Advertisement
ಮಂಗಳೂರಿಗೆ ಹೊಂದಿಕೊಂಡಿರುವ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುತ್ತಿರುವ ಫಲ್ಗುಣಿ ನದಿ ಈಗ ಸಂಪೂರ್ಣ ಕಲುಷಿತಗೊಂಡಿದ್ದು, ಈ ನದಿ ದಂಡೆಯಲ್ಲಿ ವಾಸಿಸುವ ಜನರು ಕೂಡ ಮೂಗು ಮುಚ್ಚಿಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಪರಿಸರ ಪರ ಸಂಘಟನೆಯಾದ ಸಹ್ಯಾದ್ರಿ ಸಂಚಯ ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟವು ಫಲ್ಗುಣಿ ನದಿ ಎಷ್ಟೊಂದು ಮಲಿನಗೊಂಡಿದೆ ಎಂಬುದನ್ನು ತೋರಿಸುವುದಕ್ಕೆ ಮಾಧ್ಯಮದವರನ್ನು ಸುಲ್ತಾನ್ ಬತ್ತೇರಿಯಿಂದ ಮರವೂರು ಡ್ಯಾಂ ವರೆಗೆ ಬೋಟ್‌ನಲ್ಲಿ ಕರೆದೊಯ್ದಿದ್ದರು. ಆ ಮೂಲಕ, ಇಂಥದೊಂದು ಅಪರೂಪದ ‘ಜಲ ಪಯಣ’ದ ಮೂಲಕ ಫಲ್ಗುಣಿ ನದಿಯ ಸತ್ಯ ದರ್ಶನ ಮಾಡಿಸಿರುವುದು ಗಮನಾರ್ಹ. ನದಿ ನೀರಿನ ಬಳಕೆಯಿಂದ ರೋಗಬಾಧೆ ಭೀತಿ
ಈಗ ಫಲ್ಗುಣಿ ನದಿ ಅಕ್ಷರಶಃ ವಿಷ ನೀರನ್ನು ಉಣಿಸಬೇಕಾದ ಸ್ಥಿತಿಗೆ ಬಂದು ನಿಂತಿದೆ. ಈ ನದಿ ನೀರಿನ ಮಾಲಿನ್ಯದಿಂದಾಗಿ ಸುತ್ತಮುತ್ತಲ ಮಂದಿಗೆ ನಾನಾ ತರಹದ ಚರ್ಮ ರೋಗಗಳಿಗೆ ಒಳಗಾಗುತ್ತಿದ್ದಾರೆ. ನದಿಯ ಪಕ್ಕದಲ್ಲಿಯೇ ಪ್ಲೈವುಡ್, ಗೇರುಬೀಜ ಸೇರಿದಂತೆ ಅನೇಕ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳ ತ್ಯಾಜ್ಯವೂ ನದಿ ಸೇರುತ್ತಿದೆ. ಇದರಿಂದಾಗಿ ನದಿ ನೀರು ಮಲಿನಗೊಂಡಿದ್ದು, ಇದೇ ನೀರನ್ನು ನಂಬಿಕೊಂಡ ಅನೇಕ ಜಲಚರಗಳು ಕೊನೆಯುಸಿರೆಳೆಯುತ್ತಿವೆ.
