Advertisement
ತ್ಯಾಜ್ಯ ನೀರು ಶುದ್ಧೀಕರಣಗೊಳಿಸುವ ನಂದಿಕೂರ ಬಳಿ ವಿಶಾಲವಾದ 45 ಎಕರೆ ಭೂಮಿಯಲ್ಲಿ ಆತ್ಯಾಧುನಿಕ 47 ಕೋಟಿ ರೂ. ವೆಚ್ಚದಲ್ಲಿ ಘಟಕ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸಂಪೂರ್ಣವಾಗಿ ಕಾರ್ಯರೂಪಗೊಳ್ಳಲಿದೆ. 2014ರಲ್ಲಿ ಆರಂಭಗೊಂಡ 40 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಈಗ ಸಂಪೂರ್ಣಗೊಂಡಿದ್ದರಿಂದ ಶೀಘ್ರದಲ್ಲಿಯೇ ಸಮರ್ಪಣೆಯಾಗಲಿದೆ.
Related Articles
Advertisement
ಕಲಬುರಗಿ ಉತ್ತರ ಭಾಗದಲ್ಲಿ ಕಪನೂರ ಬಳಿ 25 ಎಂಎಲ್‌ಡಿ ತ್ಯಾಜ್ಯ ನೀರು ಸಾಮರ್ಥ್ಯದ ಘಟಕದ ಕಾಮಗಾರಿ ನಡೆದು ಇಷ್ಟರಲ್ಲಿಯೇ ಪೂರ್ಣಗೊಳ್ಳಲಿದೆ. ಅದೇ ರೀತಿ ಅಮೃತ ಯೋಜನೆ ಅಡಿ ಉತ್ತರ ಭಾಗದಲ್ಲಿಯೇ ಮಗದೊಂದು ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಈ ಎಲ್ಲವುಗಳು ಪೂರ್ಣಗೊಂಡಿದ್ದಲ್ಲಿ ಮಹಾನಗರ ಸಂಪೂರ್ಣ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ.
ತ್ಯಾಜ್ಯ ನೀರು ಶುದ್ಧೀಕರಣದ ಜತೆಗೆ ಚೋರಗುಂಬಜ್ ಬಳಿಯ μಲ್ಟರ್‌ಬೆಡ್ ಕಾರ್ಯದಲ್ಲೂ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ. ಹಳೆಯದಾದ ಯಂತ್ರಗಳನ್ನು ಬದಲಾಯಿಸಲಾಗಿದೆ. ಇದಲ್ಲದೇ ಮಹಾನಗರದ ನೀರು ಪೂರೈಕೆ ಪೈಪ್‌ಲೈನ್ ನಲ್ಲಿ ಅಲ್ಲಲಿ ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲು ಸಹ ಹೆಜ್ಜೆ ಇಡಲಾಗಿದೆ.
ಒಟ್ಟಾರೆ ಈ ಎಲ್ಲ ಕಾರ್ಯಗಳನ್ನು ಅವಲೋಕಿಸಿದರೆ ಕಲಬುರಗಿ ಮಹಾನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುವುದು ನಿಶ್ಚಿತ ಎಂದು ಪಾಲಿಕೆ ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಂದಿಕೂರ ಬಳಿ ತ್ಯಾಜ್ಯ ಶುದ್ಧೀಕರಣಕ್ಕೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹಲವು ಸಲ ಹೋರಾಟ ಮಾಡಿದ್ದರಲ್ಲದೇ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.
ಅದರ ಪರಿಣಾಮ ಘಟಕ ಸಿದ್ಧವಾಗಿ ನಿಂತಿದೆ. ಒಟ್ಟಾರೆ ಅಶುದ್ಧ ಕುಡಿಯುವ ನೀರು ಪೂರೈಕೆಗೆ ಬ್ರೇಕ್ ಬಿದ್ದು, ಶುದ್ಧ ಕುಡಿಯುವ ನೀರು ಪೂರೈಕೆಯಾಗುವುದನ್ನು ಮಹಾನಗರದ ಜನರು ಕಾತರದಿಂದ ಕಾಯುತ್ತಿದ್ದಾರೆ.
* ಹಣಮಂತರಾವ ಭೈರಾಮಡಗಿ