Advertisement

ಆನೆ ಶಿಬಿರಗಳ ಸ್ಥಿತಿಗತಿ ಅಧ್ಯಯನ ಹೊಸ ತಜ್ಞರ ಸಮಿತಿ ರಚನೆಗೆ ಅಸ್ತು

11:19 PM Sep 25, 2019 | Lakshmi GovindaRaju |

ಬೆಂಗಳೂರು: ರಾಜ್ಯದ 8 ಆನೆ ಶಿಬಿರಗಳಲ್ಲಿನ ಆನೆಗಳ ಸರಣಿ ಸಾವು ಪ್ರಕರಣದ ಸಮಗ್ರ ಅಧ್ಯಯನಕ್ಕೆ ಮೂವರು ತಜ್ಞರ ಹೊಸ ಸಮಿತಿ ರಚನೆಗೆ ಹೈಕೋರ್ಟ್‌ ಅನುಮತಿ ನೀಡಿದೆ. ಈ ಕುರಿತು ವಕೀಲ ಎನ್‌.ಪಿ.ಅಮೃತೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌, ನ್ಯಾ.ಎಸ್‌.ಆರ್‌.ಕೃಷ್ಣ ಕುಮಾರ್‌ರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

Advertisement

ಆನೆ ಶಿಬಿರಗಳಲ್ಲಿನ ಸ್ಥಿತಿಗತಿ, ಸರಣಿ ಸಾವು ಕುರಿತು ಅಧ್ಯಯನ ನಡೆಸಿ ವರದಿ ನೀಡಲು “ಏಷ್ಯನ್‌ಎಲಿಫಾಂಟ್ಸ್‌ ರಿಸರ್ಚ್‌ ಆ್ಯಂಡ್‌ ಕನ್ಸರ್ವೇ ಷನ್‌ ಸೆಂಟರ್‌’ನ ಪ್ರೊ.ಆರ್‌.ಸುಕುಮಾರ್‌, ಆನೆ ತಜ್ಞರಾದ ಥಾಮಸ್‌ ಮ್ಯಾಥ್ಯೂ, ಸುರೇಂದ್ರ ವರ್ಮ ಮತ್ತು ವೈಲ್ಡ್‌ ಲೈಫ್ ಫ‌ಸ್ಟ್‌ ಆರ್ಗನೈ ಸೇಷನ್‌ ಟ್ರಸ್ಟ್‌ನ ಟ್ರಸ್ಟಿ ಕೆ.ಎಂ.ಚಿನ್ನಪ್ಪ ಅವರನ್ನು ಒಳಗೊಂಡ ಸಮಿತಿ ರಚಿಸಲು ಸರ್ಕಾರಕ್ಕೆ ಹೈಕೋರ್ಟ್‌ ಸೆ.11ರಂದು ನಿರ್ದೇಶಿಸಿತ್ತು.

ಬುಧವಾರ ಅರ್ಜಿ ವಿಚಾರಣೆಗೆ ಬಂದಾಗ ಸರ್ಕಾರಿ ವಕೀಲರು ಮಧ್ಯಂತರ ಅರ್ಜಿ ಸಲ್ಲಿಸಿ, ವಿವಿಧ ಕಾರಣ ನೀಡಿ ಆನೆ ಶಿಬಿರದ ಸ್ಥಿತಿಗತಿ ಅಧ್ಯಯನಕ್ಕೆ ನೆರವು ನೀಡಲಾಗವುದಿಲ್ಲ ಎಂದು ಪ್ರೊ.ಆರ್‌.ಸುಕುಮಾರ್‌, ಥಾಮಸ್‌ ಮ್ಯಾಥ್ಯೂ ಮತ್ತು ಸುರೇಂದ್ರ ವರ್ಮ ತಿಳಿಸಿದ್ದಾರೆ. ಈ ಮಧ್ಯೆ ಸುಕುಮಾರ್‌ ಅವರು ತಮಿಳುನಾಡಿನ ವೈದ್ಯ ಡಾ.ಕಳೈವಣ್ಣನ್‌, ನೊಯ್ಡಾ ವೈದ್ಯ ಡಾ.ಎನ್‌.ವಿ.ಕೆ.ಅಶ್ರಫ್ ಹೆಸರು ಶಿಫಾರಸು ಮಾಡಿದ್ದಾರೆ. ಡಾ.ಕಳೈವಣ್ಣನ್‌, ಚಿನ್ನಪ್ಪ ಸಮಿತಿ ಸದಸ್ಯರಾಗಲು ಒಪ್ಪಿಗೆ ನೀಡಿದ್ದಾರೆ.

ಅಶ್ರಫ್ರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸದ್ಯ ಹೆಸರಿಸಲಾದ ವ್ಯಕ್ತಿಗಳನ್ನು ಒಳಗೊಂಡ ಹೊಸ ಸಮಿತಿ ರಚಿಸಲು ಅನುಮತಿ ಕೊಡಬೇಕು ಎಂದು ನ್ಯಾಯಪೀಠವನ್ನು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, ಡಾ.ಕಳೈವಣ್ಣನ್‌, ಡಾ.ಅಶ್ರಫ್ ಮತ್ತು ಚಿನ್ನಪ್ಪ ಅವರನ್ನು ಒಳಗೊಂಡ ಹೊಸ ಸಮಿತಿಯನ್ನು ಸರ್ಕಾರ ರಚಿಸಿ ಅಧ್ಯಯನ ನಡೆಸಿ ಅ.30ರೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next