Advertisement
ಮಾನದಂಡದಂತೆ ಸಂಚರಿಸಲು ಸಿದ್ಧ
ಕರಾವಳಿ ಬಸ್ಸು ಮಾಲಕರ ಸಂಘವು ಸರಕಾರ ನಿಗದಿಪಡಿಸಿದ ಮಾನದಂಡದಂತೆ ಬಸ್ಸು ಓಡಿಸಲು ಸಂಘದ ಅಡಿಯಲ್ಲಿ ಬರುವ ಸುಮಾರು 80ರಷ್ಟು ಬಸ್ಸುಗಳು ಸಿದ್ಧವಿವೆ. ಈ ಬಗ್ಗೆ ಮೇ 3ರಂದು ಜಿಲ್ಲಾಧಿಕಾರಿಗಳು ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಮನವಿ ನೀಡಲಾಗಿದ್ದು, ಒಪ್ಪಿಗೆಗಾಗಿ ಕಾಯಲಾಗುತ್ತಿದೆ. ಬಸ್ಸು ಸಂಚಾರವನ್ನು ಆರಂಭಿಸಿದರೆ ಚಾಲಕರು, ನಿರ್ವಾಹಕರು ಸಹಿತ ಗ್ಯಾರೇಜುಗಳಲ್ಲಿ ದುಡಿಯು ತ್ತಿರುವ ಕಾರ್ಮಿಕರಿಗೆ ಉದ್ಯೋಗಾ ವಕಾಶ ಲಭಿಸಲಿದೆ. ಯಾವುದೇ ನಷ್ಟ ಉಂಟಾಗಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಸೇವೆ ಒದ ಗಿಸುವುದೇ ಬಸ್ಸು ಮಾಲಕರ ಕರ್ತವ್ಯವಾಗಿದ್ದು, ಜಿಲ್ಲಾಡಳಿತದ ಎಲ್ಲ ಮಾನದಂಡಗಳನ್ನು ಪಾಲಿಸ ಲಾಗುವುದು ಎನ್ನುತ್ತಾರೆ ಕರಾವಳಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಹಾಗೂ ಸಾರ್ವಜನಿಕ ರಿಗಾಗಿ ಇಂದಿನಿಂದ ನರ್ಮ್ ಬಸ್ಸು ತಂಗುದಾಣದಿಂದ ಬೆಳಗ್ಗೆ ಹಾಗೂ ಸಂಜೆ ಕಚೇರಿಗೆ ಹೋಗಿ ಬರುವ ವೇಳೆಗೆ ಕೆಲವು ಟ್ರಿಪ್ ಮಾಡಲಿದೆ. ಬಸ್ ಓಡಿಸಲು ಪ್ರಯಾಣಿಕರ ಸಂಖ್ಯೆಯೂ ಮುಖ್ಯ. ಸಮೂಹ ಸಾರಿಗೆಯನ್ನು ಆರಂಭಿಸಲು ಜಿಲ್ಲಾಡಳಿತದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಕೆಎಸ್ಸಾರ್ಟಿಸಿ ಉಡುಪಿ ಡಿಪೋ ಮ್ಯಾನೇಜರ್ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಹಲವು ಖಾಸಗಿ ಬಸ್ ಮಾಲಕರು ಸಂಚಾರ ಆರಂಭಿಸಲು ಬೇಡಿಕೆಗಳನ್ನು ಮಂಡಿಸಿದ್ದಾರೆ. ಕರಾವಳಿ ಬಸ್ಸು ಮಾಲಕರ ಮನವಿ ಮೇರೆಗೆ ಆರ್‌ಟಿಒ ಅಧಿಕಾರಿಗಳೊಂ ದಿಗೆ ಚರ್ಚಿಸಿ ತೀರ್ಮಾನಿಸ ಲಾಗುವುದು.
-ಜಿ.ಜಗದೀಶ್
ಜಿಲ್ಲಾಧಿಕಾರಿ, ಉಡುಪಿ