Advertisement
ಶಿಬಿರದಲ್ಲಿ ಶುಕ್ರವಾರ ನಡೆದ ಕುಟುಂಬದ ದಿನ ಕಾರ್ಯಕ್ರಮದಲ್ಲಿ 60 ಮಂದಿ ಜೋಡಿಗಳಿಗೆ ಮಂತ್ರಘೋಷಣೆಗಳ ಮಧ್ಯೆ ಸಾವಿರಾರು ಮಂದಿ ಅಕ್ಷತೆ ಹಾಕಿ ಹರಸಿದರು.
ಮದ್ಯಪಾನ ಎಂಬ ವ್ಯಸನಕ್ಕೆ ದಾಸರಾಗಿ ಬದುಕಿನ ಅರ್ಥವನ್ನೆ ಕಳಕೊಂಡ 60 ವ್ಯಸನಿಗಳು ಮದ್ಯವರ್ಜನ ಶಿಬಿರ ಸೇರಿ ಎಂಟು ದಿನಗಳಲ್ಲಿ ಸರಿದಾರಿಗೆ ಮರಳಿದ್ದರು. ಶಿಬಿರದ ಅಂತಿಮ ದಿನ ಸತಿ-ಪತಿಯರನ್ನು ಒಂದುಗೂಡಿಸಿ ಉತ್ತಮ ಜೀವನಕ್ಕೆ ಕಾಲಿರಿಸುವಂತೆ ಮಾಡಲು ಮದುವೆ ಸಂಭ್ರಮದಂತೆ ನಡೆದ ಕುಟುಂಬ ದಿನದ ಆ ಕ್ಷಣದ ಕಾರ್ಯಕ್ರಮ ವ್ಯಸನಮುಕ್ತರನ್ನು ಭಾವುಕರನ್ನಾಗಿಸಿತು. ಮೂಢನಂಬಿಕೆ, ಕಾಯಿಲೆ
ಪ್ರೇತ, ಭೂತ, ದೈವಕ್ಕೆ ಮೊರೆ ಹೋದವರು 17 ಮಂದಿ, ಕೆಮ್ಮು, ದಮ್ಮು ಔಷ ಧಿಗೆಂದು ಮದ್ಯ ಸೇವಿಸುತ್ತಿದ್ದ ಇಬ್ಬರು, ಬಾಣಂತಿಗೆ ಹೆಂಗಸಿಗೆ ಹೊಡೆದವರು 2, ಮಾಟ ಮಂತ್ರ ಪ್ರಭಾವಕ್ಕೆ ಒಳಗಾಗಿ ಕುಡಿತ ಬಿಡಿಸಲು ಪ್ರಯತ್ನಿಸಿದವರು 21 ಮಂದಿ, ಸಾರಾಯಿ ಅಂಗಡಿಯಲ್ಲಿದ್ದು ಕುಡಿತ ಕಲಿತವರು 5 ಮಂದಿ. ಅನಧಿಕೃತ ಕಳ್ಳಭಟ್ಟಿ ಸೇವನೆಯಲ್ಲಿ ತೊಡಗಿದ್ದವರು 7 ಮಂದಿ ಹಾಗೂ ರೌಡಿಸಂನಲ್ಲಿ ಭಾಗಿಯಾದವರು 5 ಮಂದಿ ಶಿಬಿರಾರ್ಥಿಗಳಲ್ಲಿ ಸೇರಿದ್ದರು. ಈ ಪೈಕಿ ಬೆಳಗ್ಗೆ ಎದ್ದೊಡನೆ ಕುಡಿಯುವ ಚಟ ಹೊಂದಿದ್ದ 18 ಜನರೂ ಇದ್ದರು. ಪತ್ನಿಯ ಕರಿಮಣಿ ಸರ ಮಾರಿ ಆ ದುಡ್ಡಿನಲ್ಲಿ ಕುಡಿಯುತ್ತಿದ್ದ 19 ಜನರಿದ್ದರು. ಮಕ್ಕಳಿಂದ ಮದ್ಯ ತರಿಸಿ ಕುಡಿಯುವವರೂ ಇದ್ದರು. ಬೇರೆಯವರಲ್ಲಿ ಹಣ ಕೇಳಿ ಕುಡಿಯುತ್ತಿದ್ದವರೂ 29 ಜನರಿದ್ದರು. ಅಪರಾಧ ಪ್ರಕರಣಗಳಲ್ಲಿ ಸಿಲುಕಿದ ಕೆಲವರೂ ಕುಡಿತದ ಚಟ ಅಂಟಿಸಿಕೊಂಡಿದ್ದರು. ಕುಡಿತಕ್ಕೆ ಹಣ ಹೊಂದಿಸಲು ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿದ್ದರು.
