ಶೈಲಿಯಿಂದ ಇಷ್ಟವಾಗುತ್ತಾರೆ. ನಾಯಕಿ ಅಮಲಾ ಪೌಲ್ ಗ್ಲಾಮರಸ್ ಆಗಿ ಮಿಂಚಿದ್ದು ಬಿಟ್ಟರೆ ಅವರ ಪಾತ್ರಕ್ಕೆ ಹೆಚ್ಚೇನು ಸ್ಕೋಪ್ ಇಲ್ಲ. ವಿಲನ್‌ಗಳಾದ ರವಿಶಂಕರ್, ರವಿಕಿಶನ್, ಕಬೀರ್ ಸಿಂಗ್ ಅಬ್ಬರಿಸಿದ್ದಾರೆ. ಇನ್ನು, ಅವಿನಾಶ್ ಸೇರಿದಂತೆ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತದ ಹಾಡುಗಳನ್ನು ಕರುಣಾಕರ್ ಅಷ್ಟೇ ಸುಂದರವಾಗಿ ಸೆರೆಹಿಡಿದಿದ್ದಾರೆ.
ಚಿತ್ರ: ಹೆಬ್ಬುಲಿನಿರ್ಮಾಣ: ರಘುನಾಥ್-ಉಮಾಪತಿ
ನಿರ್ದೇಶನ: ಕೃಷ್ಣ
ತಾರಾಗಣ: ಸುದೀಪ್, ರವಿಚಂದ್ರನ್, ಅಮಲಾ ಪೌಲ್, ರವಿಶಂಕರ್, ರವಿಕಿಶನ್ ಮತ್ತಿತರರು. * ರವಿಪ್ರಕಾಶ್ ರೈ