Advertisement

ವೈದ್ಯಕೀಯ ಉಪಕರಣ ಖರೀದಿಯ ಭ್ರಷ್ಟಾಚಾರ ಆರೋಪದ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು?

04:54 PM Jul 05, 2020 | keerthan |

ಮಣಿಪಾಲ: ಕೋವಿಡ್ ನಿರ್ವಹಣೆಗಾಗಿ ಖರೀದಿಸಿರುವ ವೈದ್ಯಕೀಯ ಉಪಕರಣಗಳಲ್ಲಿ ಭಾರೀ ಮೊತ್ತದ ಭ್ರಷ್ಟಾಚಾರ ನಡೆಸಲಾಗಿದೆ ಎಂಬ ರಾಜ್ಯ ನಾಯಕರೊಬ್ಬರ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆಯೇನು ಎಂದು ಉದಯವಾಣಿ ಕೇಳಿದ್ದು ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಲೋಕೇಶ್ ಗುಡ್ಡೆಮನೆ: ಕೋವಿಡ್- 19 ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ನಿಯಂತ್ರಣದಲ್ಲಿ ಇದೆ. ರಾಜ್ಯ ಸರ್ಕಾರದ ಆರೋಗ್ಯ ಸಂಸ್ಥೆ ಹಾಗು ಸಂಭಂದಿಸಿದ ಮಂತ್ರಿಗಳು ಹಾಗು ಕೋವಿಡ್- 19 ವಾರಿಯರ್‌ ಈಗಾಗಲೇ ಕಟ್ಟುನಿಟ್ಟಾಗಿ ಕೋವಿಡ್- 19 ನಿಯಂತ್ರಣ ಸಾಧಿಸಲು ಹಗಲಿರುಳು ಶ್ರಮಿಸುತ್ತಿವೆ. ಇದು ವಿರೋಧ ಪಕ್ಷದವರಿಗೆ ಮುಂದಿನ ಚುನಾವಣೆಯಲ್ಲಿ ಹಿನ್ನಡೆ ಆಗಬಹುದೆಂದು. ಇಲ್ಲ ಸಲ್ಲದ ಹೇಳಿಕೆ ಕೊಡುವುದು .ಭ್ರಷ್ಟಾಚಾರ ನಡೆಯಲು ಸಾದ್ಯವಿಲ್ಲ ಇಲ್ಲಿ

ಸಣ್ಣಮಾರಪ್ಪ. ಚಂಗಾವರ: ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ನೈತಿಕತೆಯಿಂದ ಕೆಲಸ ಮಾಡಬೇಕಿದೆ. ಇಂತಹ ಸಂದರ್ಭದಲ್ಲಾದರೂ ವಿರೋಧ ಪಕ್ಷಗಳಿಗೆ ಅನುಮಾನ ಬರದಂತೆ ನಿಷ್ಠೆಯಿಂದ ಕೆಲಸ ಮಾಡಬೇಕು.

ಹರಿಪ್ರಸಾದ್: ಆರೋಪ ಯಾರಿಗೂ,ಯಾರ ಮೇಲೆ ಬೇಕಾದರು ಮಾಡಬಹುದು. ಆದರೆ ಅದನ್ನು ಸಾಕ್ಷಿ ಸಮೇತ ಸಾಬೀತು ಮಾಡಬೇಕು.

ಸತೀಶ್ ರಾವ್: ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪ ಸರ್ವೇ ಸಾಮಾನ್ಯ ಇದು ಕೂಡ ಹೊರತಲ್ಲ

Advertisement

ಲವೀನಾ ಫರ್ನಾಂಡಿಸ್: ಸ್ವಾಮಿ ಈ ಕೋವಿಡ್ ರೋಗವನ್ನು ಮಂದೆ ಇಟ್ಟುಕೊಂಡು ಎಲ್ಲಾ ರಾಜಕಾರಣಿಗಳು ಎಲ್ಲಾ ಥರದಲ್ಲು ದುಡ್ಡು ಮಾಡ್ತಿದಾರೆ, ಇಲ್ಲಿ ಸಿದ್ದರಾಮಯ್ಯ ಆದ್ರೇನು ಯಡಿಯೂರಪ್ಪ ಆದ್ರೇನು ಇವ್ರು ಬಡವರ ಜೇಬಿಗೆ ಕತ್ತರಿ ಹಾಣ ಹೊಡೆದ ಹಣದಲ್ಲಿ ಅವರಿಗು ಒಂದು ಪಾಲು ಅವರು ಜನತೆಯ ಜೇಬಿಗೆ ಕತ್ತರಿ ಹಾಕಿ ಹಣ ಹೊಡೆದರೆ ಇವರಿಗೆ ಒಂದು ಪಾಲು ಒಟ್ಟಿನಲ್ಲಿ ಇಬ್ಬರು ಸೇರಿ ಜನತೆಯ ಮುಂದೆ ನಾಟಕ ಆಡ್ತಾ ಇದಾರೆ, ನೀನು ಒಡ್ದಂಗ್ ಮಾಡು ನಾನು ಅತ್ತಂಗ್ ಮಾಡ್ತೀನಿ ಅಂತ

ಮಲಿಕ್ ಮಲ್ಲಿ:ನಮ್ಮ ರಾಜ್ಯದಲ್ಲಿ ನಡಯುತ್ತಿರುವ ಹಾಗೂ ಹೋಗುಗಳನ್ನು ನೋಡುತಿದ್ದರೆ ಇದೆಲ್ಲ ನಿಜಾನೆ ಆದರೆ ಇದನ್ನ ಪ್ರಶ್ನೆಯೇ ಮಾಡ್ ಕಾಲ ಪ್ರತಿಯೊಬ್ಬ ಜನಕ್ಕೆ ಬಂದಾಗ ಮತ್ತು ನಮ್ಮ ದೇಶದ ರಾಜಕಾರಣ ಬದಲಾಗಬೇಕು ಅಂದರೇ ಮೊದಲು ನಾವುಗಳು ಬದಲಾಗ ಬೇಕು ,ಇದು ಪ್ರತಿಯೊಬ್ಬರ ಹಕ್ಕು ನಾವು ಪ್ರಶ್ನೆ ಮಾಡ ಬೇಕು

ದಯಾನಂದ ಕೊಯಿಲಾ: ಭ್ರಷ್ಟಾಚಾರಿಗಳು ತಮ್ಮ ಕೃತ್ಯಗಳನ್ನು ಸಾರ್ವಜನಿಕರ ಗಮನಕ್ಕೆ ಬರುವಂತೆ ಮಾಡುತ್ತಾರೆಯೇ? ಶವದ ಮೇಲಿನ ಬಟ್ಟೆ ಯನ್ನೂ ಲಪಟಾಯಿಸಬಯಸುವ ಈ ಕಾಲದಲ್ಲಿ.

ಮಹಾಲಿಂಗ ಅಮಲಿಂಗ: ರಾಜಕಾರಣದಲ್ಲಿ ಯಾರೂ ಸತ್ಯವಂತರಲ್ಲ ಎಲ್ಲ ಲೂಟಿ ಕೋರರು ಏಕೆಂದರೆ ಮುಂದಿನ ಬಾರಿ ಚುನಾವಣೆಯಲ್ಲಿ ಬ್ಯಾನರ್ ಬಂಟಿಂಗ್ಸ್ ಏನು ಹಾಕದೆ ಸಂತ್ಯವಂತರ ತರ ಮತ ಕೇಳಿ ಗೆದ್ದು ಬರಲಿ

Advertisement

Udayavani is now on Telegram. Click here to join our channel and stay updated with the latest news.

Next