Advertisement

ಗುಜರಾತ್‌ಗೆ ಗೆಲುವಿನ ಪಂಚ್‌

03:03 AM Apr 28, 2017 | Karthik A |

ಬೆಂಗಳೂರು: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ದಾಖಲಿಸಿದ ಗುಜರಾತ್‌ ಲಯನ್ಸ್‌ ತಂಡವು ಗುರುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಕೆಕೆಆರ್‌ ದಾಳಿಯಿಂದ ಕಂಗೆಟ್ಟಿದ್ದ ಆರ್‌ಸಿಬಿ ಗುಜರಾತ್‌ನ ದಾಳಿಗೂ ಉತ್ತರಿಸಲು ವಿಫ‌ಲವಾಗಿ ಮತ್ತೆ ಘೋರ ಬ್ಯಾಟಿಂಗ್‌ ವೈಫ‌ಲ್ಯ ಕಂಡಿತು. ಆದರೆ ಭಾರತೀಯ ಆಟಗಾರರ ಜವಾಬ್ದಾರಿಯ ಆಟದಿಂದಾಗಿ ತಂಡದ ಮೊತ್ತ ನೂರರ ಗಡಿ ದಾಟಿ 134 ರನ್ನಿಗೆ ಆಲೌಟಾಯಿತು. ಗೇಲ್‌, ಕೊಹ್ಲಿ ಮತ್ತು ಡಿ’ವಿಲಿಯರ್ಸ್ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದರು.

Advertisement


ಗೆಲ್ಲಲು ಸುಲಭ ಸವಾಲು ಪಡೆದ ಗುಜರಾತ್‌ ಆರನ್‌ ಫಿಂಚ್‌ ಅವರ ಭರ್ಜರಿ ಆಟದಿಂದಾಗಿ 13.5 ಓವರ್‌ಗಳಲ್ಲಿ 135 ರನ್‌ ಪೇರಿಸಿ ಜಯ ಸಾಧಿಸಿತು. 23 ರನ್ನಿಗೆ 2 ವಿಕೆಟ್‌ ಕಳೆದುಕೊಂಡ ಬಳಿಕ ರೈನಾ ಅವರನ್ನು ಸೇರಿಕೊಂಡ ಫಿಂಚ್‌ ಬಿರುಸಿನ ಆಟವಾಡಿ ತಂಡದ ರನ್‌ವೇಗ ಹೆಚ್ಚಿಸಿದರು. ಮೂರನೇ ವಿಕೆಟಿಗೆ 92 ರನ್‌ ಪೇರಿಸುವ ಮೂಲಕ ತಂಡದ ಗೆಲುವು ಖಚಿತಗೊಳಿಸಿದರು. 34 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 6 ಸಿಕ್ಸರ್‌ ನೆರವಿನಿಂದ 72 ರನ್‌ ಹೊಡೆದರು. 

ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆರ್‌ಸಿಬಿ ಆರಂಭದಲ್ಲಿಯೇ ಕುಸಿಯಿತು. ಕೊಹ್ಲಿ ಒಂದು ಸಿಕ್ಸರ್‌ ಬಾರಿಸಿದರೂ 22 ರನ್‌ ತಲುಪಿದ ವೇಳೆ ಥಂಪಿಗೆ ವಿಕೆಟ್‌ ಒಪ್ಪಿಸಿದರು. ಈ ಹಿಂದಿನ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದಿದ್ದ ಆ್ಯಂಡ್ರ್ಯೂ ಟೈ ಆಬಳಿಕ ಸತತ ಎರಡು ಎಸೆತಗಳಲ್ಲಿ ಗೇಲ್‌ ಮತ್ತು ಟ್ರ್ಯಾವಿಸ್‌ ಹೆಡ್‌ ಅವರ ವಿಕೆಟನ್ನು ಹಾರಿಸಿದಾಗ ಆರ್‌ಸಿಬಿ ಮತ್ತೆ ಘೋರ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಬಹುದೆಂದು ಭಾವಿಸಲಾಗಿತ್ತು.


