Advertisement
ಎಲ್ಸಿನಾ ಎಂಬ ಯುವತಿ (ಬೆಂಗಳೂರಿನ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿನಿ) ಎರ್ನಾಕುಲಂ- ಮಧುರೈ ಬಸ್‌ನಲ್ಲಿ ಪೋಡಿಯಟ್ಟಂ ಎಂಬಲ್ಲಿಗೆ ಹೊರಟಿದ್ದಳು. ಆಕೆ ಕಂಜರಪಲ್ಲಿ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಬಸ್ಸು ಅಲ್ಲಿಗೆ ಹತ್ತು ನಿಮಿಷ ಮುಂಚಿತವಾಗೇ ತಲುಪಿತು. ಎಲ್ಸಿನಾಳನ್ನು ಕರೆದೊಯ್ಯಲು ಬರಬೇಕಾದವರು, ಇನ್ನೂ ಬಂದಿರಲಿಲ್ಲ. ಆಗ ಸಮಯ ರಾತ್ರಿ 11 ಗಂಟೆ. ನಿಲ್ದಾಣ ನಿರ್ಜನವಾಗಿತ್ತು. ಬಂದ್‌ನ ಕಾರಣದಿಂದ ಎಲ್ಲ ಅಂಗಡಿಗಳ ಬಾಗಿಲುಗಳು ಮುಚ್ಚಿದ್ದವು. ಬಸ್ ನಿರ್ವಾಹಕ ಪಿ. ಶಜುದ್ದೀನ್‌ಗೆ, ಆಕೆಯೊಬ್ಬಳನ್ನೇ ಅಲ್ಲಿ ಇಳಿಸಿ ಹೋಗುವುದು ಸರಿಯಲ್ಲ ಅನ್ನಿಸಿತು. ತಕ್ಷಣ, ಚಾಲಕ ಡೆನ್ನಿಸ್ ಕ್ಸೇವಿಯರ್‌ಗೆ ವಿಷಯ ತಿಳಿಸಿ, ಬಸ್ ನಿಲ್ಲಿಸಲು ಹೇಳಿದರು. ಆಕೆಯ ಸಂಬಂಧಿಕರು ಬರುವವರೆಗೂ ಬಸ್ ನಿಲ್ಲಿಸುತ್ತೇವೆ ಅಂತ ಡೆನಿಸ್ ಹೇಳಿದಾಗ, ಪ್ರಯಾಣಿಕರ್ಯಾರೂ ತಕರಾರು ಎತ್ತಲಿಲ್ಲ. ಹದಿನೈದು ನಿಮಿಷಗಳ ನಂತರ ಎಲ್ಸಿನಾಳ ಸಂಬಂಧಿ ಬಂದರು. ಅಲ್ಲಿಯವರೆಗೂ ಆಕೆಗೆ ಕಾವಲಾಗಿ ಇಡೀ ಬಸ್ಸು ನಿಂತಿತ್ತು. ಕೇರಳ ಬಸ್ ಸಾರಿಗೆ ಸಿಬ್ಬಂದಿಯ ಈ ನಡೆ ಎಲ್ಲರಿಗೂ ಮಾದರಿಯಾಗಬೇಕಿದೆ. Advertisement
ಇವರೇ “ರಿಯಲ್ ಹೀರೋ’!
10:10 AM Dec 12, 2019 | mahesh |