Related Articles
Advertisement
ಈ ದಂಧೆಯಲ್ಲಿ ಅನೇಕ ಪ್ರಭಾವೀ ಮುಖಂಡರ ಕೈವಾಡವಿದೆ. ಜಿಲ್ಲಾಡಳಿತವು ಅಕ್ರಮ ಮರಳುಗಾರಿಕೆಯನ್ನು ಗಮನಿಸಿಯೂ ಕಣ್ಣುಮುಚ್ಚಿ ಕೂತಿದೆ. ಇವರ ಪ್ರಭಾವಕ್ಕೆ ಸ್ಥಳೀಯರು ಕೂಡ ಎದುರುತ್ತರ ಕೊಡಲು ಹೆದರುತ್ತಾರೆ’ ಎಂದು ಸ್ಥಳೀಯರೊಬ್ಬರು `ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಎಗ್ಗಿಲ್ಲದೆ ಸಾಗುತ್ತಿದೆ ಅಕ್ರಮ ಮರಳುಗಾರಿಕೆಫಲ್ಗುಣಿ ನದಿಯಲ್ಲಿ ಪ್ರತಿ ದಿನ ಹಗಲು ರಾತ್ರಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸಾಂಪ್ರದಾಯಿಕ ಮರಳುಗಾರಿಕೆಗೆ ವಿರುದ್ಧವಾಗಿ ಅಂದರೆ, ಸುಮಾರು 20 ಮೀಟರ್ ಹೆಚ್ಚಿನ ಆಳದಿಂದ ಮರಳು ತೆಗೆಯುತ್ತಿದ್ದಾರೆ. ಪ್ರತಿದಿನ ಸುಮಾರು 50ಕ್ಕೂ ಹೆಚ್ಚಿನ ದೋಣಿಗಳು ಅಕ್ರಮ ಮರಳುಗಾರಿಕೆಯಲ್ಲಿ ನಿರತವಾಗಿದೆ. ಅಷ್ಟೇ ಅಲ್ಲದೆ ಬಿಹಾರ ಸೇರಿದಂತೆ ವಿವಿಧ ರಾಜ್ಯದ ನೂರಾರು ಮಂದಿ ಕೂಲಿ ಕಾರ್ಮಿಕರು ಈ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಪರವಾನಗಿ ಪಡೆದುಕೊಂಡು ಮರಳು ತೆಗೆಯಲು ತಮ್ಮ ದೋಣಿಗಳಲ್ಲಿ ಹಳದಿ ಬಣ್ಣದ ಪೈಂಟ್ ಮತ್ತು ದೋಣಿ ಸಂಖ್ಯೆಯನ್ನು ನಮೂದು ಮಾಡಲಾಗುತ್ತದೆ. ಆದರೆ ಅಕ್ರಮ ಮರಳುಗಾರಿಕೆ ದೋಣಿಯಲ್ಲಿ ಯಾವುದೇ ರೀತಿಯ ಕಾನೂನು ಅಂಶಗಳು ಕಾಣುವುದೇ ಇಲ್ಲ. ‘ಕಳೆದ ಅನೇಕ ಸಮಯಗಳಿಂದ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಕೂಡಲೇ ಶಿಸ್ತುಕ್ರಮ
ಕೆಲವು ದಿನಗಳ ಹಿಂದೆ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುವವರ ವಿರುದ್ಧ ಕಾರ್ಯಾಚರಣೆ
ನಡೆಸಿದ್ದೇವೆ. ಆ ಸಮಯದಲ್ಲಿ ಅನೇಕ ಅಕ್ರಮ ದೋಣಿಗಳನ್ನು ವಶಕ್ಕೆ ಪಡೆದು, ಮರಳುಗಾರಿಕೆ ಮಾಡುವವರ ವಿರುದ್ಧ ಶಿಸ್ತು ಕ್ರಮ ಜರಗಿಸಿದ್ದೇವೆ. ಸದ್ಯ ಅಕ್ರಮ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕಾರ್ಯಾಚರಣೆ ನಡೆಸಲಾಗುವುದು.
– ಶಶಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ ಸಾರ್ವಜನಿಕರು ಒಗ್ಗಟ್ಟಾಗಿ
ಫಲ್ಗುಣಿ ನದಿಯು ಸಂಪೂರ್ಣ ಮಲಿನವಾಗಿದೆ. ನದಿ ತಟದ ಮಂದಿ ತ್ಯಾಜ್ಯಗಳನ್ನು ನದಿಗೇ ಹಾಕುತ್ತಿದ್ದಾರೆ. ಇದರಿಂದಾಗಿ ಜಲಚರಗಳು ಸಾವನ್ನಪ್ಪುತಿವೆ. ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸಲು ಸಾರ್ವಜನಿಕರೆಲ್ಲರೂ ಒಟ್ಟಾಗಬೇಕಿದೆ.
– ದಿನೇಶ್ ಹೊಳ್ಳ, ಪರಿಸರವಾದಿ