ರಿಯಲ್ಮಿ 10 ಪ್ರೊ ಮತ್ತು ರಿಯಲ್ಮಿ 10 ಪ್ರೊ ಪ್ಲಸ್ ಮೊಬೈಲ್ ಡಿ.8ರಂದು ದೇಶದಲ್ಲಿ ಬಿಡುಗಡೆಯಾಗಲಿವೆ.
Advertisement
ಎರಡೂ ಮೊಬೈಲ್ಗಳ ದರ 25 ಸಾವಿರ ರೂ.ಗಳಿಂದ ಕಡಿಮೆಯೇ ಇರಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ರಿಯಲ್ಮಿ 10 ಪ್ರೊ 8ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್ ವ್ಯವಸ್ಥೆ ಇರುವ ಮೊಬೈಲ್ಗೆ ಸುಮಾರು 19,500 ರೂ., 12 GB RAM ಮತ್ತು 256 ಜಿಬಿ ಸ್ಟೋರೇಜ್ ಇರುವ ಮೊಬೈಲ್ಗೆ 26,500 ರೂ. ಇರುವ ಸಾಧ್ಯತೆ ಇದೆ.
ಮೊಬೈಲ್ 6.7 ಇಂಚು ಅಮೋಲೆಡ್ ಕರ್ವ್ ಡಿಸ್ಪ್ಲೇ ಹೊಂದಿದೆ. ಫಿಂಗರ್ಪ್ರಿಂಟ್ ಸೆನ್ಸರ್, ಟ್ರಿಪಲ್ ರಿಯಲ್ ಕೆಮರಾ ಸೆಟ್ಅಪ್ ಸೇರಿದಂತೆ ಹಲವು ತಾಂತ್ರಿಕ ಅಂಶಗಳನ್ನು ಮೊಬೈಲ್ ಹೊಂದಿದೆ.