Advertisement
ಈ ಗೆಲುವಿನಿಂದ ಆರ್‌ಸಿಬಿ ತಾನಾಡಿದ 12 ಪಂದ್ಯಗಳಿಂದ ಏಳರಲ್ಲಿ ಜಯ ಗಳಿಸಿ 14 ಅಂಕಗಳೊಂದಿಗೆ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಸೋಲನ್ನು ಕಂಡ ಹೈದರಾಬಾದ್ ತಂಡದ ಪ್ಲೇ ಆಫ್ಗೆ ತೇರ್ಗಡೆಯಾಗುವ ಸಾಧ್ಯತೆ ಸ್ವಲ್ಪಮಟ್ಟಿಗೆ ಕಠಿಣವಾಗಿದೆ.
Related Articles
AdvertisementKoo App
ಅನುಭವಿ ವಿರಾಟ ಕೊಹ್ಲಿ ಮತ್ತೆ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಅವರು ಸುಚಿತ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಫಾ ಡು ಪ್ಲೆಸಿಸ್ ಮತ್ತು ರಜತ್ ಪಾಟಿದಾರ್ ಅವರ ಶತಕದ ಜತೆಯಾಟದಿಂದಾಗಿ ಆರ್‌ಸಿಬಿ ಚೇತರಿಸಿಕೊಂಡಿತು. ಹೈದರಾಬಾದ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರಿಬ್ಬರು ಆಕರ್ಷಕವಾಗಿ ಆಡಿ ರಂಜಿಸಿದರು. ಪ್ಲೆಸಿಸ್ ಮತ್ತು ಪಾಟಿದಾರ್ 73 ಎಸೆತ ಎದುರಿಸಿ ಎರಡನೇ ವಿಕೆಟಿಗೆ 105 ರನ್ ಪೇರಿಸಿದರು. ಈ ಹಂತದಲ್ಲಿ 48 ರನ್ ಗಳಿಸಿದ ಪಾಟಿದಾರ್ ಮತ್ತೆ ಸುಚಿತ್‌ಗೆ ಬಲಿಯಾದರು. ಪಾಟಿದಾರ್ 38 ಎಸೆತ ಎದುರಿಸಿದ್ದು 4 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದ್ದರು. ಪ್ಲೆಸಿಸ್ ಆಬಳಿಕ ಮ್ಯಾಕ್ಸ್‌ವೆಲ್ ಜತೆ ಇನ್ನೊಂದು ಉತ್ತಮ ಜತೆಯಾಟ ನಡೆಸಿದರು. ಮೂರನೇ ವಿಕೆಟಿಗೆ ಅವರಿಬ್ಬರು 54 ರನ್ ಪೇರಿಸಿದರು. ಮ್ಯಾಕ್ಸ್‌ವೆಲ್ 24 ಎಸೆತಗಳಿಂದ 33 ರನ್ ಹೊಡೆದರು. ಕೊನೆ ಹಂತದಲ್ಲಿ ಪ್ಲೆಸಿಸ್ ಮತ್ತು ದಿನೇಶ್ ಕಾರ್ತಿಕ್ ಸ್ಫೋಟಕವಾಗಿ ಆಡಿದ್ದರಿಂದ ತಂಡದ ಮೊತ್ತ 190ರ ಗಡಿ ದಾಟುವಂತಾಯಿತು. ಫಾರೂಕಿ ಎಸೆದ ಅಂತಿಮ ಓವರಿನಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ್ದ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಿಂದ 1 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 30 ರನ್ ಗಳಿಸಿದರು. ಇನ್ನಿಂಗ್ಸ್ ಪೂರ್ತಿ ಆಡಿದ ನಾಯಕ ಪ್ಲೆಸಿಸ್ ಒಟ್ಟಾರೆ 50 ಎಸೆತ ಎದುರಿಸಿ 73 ರನ್ ಗಳಿಸಿ ಅಜೇಯರಾಗಿ ಉಳಿದರು. 8 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು. ಇದು ಅವರ ಮೂರನೇ ಅರ್ಧಶತಕವಾಗಿದೆ. ಸ್ಕೋರುಪಟ್ಟಿ
ರಾಯಲ್ ಚಾಲೆಂಜರ್ ಬೆಂಗಳೂರು – 20 ಓವರ್, 192/3 (ಡುಪ್ಲೆಸಿಸ್ 73, ರಜತ್ ಪಾಟಿದಾರ್ 48, ಜಗದೀಶ್ ಸುಚಿತ್ 30/2)
ಸನ್‌ರೈಸರ್ ಹೈದರಾಬಾದ್ - 125/10 19.2 ಓವ ರ್. (ರಾಹುಲ್ ತ್ರಿಪಾಠಿ 58, ಮಾರ್ಕ್‌ರಮ್ 21. ಹಸ ರಂಗ 18/5)
ಪಂದ್ಯಶ್ರೇಷ್ಠ: ವನಿಂದು ಹಸರಂಗ