Advertisement

ಲಿಂಗಾಯಿತ ಮಹಾರ್ಯಾಲಿ ಯಶಸ್ಸಿಗೆ ಸಿದ್ಧತೆ

09:52 AM Sep 23, 2017 | Team Udayavani |

ಕಲಬುರಗಿ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಆಗ್ರಹಿಸಿ ಸೆ. 24ರಂದು ನಗರದ ನೂತನ ಮಹಾ ವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಲಿಂಗಾಯತ ಮಹಾರ್ಯಾಲಿ ಮಹಾಸಭೆಗೆ ವ್ಯಾಪಕ ಸಿದ್ಧತೆ ಹಾಗೂ ಪ್ರಚಾರದ ಕಾರ್ಯ ಜೋರಾಗಿ ನಡೆಯುತ್ತಿದ್ದು, ಸಾವಿರಾರು ಸಮಾಜದ ಮುಖಂಡರು-ಯುವಕರು ಸಕ್ರಿಯವಾಗಿ ಪಾಲ್ಗೊಂಡಿದ್ದು, ಮಹಾರ್ಯಾಲಿ ಯಶಸ್ವಿಯ ಲಕ್ಷಣಗಳು ಕಂಡು ಬರುತ್ತಿವೆ.

Advertisement

ಕಳೆದ ಸೆ. 10ರಂದು ನಿಗದಿಯಾಗಿದ್ದ ಮಹಾರ್ಯಾಲಿ ಅಗತ್ಯ ಸಿದ್ಧತೆ ಆಗಿಲ್ಲವೆಂದು ಸೆ. 24ಕ್ಕೆ ಮುಂದೂಡಲಾಗಿತ್ತು. ಈ ನಡುವೆ ವೀರಶೈವ-ಲಿಂಗಾಯತ ನಡುವೆ ಭಿನ್ನಮತ ಉಂಟಾಗಿ ಆರೋಪ-ಪ್ರತ್ಯಾರೋಪ ನಡೆದ ಪರಿಣಾಮ ಜತೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ಬೆಂಗಳೂರಿನ ಮನೆಯಲ್ಲಿ ಸಭೆ ನಡೆದು ಸಮನ್ವಯ ಸಮಿತಿ ರಚನೆ ಕುರಿತಾಗಿ ನಿರ್ಣಯ ಕೈಗೊಂಡ ನಂತರ ಮಹಾರ್ಯಾಲಿ ಕಾವು ಸ್ವಲ್ಪ ಕುಸಿತವಾಗಿತ್ತು.

ಕಳೆದ ನಾಲ್ಕು ದಿನಗಳಿಂದ ಲಿಂಗಾಯತ ಧರ್ಮ ಸಮನ್ವಯ ಸಮಿತಿ ಪದಾಧಿಕಾರಿಗಳು, ಸಚಿವರಾದ ಎಂ.ಬಿ.ಪಾಟೀಲ, ಡಾ| ಶರಣಪ್ರಕಾಶ ಪಾಟೀಲ, ಶಾಸಕ ಬಿ.ಆರ್‌. ಪಾಟೀಲ ಸೇರಿದಂತೆ ಇತರರು ಹಗಲಿರಳು ಸಮಾಜ ಸಂಘಟಕರ ನಿರಂತರ ಸಭೆಗಳನ್ನು ನಡೆಸುವುದರ ಮುಖಾಂತರ ಸಮಾವೇಶದ ಯಶಸ್ವಿಗೆ ಹುರಿದುಂಬಿಸಿದ್ದರಿಂದ, ಜತೆಗೆ ನಾಡಿನ ವಿವಿಧ ಮಠಾಧೀಶರು, ಶ್ರೀ ಶೈಲ ಸಾರಂಗಧರೇಶ್ವರ ಮಹಾಸ್ವಾಮಿಗಳು ಸೇರಿದಂತೆ ಇತರರು ಸಮಾವೇಶ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next