Advertisement
ಮೊದಲ ದಿನ ಭೋಜನ ವಿರಾಮದ ಬಳಿಕ ಪಂದ್ಯ ಮೊದಲ್ಗೊಂಡು 11.5 ಓವರ್‌ಗಳಿಗೆ ಸೀಮಿತಗೊಂಡರೆ, ಎರಡನೇ ದಿನದಾಟ ಭೋಜನ ವಿರಾಮದೊಳಗೇ ಮುಗಿಯಿತು. ಆಡಲು ಸಾಧ್ಯವಾದದ್ದು ಬರೀ 21 ಓವರ್ ಮಾತ್ರ. ಆಗ ಭಾರತ 74 ರನ್ನಿಗೆ 5 ವಿಕೆಟ್ ಕಳೆದುಕೊಂಡಿತ್ತು. ಶನಿವಾರವೂ ಕೋಲ್ಕತಾದಲ್ಲಿ ಮಳೆ ಮುಂದು ವರಿಯುವ ಸೂಚನೆ ಇದೆ.
ಇಂಥ ಸ್ಥಿತಿಯಲ್ಲಿ ಕ್ರೀಸ್ ಆಕ್ರಮಿಸಿಕೊಂಡು, ತಾಳ್ಮೆ ಹಾಗೂ ಎಚ್ಚರಿಕೆಯಿಂದ ಹೇಗೆ ಬ್ಯಾಟಿಂಗ್ ನಡೆಸಬೇಕೆಂದು ತೋರಿಸಿಕೊಟ್ಟ ಚೇತೇಶ್ವರ್ ಪೂಜಾರ 47 ರನ್ ಬಾರಿಸಿ ಅಜೇಯರಾಗಿ ಉಳಿದಿ ದ್ದಾರೆ. ರಕ್ಷಣಾತ್ಮಕ ಆಟದ ರಾಯಭಾರಿಯೇ ಆಗಿರುವ ಪೂಜಾರ ಈಗಾಗಲೇ 102 ಎಸೆತಗಳನ್ನು ನಿಭಾಯಿಸಿದ್ದು, 9 ಬೌಂಡರಿ ಬಾರಿಸಿದ್ದಾರೆ. ಇವರು ಬ್ಯಾಟಿಂಗ್ ಹೋರಾಟವನ್ನು ಜಾರಿಯಲ್ಲಿರಿಸಿದ್ದು ಭಾರತದ ಸರದಿಯ ಹೆಚ್ಚುಗಾರಿಕೆ. ಪೂಜಾರ 8 ರನ್ನಿನಿಂದ ಬ್ಯಾಟಿಂಗ್ ಮುಂದುವರಿಸಿದ್ದರು. ಇನ್ನು 3 ರನ್ ಮಾಡಿದರೆ ಪೂಜಾರ ಪಾಲಿಗೆ ಅದೊಂದು ಸ್ಮರಣೀಯ ಅರ್ಧ ಶತಕವಾಗಲಿದೆ.
Related Articles
Advertisement
ಕೆಣಕಿದ ಶಣಕ ಕೇವಲ 2ನೇ ಟೆಸ್ಟ್ ಆಡುತ್ತಿರುವ ದಸುನ್ ಶಣಕ ಭಾರತದ ಬ್ಯಾಟಿಂಗ್ ಸರದಿಯನ್ನು ಕೆಣಕತೊಡಗಿದರು. ತನ್ನ 3ನೇ ಓವರಿನಲ್ಲಿ ಅಜಿಂಕ್ಯ ರಹಾನೆ ವಿಕೆಟ್ ಕಿತ್ತು ಭಾರತಕ್ಕೆ ಆಘಾತವಿಕ್ಕಿದರು. ರಹಾನೆ ಅವರನ್ನು ಡ್ರೈವ್ ಮಾಡಲು ಪ್ರೇರೇಪಿಸಿದಾಗ ಬ್ಯಾಟಿಗೆ ಸವರಿ ಹೋದ ಚೆಂಡು ನೇರವಾಗಿ ಕೀಪರ್ ಡಿಕ್ವೆಲ್ಲ ಕೈಸೇರಿತು. ರಹಾನೆ 4 ರನ್ನಿಗಾಗಿ 21 ಎಸೆತ ಎದುರಿಸಿದರು. ಇದರಲ್ಲಿ ಒಂದು ಬೌಂಡರಿ ಇತ್ತು. ರಹಾನೆ ನಿರ್ಗಮಿಸುವಾಗ ಭಾರತದ ಸ್ಕೋರ್‌ಬೋರ್ಡ್ 30 ರನ್ ತೋರಿಸುತ್ತಿತ್ತು. ಬಳಿಕ ಪೂಜಾರ-ಅಶ್ವಿನ್ ಸೇರಿಕೊಂಡು ಸುಮಾರು 8 ಓವರ್‌ಗಳ ತನಕ ಲಂಕಾ ದಾಳಿಯನ್ನು ತಡೆದು ನಿಂತರು. ಸ್ಕೋರ್ ಅಂತೂ ಇಂತೂ 26 ಓವರ್‌ಗಳಲ್ಲಿ ಐವತ್ತಕ್ಕೆ ಮುಟ್ಟಿತು. ಆಗ ಶಣಕ ಈ ಜೋಡಿಯನ್ನು ಬೇರ್ಪಡಿಸಿದರು. ಪಾಯಿಂಟ್ ವಿಭಾಗದಲ್ಲಿದ್ದ ಕರುಣರತ್ನೆ, ಅಶ್ವಿನ್ ಅವರ ಕ್ಯಾಚ್ ಪಡೆದರು. ಅಶ್ವಿನ್ ಎದುರಿಸಿದ್ದು 29 ಎಸೆತ, ಹೊಡೆದದ್ದು ಒಂದು ಬೌಂಡರಿ. ಮೊದಲ ದಿನ ಎಲ್ಲ 6 ಓವರ್ ಮೇಡನ್ ಮಾಡಿ ಒಂದೂ ರನ್ ನೀಡದೆ 3 ವಿಕೆಟ್ ಉಡಾಯಿಸಿದ್ದ ಸುರಂಗ ಲಕ್ಮಲ್‌ಗೆ 2ನೇ ದಿನದಾಟದಲ್ಲಿ ಯಾವುದೇ ಯಶಸ್ಸು ಸಿಗಲಿಲ್ಲ. ಆದರೆ ಆತಿಥೇಯರ ಮೇಲೆ ನಿಯಂತ್ರಣ ಹೇರುವುದನ್ನು ನಿಲ್ಲಿಸಲಿಲ್ಲ. ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್
ಕೆ.ಎಲ್. ರಾಹುಲ್ ಸಿ ಡಿಕ್ವೆಲ್ಲ ಬಿ ಲಕ್ಮಲ್ 0
ಶಿಖರ್ ಧವನ್ ಬಿ ಲಕ್ಮಲ್ 8
ಚೇತೇಶ್ವರ್ ಪೂಜಾರ ಬ್ಯಾಟಿಂಗ್ 47
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಲಕ್ಮಲ್ 0
ಅಜಿಂಕ್ಯ ರಹಾನೆ ಸಿ ಡಿಕ್ವೆಲ್ಲ ಬಿ ಶಣಕ 4
ಆರ್. ಅಶ್ವಿನ್ ಸಿ ಕರುಣರತ್ನೆ ಬಿ ಶಣಕ 4
ವೃದ್ಧಿಮಾನ್ ಸಾಹಾ ಬ್ಯಾಟಿಂಗ್ 6 ಇತರ 5
ಒಟ್ಟು (5 ವಿಕೆಟಿಗೆ) 74
ವಿಕೆಟ್ ಪತನ: 1-0, 2-13, 3-17, 4-30, 5-50. ಬೌಲಿಂಗ್:
ಸುರಂಗ ಲಕ್ಮಲ್ 11-9-5-3
ಲಹಿರು ಗಾಮಗೆ 11.5-3-24-0
ದಸುನ್ ಶಣಕ 8-2-23-2
ದಿಮುತ್ ಕರುಣರತ್ನೆ 2-0-17-0 ಎಕ್ಸ್‌ಟ್ರಾ ಇನ್ನಿಂಗ್ಸ್ ಭಾರತ ತವರಿನ ಟೆಸ್ಟ್‌ನಲ್ಲಿ 2010ರ ಬಳಿಕ ಮೊದಲ ಸಲ 50 ರನ್ನಿಗೆ 5 ವಿಕೆಟ್ ಕಳೆದುಕೊಂಡಿತು. ಅಂದು ನ್ಯೂಜಿಲ್ಯಾಂಡ್ ಎದುರಿನ ಅಹ್ಮದಾಬಾದ್ ಟೆಸ್ಟ್‌ನಲ್ಲಿ ಭಾರತ ಈ ಸಂಕಟಕ್ಕೆ ಸಿಲುಕಿತ್ತು. ಒಟ್ಟಾರೆಯಾಗಿ ಭಾರತ ತವರಿನಲ್ಲಿ 17ನೇ ಸಲ, ಕಳೆದ 30 ವರ್ಷಗಳಲ್ಲಿ 5ನೇ ಸಲ 50 ರನ್ನಿಗೆ ಮೊದಲ 5 ವಿಕೆಟ್ ಉದುರಿಸಿಕೊಂಡಿತು. ಸುರಂಗ ಲಕ್ಮಲ್ 46 ಡಾಟ್ ಬಾಲ್‌ಗಳ ಬಳಿಕ ಮೊದಲ ರನ್ ನೀಡಿದರು. 2001ರ ಬಳಿಕ ಇದು ಬೌಲರ್ ಓರ್ವನ ಅತ್ಯುತ್ತಮ ಮಿತವ್ಯಯ ಸಾಧನೆಯಾಗಿದೆ. ಆಸ್ಟ್ರೇಲಿಯ ವಿರುದ್ಧದ 2015ರ ಕಿಂಗ್‌ಸ್ಟನ್ ಪಂದ್ಯದಲ್ಲಿ ವಿಂಡೀಸಿನ ಜೆರೋಮ್ ಟಯ್ಲರ್ 40 ಡಾಟ್ ಬಾಲ್‌ಗಳ ಬಳಿಕ ಮೊದಲ ರನ್ ನೀಡಿದ್ದರು.