Advertisement

ಟ್ವಿಟರ್‌ ಮನಸ್ಸು ಮಾಡಿದರೆ ಈಗಲೂ ಖರೀದಿಸಲು ಸಿದ್ಧ: ಎಲಾನ್‌ ಮಸ್ಕ್

06:33 PM Aug 08, 2022 | Team Udayavani |

ವಾಷಿಂಗ್ಟನ್‌: ಟ್ವಿಟರ್‌ ಮನಸ್ಸು ಮಾಡಿದರೆ ಈಗಲೂ ಅದನ್ನು ಖರೀದಿಸಲು ಸಿದ್ಧನಿರುವುದಾಗಿ ಟೆಸ್ಲಾ ಸಂಸ್ಥೆಯ ಎಲಾನ್‌ ಮಸ್ಕ್ ಹೇಳಿದ್ದಾರೆ.

Advertisement

ಟ್ವಿಟರ್‌ ಅದರ ಗ್ರಾಹಕರ ಖಾತೆಗಳು ನಿಜವಾದದ್ದು ಎನ್ನುವುದನ್ನು ನನಗೆ ಸಾಕ್ಷಿ ಸಮೇತ ವಿವರಿಸಬೇಕು. ಹಾಗಾದರೆ ನಾನು ಖರೀದಿ ಮಾಡುತ್ತೇನೆ. ಇಲ್ಲವಾದರೆ ಒಪ್ಪಂದ ಮುರಿದುಬೀಳುತ್ತದೆ’ ಎಂದು ಮಸ್ಕ್ ಹೇಳಿದ್ದಾರೆ.

ಈ ಹಿಂದೆ ಟ್ವಿಟರ್‌ನಲ್ಲಿ ನಕಲಿ ಖಾತೆಗಳ ಬಗ್ಗೆ ಮಾಹಿತಿ ಕೊಡಬೇಕೆಂದು ಮಸ್ಕ್ ಕೇಳಿದ್ದು, ಅದನ್ನು ಟ್ವಿಟರ್‌ ನಿರಾಕರಿಸಿತ್ತು.

44 ಬಿಲಿಯನ್‌ ಡಾಲರ್‌ ಮೊತ್ತದ ಒಪ್ಪಂದ ಇತ್ತೀಚೆಗೆ ಮುರಿದು ಬಿದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next