Advertisement

ರಾಜಸ್ಥಾನ್ ವಿರುದ್ಧ RCB ಜಯ : ಪ್ಲೇ ಆಫ್ ಗೆ  ಬೆಂಗಳೂರು ಸನಿಹ

08:25 AM Sep 30, 2021 | Team Udayavani |

ದುಬೈ: ಬುಧವಾರ ರಾತ್ರಿ ರಾಯಲ್‌ ಚಾಲೆಂಜರ್ಸ್‌ ಬೆಂಗ ಳೂರು ತಂಡ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಏಕಪಕ್ಷೀಯ ವಾಗಿ ಮಣಿಸಿದೆ. ಬೌಲಿಂಗ್‌, ಬ್ಯಾಟಿಂಗ್‌ ಎರಡರಲ್ಲೂ ಕೊಹ್ಲಿ ಪಡೆಯದ್ದೇ ಮೇಲುಗೈ. ಈ ಜಯದೊಂದಿಗೆ ಬೆಂಗಳೂರು ಪ್ಲೇ ಆಫ್ಗೇರುವುದು ಬಹು ತೇಕ ಖಚಿತವಾಗಿದೆ.

Advertisement

ಅಗ್ರ 2 ತಂಡಗಳಲ್ಲಿ ಒಂದಾಗುವುದೇ ಇನ್ನು ಬೆಂಗಳೂರಿನ ಗುರಿ. ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟಿಗೆ 149 ರನ್‌ ಪೇರಿಸಿತ್ತು. ಇದನ್ನು ಬೆನ್ನತ್ತಿದ ಬೆಂಗಳೂರು 17.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 153 ರನ್‌ ಗಳಿಸಿತು. ಬೆಂಗಳೂರು ಪರ ಗ್ಲೆನ್‌ ಮ್ಯಾಕ್ಸ್‌ವೆಲ್‌ (50), ಶ್ರೀಕರ್‌ ಭರತ್‌ (44) ಸ್ಫೋಟಕ ಬ್ಯಾಟಿಂಗ್‌ ಮಾಡಿದರು.

ರಾಜಸ್ಥಾನ್‌ ಸಾಮಾನ್ಯ ಮೊತ್ತ: ಟಾಸ್‌ ಸೋತು ಬ್ಯಾಟಿಂಗಿಗೆ ಆಹ್ವಾನ ಪಡೆದ ರಾಜಸ್ಥಾನ್‌ ರಾಯಲ್ಸ್‌ಗೆ ಆರಂಭಿಕರಾದ ಯಶಸ್ವಿ ಜೈಸ್ವಾಲ್‌ ಮತ್ತು ಎವಿನ್‌ ಲೆವಿಸ್‌ ಸ್ಫೋಟಕ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು.

ವಿಂಡೀಸ್‌ ತಾರೆ ಲೆವಿಸ್‌ ಪ್ರತಿ ಓವರ್‌ಗೆ ಸಿಕ್ಸರ್‌, ಬೌಂಡರಿ ಬಾರಿಸುವ ಮೂಲಕ ಬೆಂಗಳೂರು ಬೌಲರ್‌ಗಳನ್ನು ಕಾಡಲೆತ್ನಿಸಿದರು, ಅಂತೆಯೇ ಜೈಸ್ವಾಲ್‌ ರನ್‌ ಗಳಿಕೆಯೂ ಉತ್ತಮಲಯದಲ್ಲಿ ಸಾಗಿತು. ಇವರಿಬ್ಬರ ಉತ್ತಮ ಬ್ಯಾಟಿಂಗ್‌ನಿಂದ ಪವರ್‌ಪ್ಲೇ ಅವಧಿಯಲ್ಲಿ 56 ರನ್‌ ಕಲೆಹಾಕಿದ ರಾಜಸ್ಥಾನ್‌ ಉತ್ತಮ ಮೊತ್ತ ಪೇರಿಸುವ ಮುನ್ಸೂಚನೆ ನೀಡಿತು. ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗಿಗೆ ಮುಂದಾದ ಆರಂಭಿಕ ಜೋಡಿಯನ್ನು 8ನೇ ಓವರ್‌ನಲ್ಲಿ ಆಸೀಸ್‌ ವೇಗಿ ಡೇನಿಯೆಲ್‌ ಕ್ರಿಸ್ಟಿಯನ್‌ ಕೊನೆಗೂ ಬೇರ್ಪಡಿಸಿದರು.

