Advertisement
ನಗರದ ಡಾ| ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನÒನ್ ಸೆಂಟರ್ನಲ್ಲಿ ಮಂಗಳೂರಿನ ಕೆಎಂಸಿಯ ಎಆರ್ಒಐಯು ಮತ್ತು ಎಆರ್ಒಐ ಕರ್ನಾಟಕ ವಿಭಾಗದ ವತಿಯಿಂದ ಶುಕ್ರವಾರ ಅಸೋಸಿಯೇಶನ್ ಆಫ್ ರೇಡಿಯೇಷನ್ ಆಂಕಾಲಜಿಸ್ಟ್ ಆಫ್ ಇಂಡಿಯಾದ 44ನೇ ವಾರ್ಷಿಕ ಸಮ್ಮೇಳನ “ಆ್ಯರೋಕಾನ್-2024′ ಉದ್ಘಾಟಿಸಿ ಅವರು ಮಾತನಾಡಿದರು.
Related Articles
ಸಶಸ್ತ್ರಬಲದ ವೈದ್ಯಕೀಯ ಸೇವಾ ವಿಭಾಗದ ಮಹಾನಿರ್ದೇಶಕಿ ವೈಸ್ ಆಡ್ಮಿರಲ್ ಡಾ| ಆರ್ತಿ ಸರೀನ್ ಮಾತನಾಡಿ, ಕ್ಯಾನ್ಸರ್ ಚಿಕಿತ್ಸೆ ಹಾಗೂ ಸಂಶೋಧನೆಯಿಂದ ರೋಗ ಪತ್ತೆ ಬೇಗ ಆಗುವುದರಲ್ಲಿ ಕೃತಕ ಬುದ್ಧಿ ಮತ್ತೆಯೂ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಆ ಮೂಲಕ ಚಿಕಿತ್ಸೆ ಹಾಗೂ ಶುಶ್ರೂಷೆಯಲ್ಲಿ ವೈದ್ಯರು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ರೋಗಿಗಳಿಗೆ ಸಲಹೆ ನೀಡುವ ಹಾಗೂ ಅವರ ಹತ್ತಿರವಾಗುವ ಮಾನವೀಯ ಉಪಕ್ರಮಗಳಲ್ಲಿ ಪರಿಣತಿ ಪಡೆಯಬೇಕು ಎಂದರು.
Advertisement
ಸಂಘಟನಾ ಅಧ್ಯಕ್ಷ ಡಾ| ಎಂ.ಎಸ್.ಅತಿಮಾಯನ್ ಸ್ವಾಗತಿಸಿದರು. ಎಆರ್ಒಐ ನೂತನ ಅಧ್ಯಕ್ಷ ಡಾ|ಎಸ್.ಎನ್.ಸೇನಾಪತಿ, ಎಆರ್ಒಐ ಚೇರ್ಮನ್ ಡಾ|ರಾಜೇಶ್ ವಶಿಷ್ಠ, ಮಾಹೆ ಸಹ ಕುಲಪತಿ ಡಾ| ಎಚ್.ಎಸ್.ಬಲ್ಲಾಳ್, ಎಆರ್ಒಐ ಹಾಲಿ ಅಧ್ಯಕ್ಷ ಡಾ|ಮನೋಜ್ ಗುಪ್ತ, ಕಾರ್ಯದರ್ಶಿ ಡಾ| ವಿ.ಶ್ರೀನಿವಾಸನ್, ಐಸಿಆರ್ಒ ಚೇರ್ಮನ್ ಡಾ|ರಾಕೇಶ್ ಕಪೂರ್, ಕೆಎಂಸಿ ಮಂಗಳೂರಿನ ಡೀನ್ ಡಾ| ಬಿ.ಉಣ್ಣಿಕೃಷ್ಣನ್ ಉಪಸ್ಥಿತರಿದ್ದರು.
ಮಣಿಪಾಲದಲ್ಲಿ ನೋವು ನಿವಾರಕ ಆಸ್ಪತ್ರೆಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್ ಮಾತನಾಡಿ, ಕ್ಯಾನ್ಸರ್ ಚಿಕಿತ್ಸೆ ಹಾಗೂ ಆರೈಕೆಯಲ್ಲಿ ನೋವು ನಿವಾರಣೆಯೂ ಒಂದು ಅವಿಭಾಜ್ಯ ಅಂಗವಾಗಿದೆ. ಅದನ್ನು ಪರಿಗಣಿಸಿ ಮಣಿಪಾಲದಲ್ಲಿ ಮಾಹೆ ವತಿಯಿಂದ ರೋಗಿಗಳಿಗಾಗಿ ಉಚಿತ 100 ಹಾಸಿಗೆಯ ನೋವು ನಿವಾರಕ ಘಟಕ ಆಸ್ಪತ್ರೆಯನ್ನು ಆರಂಭಿಸಲಾಗುವುದು ಎಂದರು. 2025ರ ಎಪ್ರಿಲ್ಗೆ ಈ ಆಸ್ಪತ್ರೆ ಸಿದ್ಧಗೊಳ್ಳಲಿದೆ. ಇಲ್ಲಿ ಕ್ಯಾನ್ಸರ್ ರೋಗಿಗಳಿಗೆ ಹಾಗೂ ಇತರ ರೋಗಿಗಳಿಗೂ ನೋವು ನಿವಾರಣೆ ಆರೈಕೆ ನೀಡಲಾಗುವುದು. ಇದು ಉಚಿತವಾಗಿ ಸೇವಾರೂಪದಲ್ಲಿ ರೋಗಿಗಳನ್ನು ನೆರವಾಗಲಿದೆ ಎಂದು ತಿಳಿಸಿದರು.