Advertisement

ಡಬ್ಲ್ಯೂಪಿಎಲ್ ಚಾಲೆಂಜ್ ಗೆ ಆರ್ ಸಿಬಿ ರೆಡಿ; ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಸ್ಮೃತಿ

03:13 PM Mar 05, 2023 | Team Udayavani |

ಮುಂಬೈ: ವನಿತಾ ಪ್ರೀಮಿಯರ್ ಲೀಗ್ ನ ಎರಡನೇ ದಿನದ ಮೊದಲ ಪಂದ್ಯಕ್ಕೆ ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಸಜ್ಜಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ.

Advertisement

ಕೂಟದ ಹರಾಜಿನಲ್ಲೇ ಅತ್ಯಧಿಕ 3.40 ಕೋಟಿ ರೂ.ಗೆ ಮಾರಾಟಗೊಂಡ ಸ್ಮತಿ ಮಂಧನಾ, ಎಲ್ಲಿಸ್‌ ಪೆರ್ರಿ, ಹೀತರ್‌ ನೈಟ್‌, ಸೋಫಿ ಡಿವೈನ್‌, ಮರಿಜಾನ್‌ ಕಾಪ್‌, ಮೆಗಾನ್‌ ಶಟ್‌, ರಿಚಾ ಘೋಷ್‌… ಸಮಕಾಲೀನ ಶ್ರೇಷ್ಠರೆಲ್ಲ ಒಂದೇ ಫ್ರೇಮ್‌ನಲ್ಲಿ ಸೇರಿಕೊಂಡಿದ್ದಾರೆ.

ಇನ್ನೊಂದೆಡೆ ಡೆಲ್ಲಿ ಕೂಡ ಅಷ್ಟೇ ಬಲಿಷ್ಠವಾಗಿದೆ. 5 ಟಿ20 ವಿಶ್ವಕಪ್‌ ವಿಜೇತ ಆಸೀಸ್‌ ತಂಡದ ಸ್ಟಾರ್‌ ಆಟಗಾರ್ತಿ ಮೆಗ್‌ ಲ್ಯಾನಿಂಗ್‌ ಡೆಲ್ಲಿ ತಂಡದ ಸಾರಥಿಯಾಗಿದ್ದಾರೆ. ಇವರೊಂದಿಗೆ ಜೆಸ್‌ ಜೊನಾಸೆನ್‌, ಮರಿಜಾನ್‌ ಕಾಪ್‌, ಅಲೈಸ್‌ ಕ್ಯಾಪ್ಸಿ ಡೆಲ್ಲಿಯ ನಾಲ್ವರು ಪ್ರಮುಖ ವಿದೇಶಿ ಆಟಗಾರ್ತಿಯರು. ಡೆಲ್ಲಿ ಭಾರತೀಯ ಪ್ರತಿಭೆಗಳನ್ನು ಹೊಂದಿರುವ ತಂಡ. ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್‌, ಶಿಖಾ ಪಾಂಡೆ, ಪೂನಂ ಯಾದವ್‌, ಅರುಂಧತಿ ರೆಡ್ಡಿ, ತನಿಯಾ ಭಾಟಿಯಾ, ರಾಧಾ ಯಾದವ್‌, ಅಂಡರ್‌-19 ವಿಶ್ವಕಪ್‌ನಲ್ಲಿ ಮಿಂಚಿದ ತಿತಾಸ್‌ ಸಾಧು, ಜಮ್ಮು ಮತ್ತು ಕಾಶ್ಮೀರದ ಬಿಗ್‌ ಹಿಟ್ಟರ್‌ ಜಾಸಿಯಾ ಅಖ್ತರ್‌ ಅವರೆಲ್ಲ ತವರಿನ ಪ್ರಮುಖ ಆಟಗಾರ್ತಿಯರು.

ತಂಡಗಳು

ಬೆಂಗಳೂರು: ಸ್ಮೃತಿ ಮಂಧಾನ (ನಾ), ಸೋಫಿ ಡಿವೈನ್, ದಿಶಾ ಕಸಟ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿ.ಕೀ), ಹೀದರ್ ನೈಟ್, ಕನಿಕಾ ಅಹುಜಾ, ಆಶಾ ಶೋಬನಾ, ಪ್ರೀತಿ ಬೋಸ್, ಮೇಗನ್ ಶುಟ್, ರೇಣುಕಾ ಠಾಕೂರ್ ಸಿಂಗ್.

Advertisement

ಡೆಲ್ಲಿ: ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ (ನಾ), ಮರಿಝನ್ನೆ ಕಪ್, ಜೆಮಿಮಾ ರಾಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ವಿ.ಕೀ), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್

Advertisement

Udayavani is now on Telegram. Click here to join our channel and stay updated with the latest news.

Next