Advertisement
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು ಮೂರು ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿದರೆ, ಆರ್ ಸಿಬಿ ತಂಡವು ಏಳು ವಿಕೆಟ್ ಕಳೆದುಕೊಂಡು 262 ರನ್ ಗಳಿಸಿತು. ರೋಚಕ ಹೋರಾಟ ನಡೆಸಿದ ಆರ್ ಸಿಬಿ 25 ರನ್ ಅಂತರದ ಸೋಲು ಕಂಡಿತು.
Related Articles
Advertisement
22 ಸಿಕ್ಸರ್ಸ್: ಬೆಂಗಳೂರು ವಿರುದ್ಧ ಹೈದರಾಬಾದ್ 22 ಸಿಕ್ಸರ್‌ಗಳನ್ನು ಸಿಡಿಸಿತು. ಇದು ಐಪಿಎಲ್‌ನ ಇನ್ನಿಂಗ್ಸ್ ಒಂದರ ಅತ್ಯಧಿಕ ಸಿಕ್ಸ್ ದಾಖಲೆಯಾಗಿದೆ. ಇದಕ್ಕೂ ಮುನ್ನ 2013ರಲ್ಲಿ ಪುಣೆ ವಿರುದ್ಧ ಆರ್‌ಸಿಬಿ 21 ಸಿಕ್ಸ್ ಬಾರಿಸಿತ್ತು.
68 ರನ್: ಹೈದರಾಬಾದ್ ಎದುರು ಆರ್‌ಸಿಬಿ ವೇಗಿ ರೀಸ್ ಟಾಪ್ಲೆ 68 ರನ್ ನೀಡಿದರು. ಇದು ಐಪಿಎಲ್‌ನ 3ನೇ ಅತೀ ದುಬಾರಿ ಬೌಲಿಂಗ್ ಎನಿಸಿದೆ. 2018ರಲ್ಲಿ ಬಸಿಲ್ ಥಂಪಿ ಆರ್‌ಸಿಬಿ ವಿರುದ್ಧ 70 ರನ್ ನೀಡಿದ್ದರು.
81 ಬೌಂಡರಿ: ಹೈದ್ರಾಬಾದ್, ಆರ್‌ಸಿಬಿ ಪಂದ್ಯದಲ್ಲಿ 43 ಫೋರ್, 38 ಸಿಕ್ಸ್ ಸೇರಿ 81 ಬೌಂಡರಿ ದಾಖಲಾಯಿತು. ಇದು ಟಿ20 ಪಂದ್ಯಗಳಲ್ಲೇ ಜಂಟಿ ಗರಿಷ್ಠ ಬೌಂಡರಿಯಾಗಿದೆ.
ಆರ್‌ಸಿಬಿ ದಾಖಲೆ: 2ನೇ ಇನ್ನಿಂಗ್ಸ್‌ನಲ್ಲಿ ಅತ್ಯಂತ ಕಡಿಮೆ ರನ್ (49) ದಾಖಲಿಸಿದ ತಂಡ ಮತ್ತು ಗರಿಷ್ಠ ರನ್ (262) ದಾಖಲಿಸಿದ ತಂಡ ಎಂಬ ದಾಖಲೆ ಬರೆದಿದೆ.
23 ಎಸೆತದಲಿ 3 ಅರ್ಧಶತಕ: ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್, ಫಾಪ್ ಡು ಪ್ಲೆಸಿಸ್ ಮತ್ತು ಕ್ಲಾಸೆನ್ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಹೆಚ್ಚು ಜೊತೆಯಾಟ: ಈ ಪಂದ್ಯದಲ್ಲಿ ಏಳು 50+ ಜೊತೆಯಾಟಗಳು ದಾಖಲಾದವು. ಈ ಹಿಂದೆ ಯಾವುದೇ T20 ಪಂದ್ಯಗಳಲ್ಲಿ ಐದಕ್ಕಿಂತ ಹೆಚ್ಚು 50 ರನ್ ಜೊತೆಯಾಟ ಬರಲಿಲ್ಲ