ಸ್ಕೋರ್‌ ಪಟ್ಟಿ
ಆರ್‌ಸಿ ಬೆಂಗಳೂರು

ಕ್ರಿಸ್‌ ಗೇಲ್‌    ಸಿ ಕಾರ್ತಿಕ್‌ ಬಿ ಟೈ    8
ವಿರಾಟ್‌ ಕೊಹ್ಲಿ    ಸಿ ಫಿಂಚ್‌ ಬಿ ಥಂಪಿ    10
ಎಬಿ ಡಿ’ವಿಲಿಯರ್ಸ್    ರನೌಟ್‌    5
ಟ್ರ್ಯಾವಿಸ್‌ ಹೆಡ್‌    ಸಿ ರೈನಾ ಬಿ ಟೈ    0
ಕೇದಾರ್‌ ಜಾಧವ್‌    ಬಿ ಜಡೇಜ    31
ಮನ್‌ದೀಪ್‌ ಸಿಂಗ್‌    ಸಿ ಜಡೇಜ ಬಿ ಟೈ    8
ಪವನ್‌ ನೇಗಿ    ಸಿ ಥಂಪಿ ಬಿ ಸೋನಿ    32
ಸಾಮ್ಯುಯೆಲ್‌ ಬದ್ರಿ    ಸಿ ಕಿಶನ್‌ ಬಿ ಜಡೇಜ    3
ಶ್ರೀನಾಥ್‌ ಅರವಿಂದ್‌    ಸಿ ಮೆಕಲಮ್‌ ಬಿ ಫಾಕ್ನರ್‌    9
ಅಂಕಿತ್‌ ಚೌಧರಿ    ಔಟಾಗದೆ    15
ಯಜ್ವೇಂದ್ರ ಚಾಹಲ್‌    ರನೌಟ್‌    1

ಇತರ:    12
ಒಟ್ಟು  (20 ಓವರ್‌ಗಳಲ್ಲಿ ಆಲೌಟ್‌)    134

Advertisement

ವಿಕೆಟ್‌ ಪತನ: 1-22, 2-22, 3-22, 4-58, 5-60, 6-100, 7-105, 8-110, 9-133

ಬೌಲಿಂಗ್‌:
ನಾಥು ಸಿಂಗ್‌     2-0-8-0
ಬಾಸಿಲ್‌ ಥಂಪಿ    4-0-34-1
ಆ್ಯಂಡ್ರ್ಯೂ ಟೈ    4-0-12-3
ರವೀಂದ್ರ ಜಡೇಜ    4-0-28-2
ಅಂಕಿತ್‌ ಸೋನಿ    3-0-28-1
ಜೇಮ್ಸ್‌ ಫಾಕ್ನರ್‌    3-0-15-1

ಗುಜರಾತ್‌ ಲಯನ್ಸ್‌
ಇಶಾನ್‌ ಕಿಶನ್‌    ಎಲ್‌ಬಿಡಬ್ಲ್ಯು ಬದ್ರಿ    16
ಬಿ. ಮೆಕಲಮ್‌    ಸಿ ಡಿ’ವಿಲಿಯರ್ ಬಿ ಬದ್ರಿ    3
ಸುರೇಶ್‌ ರೈನಾ    ಔಟಾಗದೆ    34
ಆರನ್‌ ಫಿಂಚ್‌    ಸಿ ಡಿ’ವಿಲಿಯರ್ಸ್ ಬಿ ನೇಗಿ    72
ರವೀಂದ್ರ ಜಡೇಜ    ಔಟಾಗದೆ    2

ಇತರ:    8
ಒಟ್ಟು (13.5 ಓವರ್‌ಗಳಲ್ಲಿ 3 ವಿಕೆಟಿಗೆ)    135
ವಿಕೆಟ್‌ ಪತನ: 1-18, 2-23, 3-115

ಬೌಲಿಂಗ್‌:
ಸಾಮ್ಯುಯೆಲ್‌ ಬದ್ರಿ    3-0-29-2
ಶ್ರೀನಾಥ್‌ ಅರವಿಂದ್‌    3-0-19-0
ಅಂಕಿತ್‌ ಚೌಧರಿ        2-0-21-0
ಯಜ್ವೇಂದ್ರ ಚಾಹಲ್‌    3-0-29-0
ಪವನ್‌ ನೇಗಿ        2-0-24-1
ಟ್ರ್ಯಾವಿಸ್‌ ಹೆಡ್‌        0.5-0-11-0

ಪಂದ್ಯಶ್ರೇಷ್ಠ: ಆ್ಯಂಡ್ರ್ಯೂ ಟೈ

Advertisement

Udayavani is now on Telegram. Click here to join our channel and stay updated with the latest news.

Next