22 ಎಸೆತಗಳಲ್ಲಿ 31 ರನ್‌ ಮಾಡಿದ ಜೈಸ್ವಾಲ್‌ ಸಿರಾಜ್‌ಗೆ ಕ್ಯಾಚ್‌ ನೀಡಿ ಔಟಾದರು. ಜೈಸ್ವಾಲ್‌ ಜತೆ ಮೊದಲ ವಿಕೆಟಿಗೆ 77 ರನ್‌ಗಳ ಜತೆಯಾಟ ನಿರ್ವಹಿಸಿದ ಎವಿನ್‌ ಲೆವಿಸ್‌ (58 ರನ್‌, 5 ಬೌಂಡರಿ, 3 ಸಿಕ್ಸರ್‌) ಜಾರ್ಜ್‌ ಗಾರ್ಟನ್‌ಗೆ ವಿಕೆಟ್‌ ಒಪ್ಪಿಸಿದರು.

Advertisement

ತಿರುಗಿ ಬಿದ್ದ ಬೆಂಗಳೂರು ಬೌಲರ್‌ಗಳು: ಒಂದು ಹಂತದಲ್ಲಿ ದಂಡಿಸುತ್ತಿದ್ದ ಬೆಂಗಳೂರು ಬೌಲರ್‌ಗಳು ಆರಂಭಿಕರ ವಿಕೆಟ್‌ ಕೆಡವಿದ ಬಳಿಕ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಆರಂಭಿಕ ಜೋಡಿಯ ಅಬ್ಬರದ ಬ್ಯಾಟಿಂಗ್‌ ಗಮನಿಸುವಾಗ ತಂಡದ ಮೊತ್ತ ಇನ್ನೂರರ ಗಡಿ ದಾಟುವ ಸೂಚನೆ ಇತ್ತಾದರೂ ಶಹಬಾಜ್‌ ಅಹ್ಮದ್‌, ಚಹಲ್‌ ಮತ್ತು ಕಳೆದ ಪಂದ್ಯದ ಹ್ಯಾಟ್ರಿಕ್‌ ಹೀರೋ ಹರ್ಷಲ್‌ ಪಟೇಲ್‌ ಅವರ ಕರಾರುವಾಕ್‌ ದಾಳಿಗೆ ರಾಜಸ್ಥಾನ್‌ ತಂಡದ ಆಟಗಾರರು ಉದುರತೊಡಗಿದರು.

ಮಹಿಪಾಲ್‌ ಲೊಮ್ರಾರ್‌ (3) ಮತ್ತು ಕಳೆದ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸಿದ್ದ ನಾಯಕ ಸಂಜು ಸ್ಯಾಮ್ಸನ್‌ (19), ರಾಹುಲ್‌ ತೆವಾತಿಯಾ (2) ರನ್‌ ಗಳಿಸಿ ಪೆವಿಲಿಯನ್‌ ಹಾದಿ ಹಿಡಿದರು. ಇದರ ಬೆನ್ನಲ್ಲೇ ಇಂಗ್ಲೆಂಡ್‌ನ‌ ಹಾರ್ಡ್‌ ಹಿಟ್ಟರ್‌ ಲಿವಿಂಗ್‌ಸ್ಟೋನ್‌ (6), ರಿಯಾನ್‌ ಪರಾಗ್‌ (9) ಅವರ ಬ್ಯಾಟಿಂಗ್‌ ವೈಫ‌ಲ್ಯ ಈ ಪಂದ್ಯದಲ್ಲಿಯೂ ವಿಸ್ತರಿಸಿತು. ಅಂತಿಮವಾಗಿ ರಾಜಸ್ಥಾನ್‌ 150 ರನ್‌ಗಳ ಗಡಿ ದಾಟಲೂ ಸಾಧ್ಯವಾಗಲಿಲ್ಲ. ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ್‌ 20 ಓವರ್‌, 149/9 (ಎವಿನ್‌ ಲೆವಿಸ್‌ 58, ಶಹಬಾಜ್‌ ಅಹ್ಮದ್‌ 10ಕ್ಕೆ 2, ಚಹಲ್‌ 18ಕ್ಕೆ 2). ಬೆಂಗಳೂರು 17.1 ಓವರ್‌, 153/3 (ಗ್ಲೆನ್‌ ಮ್ಯಾಕ್ಸ್‌ವೆಲ್‌ 50, ಶ್ರೀಕರ್‌ ಭರತ್‌ 44, ಮುಸ್ತಜುರ್‌ ರೆಹ್ಮಾನ್‌ 20ಕ್ಕೆ 2

Advertisement

Udayavani is now on Telegram. Click here to join our channel and stay updated with the latest news.

Next