Advertisement

ವಜಾಗೊಂಡಿದ್ದ100 ಜನ ನೌಕರರ ಮರು ನೇಮಕಾತಿ : ಸಾರಿಗೆ ಸಚಿವ ಬಿ.ಶ್ರೀರಾಮುಲು

02:18 PM Feb 10, 2022 | Team Udayavani |

ಬೆಂಗಳೂರು : ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ನೌಕರಿಯಿಂದ ವಜಾ ಮಾಡಿದ್ದ100 ಜನ ನೌಕರರನ್ನು ಮರು ನೇಮಕಾತಿ ಮಾಡಲಾಗುತ್ತಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

Advertisement

ಮುಷ್ಕರದಲ್ಲಿ ಸುಮಾರು ೧೬೧೦ ಜನ ಭಾಗಿಯಾಗಿ ತೊಂದರೆಗೀಡಾಗಿದ್ದರು.ಮುಷ್ಕರ ಪ್ರಾರಂಭ ಆಗೋದು ಸುಲಭ, ಆದರೆ ಪ್ರಾರಂಭದ ನಂತರ ಅದನ್ನು ನಿಲ್ಲಿಸಲು ಆಗಲ್ಲ.ಮರು ನೇಮಕ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ ನಿಮ್ಮ ಕುಟುಂಬವನ್ನು ನೋಡಿ ವಾಪಸ್ ತೆಗೆದುಕೊಳ್ಳುತ್ತಿದ್ದೇವೆ ಎಂದು ಸುದ್ದಿಗೋಷ್ಢಿಯಲ್ಲಿ ತಿಳಿಸಿದರು.

ನಿಮ್ಮ ಜೊತೆ ಮುಷ್ಕರ ಮಾಡಿದವರು ಓಡಿ ಹೋದರು. ಇಂದು‌ ನಿಮ್ಮ ಜೊತೆ ನಿಂತಿದ್ದು ಸರ್ಕಾರ. ಮುಖ್ಯ ಮಂತ್ರಿ ಅಣತಿ ಮೇರೆಗೆ ಇದೀಗ ಮರು ನೇಮಕಾತಿ ಆಗುತ್ತಿದೆ ಎಂದರು.

ಮತ್ತೆ ತಪ್ಪು ಮಾಡಲು ಹೋಗಬೇಡಿ.ಮುಂದಿನ ತಿಂಗಳಿಂದ ಸರಿಯಾದ ಸಂಬಳ ನೀಡುತ್ತೇವೆ.ಮತ್ತೆ ಮುಷ್ಕರ ಮಾಡುತ್ತೇವೆ ಅಂದ್ರೆ ನಾವ್ಯಾರೂ ಜೊತೆಯಲ್ಲಿ ಇರೋದಿಲ್ಲ.‌ಹಂತ ಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ. ಇಂದು 100 ನಾಳೆ 200 ಜನರನ್ನು ಮರು ನೇಮಕ ಮಾಡಲಾಗುತ್ತದೆಉಳಿದ ಎಲ್ಲರನ್ನೂ ಈ ತಿಂಗಳ ಒಳಗಾಗಿ ಮರು ನೇಮಕ ಮಾಡಲಾಗುತ್ತದೆ. ಅವರ ಬಳಿ ಕಾಂಪ್ರಮೈಸ್ ಪಿಟಿಷನ್, ಜಾಯಿಂಟ್ ಮೆಮೋ ಬರೆಸಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

ಮುಂದೆ ಯಾವುದೇ ಮುಷ್ಕರದಲ್ಲಿ ಭಾಗಿಯಾಗಬಾರದೆಂದು ಮುಚ್ಚಳಿಕೆ ಬರೆಸಿಕೊಂಡಿದ್ದೇವೆ.ಮುಂಬರುವ ದಿನಗಳಲ್ಲಿ ಮುಷ್ಕರದಲ್ಲಿ ಭಾಗಿಯಾಗುವಂತಿಲ್ಲ.ಬಸ್ ನಿಲ್ಲಿಸೋದು ಸೇರಿ ಯಾವುದೇ ತೊಂದರೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ವೋಲ್ವೋ 800 ಬಸ್ ಹಾಗೆಯೇ ನಿಂತಿದೆ. ಹಾಳಾದ ಬಸ್ ನಿಲ್ಲಿಸಿ ಸಿಟಿಯಲ್ಲಿ ವೋಲ್ವೋ ಬಸ್ ಓಡಿಸೋಣ. ಅದರ ದರ ಇಳಿಕೆ ಕೂಡ ಮಾಡಲಾಗಿದೆ. ಟಿಕೆಟ್ ದರ ಹೆಚ್ಚಳ ಸದ್ಯಕ್ಕೆ ಇಲ್ಲ .ಎರಡು ಬಸ್ ಬೆಂಕಿಗೆ ಆಹುತಿಯಾದ ಪ್ರಕರಣ.ವರದಿ ಕೊಡಲು ಅಧಿಕಾರಿಗಳಿಗೆ ಹೇಳಿದ್ದೇನೆ.ನಾಳೆ ವರದಿ ಬರಬಹುದು ಎಂದರು.

Advertisement

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಗೆ ನನ್ನ ನೇತೃತ್ವದಲ್ಲೇ ಹೋರಾಟ ಆರಂಭವಾಗಿದೆ.ಮೀಸಲು ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧವಿದೆ.ಮೀಸಲಾತಿ ವಿಚಾರದ ವರದಿ ನಮ್ಮ ಕೈ ಸೇರಿದ ಬಳಿಕ ಮುಂದಿನ ತೀರ್ಮಾನ. ಪ್ರತಿಭಟನೆ ಕೈ ಬಿಡುವಂತೆ ಸ್ವಾಮೀಜಿಗೆ ಮನವಿ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next