ಚಿತ್ರದುರ್ಗ: ಪಿಎಸ್‌ಐ ನೇಮಕಾತಿ ಪರೀಕ್ಷೆಯ ನೋಟಿಫಿಕೇಷನ್ ರದ್ದು ಮಾಡಿಲ್ಲ. ಅದೇ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುವುದು. ಹೊಸಬರಿಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪಿಎಸ್‌ಐ ಹುದ್ದೆ ಪರೀಕ್ಷೆಯಲ್ಲೂ ಅಕ್ರಮ ನಡೆದಿದ್ದು ತನಿಖೆ ನಡೆಯುತ್ತಿದೆ. ಮರು ಪರೀಕ್ಷೆ ನಡೆಸಲಾಗುವುದು. ಸರ್ಕಾರದ ಆಡಳಿತಾತ್ಮಕ ದೃಷ್ಟಿಯಿಂದ ಎಡಿಜಿಪಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ರೈತರಿಂದ ರಾಗಿ ಖರೀದಿ ಕುರಿತು ಗುರುವಾರ ಕೇಂದ್ರ ಸಚಿವ ಪಿಯುಷ್ ಗೋಯಲ್ ಜತೆ ಮಾತನಾಡಿದ್ದೇನೆ. ನಮ್ಮ ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದಾರೆ.
ಇದನ್ನೂ ಓದಿ:ಉಳ್ಳಾಲ: ತಾಯಿಗೆ ಬೈದ ವಿಚಾರ; ಯುವಕನಿಗೆ ತಲವಾರಿನಿಂದ ಹಲ್ಲೆ
ಹೆಚ್ಚು ಖರೀ ದಿ ಮಾಡುವ ಅವಶ್ಯಕತೆಯಿದೆ ಎಂದು ಮನವರಿಕೆ ಮಾಡಿದ್ದೇನೆ. ತಾತ್ವಿಕವಾಗಿ ಒಪ್ಪಿದ್ದಾರೆ. ಅ ಧಿಕಾರಿಗಳ ಜತೆ ಚರ್ಚಿಸಿ, ಎರಡು ದಿನದಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.