Related Articles
Advertisement
ಗಾಂಜಾಕ್ಕೂ ಬಲಿಕುಡಿತದೊಂದಿಗೆ ಬೀಡಿ, ಸಿಗರೇಟು, ತಂಬಾಕು, ನಶ್ಯ ಗುಟ್ಕಾ ಇತ್ಯಾದಿ ವ್ಯಸನಗಳಿಗೆ 59 ಮಂದಿ ಒಳಗಾಗಿದ್ದರು. ಇಬ್ಬರು ಗಂಧದ ಕಳ್ಳ ವ್ಯಾಪಾರದಲ್ಲಿ ಭಾಗಿಯಾಗಿದ್ದರು. ಏಳು ಜನ ಗಾಂಜಾ ಸೇವಿಸುತ್ತಿದ್ದರೆ, ಒಬ್ಬರು ಚರಸ್ ಬಳಸುತ್ತಿದ್ದರು. ಈಗ ಅವರೆಲ್ಲ ಹೊಸ ಬದುಕಿನ ತುಡಿತದಲ್ಲಿದ್ದಾರೆ. 60 ಶಿಬಿರಾರ್ಥಿಗಳು
ಎಂಟು ದಿನಗಳು ನಡೆದ ಶಿಬಿರದಲ್ಲಿ ಉತ್ತಮ ಚಿಕಿತ್ಸೆ, ಆಧ್ಯಾತ್ಮ ಚಿಂತನೆ ಹಾಗೂ ಯೋಗಶಿಕ್ಷಣ ಪಡೆದುಕೊಂಡು
ಹೊಸ ಜೀವನಕ್ಕೆ ಕಾಲಿಟ್ಟರು. ಹೊಸ ಬದುಕು ಕಟ್ಟಲು ಸತಿಪತಿಗಳಿಂದ ಈ ದಿನ ಪ್ರತಿಜ್ಞೆ ಮಾಡಿಸಲಾಯಿತು. ಶಿಬಿರಾರ್ಥಿಗಳಲ್ಲಿ 18 ವರ್ಷದಿಂದ 63 ವರ್ಷದ ವಯಸ್ಸಿನವರಿದ್ದರು. ಮದುವೆ ಆಗದವರು 20 ಮಂದಿ, ಮದುವೆ ಆದವರು 40 ಮಂದಿ, ಒಂದೇ ಕುಟುಂಬದವರು 12 ಮಂದಿ ಶಿಬಿರಾರ್ಥಿಗಳಾಗಿದ್ದರು. ಮರಳಿ ಬದುಕಿಗೆ
ವ್ಯಸನಕ್ಕೆ ಬಲಿಯಾದ ಅದೆಷ್ಟೋ ಮಂದಿಗೆ ಮರಳಿ ಬದುಕು ಕೊಟ್ಟಿರುವುದು ಮದ್ಯವರ್ಜನ ಶಿಬಿರದ ಮೂಲ ಉದ್ದೇಶ
ಈಡೇರಿಸಿದೆ.
– ದಿವಾಕರ ಪೂಜಾರಿ
ಶಿಬಿರಾಧಿಕಾರಿ ಹೊಸ ಅಧ್ಯಾಯ
ಶಿಬಿರ ನನ್ನನ್ನು ಹೊಸ ವ್ಯಕ್ತಿಯಾಗಿ ರೂಪಿಸಿದೆ. ಜೀವನದ ಹೊಸ ಅಧ್ಯಾಯ ಇಂದಿನಿಂದ ಆರಂಭಗೊಂಡಿದೆ.
-ನಿತೀಶ್‌ಕುಮಾರ್ ಬಾಳುಗೋಡು
ಶಿಬಿರಾರ್ಥಿ