Advertisement

ಐಪಿಎಲ್‌ಗೆ ಆರ್‌ಸಿಬಿ ರೆಡಿ ಚೆನ್ನೈಗೆ ತೆರಳಿದ ವಿರಾಟ್‌ ಕೊಹ್ಲಿ ಪಡೆ

12:30 AM Mar 22, 2019 | Team Udayavani |

ಬೆಂಗಳೂರು: ಉದ್ಯಾನನಗರಿಯಲ್ಲಿ ಭರ್ಜರಿ ತಾಲೀಮು ನಡೆಸಿ 12ನೇ ಆವೃತ್ತಿ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌)ಗೆ ಸಿದ್ಧವಾಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿ ಶನಿವಾರ ಆತಿಥೇಯ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

Advertisement

ವಿರಾಟ್‌ ಕೊಹ್ಲಿ ಬಳಗ ಬೆಂಗಳೂರಿನಿಂದ ಗುರುವಾರ ಚೆನ್ನೈಗೆ ಪ್ರಯಾಣಿಸಿತು. ವಿಮಾನ ನಿಲ್ದಾಣಕ್ಕೆ  ತೆರಳುವ ಮೊದಲು ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರು ತಾವೇರಿದ್ದ ಬಸ್ಸಿನೊಳಗೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಕಪ್ತಾನ ಕೊಹ್ಲಿ ಇನ್ಸಾಗ್ರಾಮ್‌ನಲ್ಲಿ ಪ್ರಕಟಿಸಿ “ಆಫ್ ಟು ಚೆನ್ನೈ’ ಎಂದು ಬರೆದುಕೊಂಡಿದ್ದಾರೆ.

ಎನ್‌ಗಿಡಿ ಗಾಯಾಳು

ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಪಂದ್ಯಾವಳಿಯ ಆರಂಭಕ್ಕೂ ಮೊದಲೇ ಆಘಾತಕ್ಕೆ ಸಿಲುಕಿದೆ. ತಂಡದ ಪ್ರಮುಖ ವೇಗಿ, ದಕ್ಷಿಣ ಆಫ್ರಿಕಾದ ಲುಂಗಿಸಾನಿ ಎನ್‌ಗಿಡಿ ಗಾಯಾಳಾಗಿ ಕೂಟದಿಂದ ಹೊರಗುಳಿಯಲಿದ್ದಾರೆ. “ಪ್ರವಾಸಿ ಶ್ರೀಲಂಕಾ ಎದುರಿನ ಕೊನೆಯ ಏಕದಿನ ಸರಣಿಯ ವೇಳೆ ಎನ್‌ಗಿಡಿ ಪಾರ್ಶ್ವ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ಕೂಡಲೇ ಅವರು ಬೌಲಿಂಗ್‌ ನಿಲ್ಲಿಸಬೇಕಾಯಿತು. ವೈದ್ಯರು 4 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಮುಂಬರುವ ವಿಶ್ವಕಪ್‌ ದೃಷ್ಟಿಯಿಂದ ಎನ್‌ಗಿಡಿ ಶೀಘ್ರ ಚೇತರಿಸಿಕೊಳ್ಳಬೇಕಾದ ಅಗತ್ಯವಿದೆ’.

ಸೇನಾ ಕುಟುಂಬಕ್ಕೆ ಸಿಎಸ್‌ಕೆ ನೆರವು

Advertisement

ಹನ್ನೆರಡನೇ ಐಪಿಎಲ್‌ ಕೂಟದ ಆರಂಭಿಕ ಪಂದ್ಯದ ಟಿಕೆಟ್‌ ಮೊತ್ತವನ್ನು ಪುಲ್ವಾಮ ದುರಂತದಲ್ಲಿ ಮಡಿದ ಯೋಧರ ಕುಟುಂಬಕ್ಕೆ ನೀಡಲು ಚೆನ್ನೈ ಸೂಪರ್‌ ಕಿಂಗ್ಸ್‌ ನಿರ್ಧರಿಸಿದೆ. ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಇದರ ಚೆಕ್‌ ಹಸ್ತಾಂತರಿಸಲಿದ್ದಾರೆ ಎಂದು ತಂಡದ ಪ್ರಕಟನೆ ತಿಳಿಸಿದೆ.

ಶನಿವಾರ ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ 12ನೇ ಐಪಿಎಲ್‌ ಕೂಟ ಆರಂಭವಾಗ ಲಿದ್ದು, ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಗಳು ಮುಖಾಮುಖೀ ಯಾಗಲಿವೆ. ಪಂದ್ಯದ ಟಿಕೆಟ್‌ ಮೊದಲ ದಿನವೇ “ಸೋಲ್ಡ್‌ ಔಟ್‌’ ಆಗಿದೆ. “ಈ ಬಾರಿಯ ಉದ್ಘಾಟನಾ ಪಂದ್ಯವೆಂದರೆ ಅದು ಚೆನ್ನೈ ಪಾಲಿನ ಮೊದಲ ತವರು ಪಂದ್ಯವೂ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next